ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಪುರಸಭೆ ವ್ಯಾಪ್ತಿಯಲ್ಲಿ ಮಳೆಗಾಲದ ಸಮಯದಲ್ಲಿ ಅವಘಡಗಳನ್ನು ತಪ್ಪಿಸಲು ಮತ್ತು ಸಾರ್ವಜನಿಕರ ಸುರಕ್ಷತೆಗಾಗಿ ಕುಂದಾಪುರ ಪುರಸಭೆಯ ವತಿಯಿಂದ 24×7 ಕಾರ್ಯ ನಿರ್ವಹಿಸುವ ಸಹಾಯವಾಣಿ ಕೇಂದ್ರವನ್ನು ತೆರೆಯಲಾಗಿದೆ.
ಮಳೆಗಾಲದಲ್ಲಿ ಎದುರಾಗಬಹುದಾದ ಪ್ರವಾಹ, ಸಾಂಕ್ರಾಮಿಕ ರೋಗಗಳು ಮತ್ತು ಇತರೆ ತುರ್ತು ಪರಿಸ್ಥಿತಿಗಳನ್ನು ನಿಭಾಯಿಸಲು ಸಾರ್ವಜನಿಕರು ಸಹಾಯ ವಾಣಿ ಸಂಖ್ಯೆ: 08254-230410 ಕರೆ ಮಾಡಬಹುದಾಗಿದೆ.
ಇದಲ್ಲದೆ ಮಳೆಗಾಲದ ಸಂದರ್ಭದಲ್ಲಿ ಯಾವುದೇ ರೀತಿಯ ತುರ್ತು ಪರಿಸ್ಥಿತಿ ಎದುರಾದಲ್ಲಿ ಪುರಸಭೆಯ ಮುಖ್ಯಾಧಿಕಾರಿ ಮೊ.ಸಂಖ್ಯೆ: 9880034793, ಪರಿಸರ ಅಭಿಯಂತ ಮೊ.ಸಂಖ್ಯೆ: 7353255268, ಹಿರಿಯ ಆರೋಗ್ಯ ನಿರೀಕ್ಷಕರು ಮೊ. ಸಂಖ್ಯೆ: 6360027331 ಹಾಗೂ ಕಿರಿಯ ಅಭಿಯಂತ ಮೊ.ಸಂಖ್ಯೆ: 9902377287 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಕುಂದಾಪುರ ಪುರಸಭೆ ಮುಖ್ಯಾಧಿಕಾರಿಗಳ ಕಚೇರಿ ಪ್ರಕಟನೆ ತಿಳಿಸಿದೆ.
ಸಾರ್ವಜನಿಕರಲ್ಲಿ ಮನವಿ:
ಮಳೆಗಾಲದ ಸಮಯದಲ್ಲಿ ಸಾರ್ವಜನಿಕರು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಪುರಸಭೆ ಮನವಿ ಮಾಡಿಕೊಂಡಿದೆ.
ಅಪಾಯಕಾರಿ ಕಟ್ಟಡಗಳಿಂದ ದೂರವಿರಬೇಕು. ಮಳೆಯಿಂದಾಗಿ ಕುಸಿಯುವ ಹಂತದಲ್ಲಿರುವ ಹಳೆಯ ಗೋಡೆ ಅಥವಾ ಕಟ್ಟಡಗಳ ಆಸುಪಾಸಿನಲ್ಲಿ ಆಶ್ರಯ ಪಡೆಯಬಾರದು.
ವಿದ್ಯುತ್ ಕಂಬಗಳಿಂದ ಎಚ್ಚರವಾಗಿರಿ. ರಸ್ತೆ ಬದಿಯ ವಿದ್ಯುತ್ ಕಂಬಗಳು, ಟ್ರಾನ್ಸ್ ಫಾರ್ಮ‌್ರಗಳು ಹಾಗೂ ಜೋತಾಡುವ ವಿದ್ಯುತ್ ತಂತಿಗಳನ್ನು ಮುಟ್ಟಬಾರದು.
ಮರಗಳ ಕೆಳಗೆ ನಿಲ್ಲಬಾರದು. ಬಿರುಗಾಳಿ ಸಹಿತ ಭಾರೀ ಮಳೆ ಬರುವಾಗ ದೊಡ್ಡ ಮರಗಳು ಅಥವಾ ಜಾಹೀರಾತು ಫಲಕಗಳ (ಹೋರ್ಡಿಂಗ್ಸ್) ಕೆಳಗೆ ವಾಹನ ನಿಲ್ಲಿಸುವುದನ್ನು ತಪ್ಪಿಸಿ.
ತ್ಯಾಜ್ಯ ವಿಲೇವಾರಿ – ಒಣ ಮತ್ತು ಹಸಿ ಕಸವನ್ನು ಚರಂಡಿಗಳಿಗೆ ಎಸೆಯಬೇಡಿ. ಇದು ಚರಂಡಿ ಬ್ಲಾಕ್ ಆಗಿ ನೀರು ರಸ್ತೆಗೆ ನುಗ್ಗಲು ಕಾರಣವಾಗುತ್ತದೆ.
ಬೈಂದೂರು ಪ.ಪಂ: ಮುಂಗಾರು ಸಹಾಯವಾಣಿ
ಬೈಂದೂರು: ಬೈಂದೂರು ಪಟ್ಟಣ ಪಂಚಾಯತ್ ಮಳೆಗಾಲದ ಮುಂಜಾಗ್ರತ ಕ್ರಮವಾಗಿ ತುರ್ತು ಸಂದರ್ಭದಲ್ಲಿ ಈ ಕೆಳಕಂಡ ದೂರವಾಣಿಗೆ ಸಂಪರ್ಕಿಸುವಂತೆ ಬೈಂದೂರು ಪಟ್ಟಣ ಪಂಚಾಯತ್ ತಿಳಿಸಿದೆ. ಕಿರಿಯ ಆರೋಗ್ಯ ನಿರೀಕ್ಷಕರು ಸಂತೋಷ ಎಂ. ಡಿ. (ದೂರವಾಣಿ ಸಂಖ್ಯೆ:7019166640, ಸ್ಯಾನಿಟರಿ ಸೂಪರ್ ವೈಸರ್ ರವಿರಾಜ್ ನಾಯ್ಡ್: 9164075207 ಮತ್ತು ಕಚೇರಿ ದೂರವಾಣಿ ಸಂಖ್ಯೆ 08254-251058 ನ್ನು ಸಂಪರ್ಕಿಸಬಹುದು ಎಂದು ಪಟ್ಟಣ ಪಂಚಾಯತ್ ಪ್ರಕಟಣೆ ತಿಳಿಸಿದೆ.
















