ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಸ್ಥಳೀಯ ಹೋಟೆಲೊಂದರಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ವಿಶ್ರಾಂತಿ ಪಡೆಯುತ್ತಿದ್ದಾಗ ಅಸ್ವಸ್ಥಗೊಂಡು ಸಾವನ್ನಪ್ಪಿದ ಘಟನೆ ಸಾಸ್ತಾನದಲ್ಲಿ ಸಂಭವಿಸಿದೆ.
ಕಾವಾಡಿ ಗ್ರಾಮದ ನಿವಾಸಿ ಕರುಣಾಕರ ಪೂಜಾರಿ (60) ಮೃತಪಟ್ಟ ವ್ಯಕ್ತಿ.
ಅವರು ಜುಲೈ 23ರಂದು ಬೆಳಿಗ್ಗೆ ಎಂದಿನಂತೆ ಹೋಟೆಲ್‌ನಲ್ಲಿ ತಿಂಡಿ ತಯಾರಿಸಿದ ಬಳಿಕ, ತನಗೆ ಸುಸ್ತಾಗುತ್ತಿದೆ ಎಂದು ಸಹೋದ್ಯೋಗಿ ಬಳಿ ತಿಳಿಸಿ ವಿಶ್ರಾಂತಿ ಕೊಠಡಿಗೆ ತೆರಳಿದ್ದರು. ಬಹಳ ಸಮಯವಾದರೂ ಅವರು ಹೊರಗೆ ಬಾರದಿದ್ದಾಗ ಸಹೋದ್ಯೀಗಿಗಳು ಕರೆಯಲು ತೆರಳಿದ್ದಾರೆ.
ಈ ವೇಳೆ ಕರುಣಾಕರ ಅವರು ಯಾವುದೇ ಪ್ರತಿಕ್ರಿಯೆ ನೀಡದಿದ್ದಾಗ, ತಕ್ಷಣ ಅವರನ್ನು ಬ್ಯಹ್ಮಾವರ ಸರ್ಕಾರಿ ಆಸ್ಪತ್ರಗೆ ಕರೆದೊಯ್ಯಲಾಯಿತು. ಆದರೆ ಪರೀಕ್ಷಿಸಿದ ವೈದ್ಯರು ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
















