ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಸರಕಾರಿ ಕನ್ನಡ ಮಾಧ್ಯಮ ಶಾಲೆಗಳ ಉಳಿವಿಗೆ ಕರಾವೇ ನಿರಂತರವಾಗಿ ಕಾರ್ಯೋನ್ಮುಖವಾಗಿದ್ದು ಈ ನಿಟ್ಟಿನಲ್ಲಿ ವಿವಿಧ ಜಿಲ್ಲೆಗಳಲ್ಲಿ ಈ ಬಗ್ಗೆ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದು ಕರಾವೇ ಉಡುಪಿ ಜಿಲ್ಲಾ ಗೌರವಾಧ್ಯಕ್ಷ ಅನ್ಸಾರ್ ಅಹಮದ್ ಹೇಳಿದರು.
ಅವರು ಶುಕ್ರವಾರ ಇಲ್ಲಿನ ಹಂಗಾರಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ (ದೂಳಂಗಡಿ) ಇಲ್ಲಿಗೆ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಕುಮಾರ್ ಶೆಟ್ಟಿ ಬಣ) ಉಡುಪಿ ಜಿಲ್ಲೆ ಹಾಗೂ ಕರವೇ ಮಹಿಳಾ ಘಟಕದ ವತಿಯಿಂದ ಎಲ್ ಕೆಜಿ ಯುಕೆಜಿ ಮಕ್ಕಳಿಗೆ ಕುರ್ಚಿ, ಟೇಬಲ್, ಆಟಿಕೆ ಪರಿಕರ ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸರಕಾರಿ ಶಾಲೆ ಎಂಬ ಕೀಳರಿಮೆ ಸಲ್ಲ ಬದಲಾಗಿ ಆಯಾ ಭಾಗಗಳ ಕನ್ನಡ ಮಾಧ್ಯಮ ಶಾಲೆಗಳ ಉಳಿಸುವ ಕಾರ್ಯವನ್ನು ದಾನಿಗಳು ಸಂಘಸಂಸ್ಥೆಗಳ ಮೂಲಕ ಆಗಲಿ ಎಂದರಲ್ಲದೆ ಕರ್ನಾಟಕ ರಕ್ಷಣಾ ವೇದಿಕೆ ಈ ಕಾರ್ಯದಲ್ಲಿ ನಿರತವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕರವೇ ರಾಜ್ಯ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ ಅವರ ನೇತೃತ್ವ ಹಾಗೂ ರಾಜ್ಯ ಸಂಚಾಲಕರಾದ ಸಿ.ಎಮ್. ಪ್ರಸನ್ನ ಕುಮಾರ್ ಶೆಟ್ಟಿ ಕರಾವೇ ಮಹಿಳಾ ಘಟಕದಿಂದ ನೀಡಲಾದ ಶಾಲಾ ಎಲ್ ಕೆ.ಜಿ ಯುಕೆಜಿ ಮಕ್ಕಳಿಗೆ ಅನುಕೂಲಕರವಾದ ಕುರ್ಚಿ, ಟೆಂಬಲ್, ಆಟಿಕೆಗಳನ್ನು ಶಾಲಾ ಮುಖ್ಯ ಶಿಕ್ಷಕಿ ಪ್ರಸಿಲ್ಲಾ ರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಶಾಲಾ ವತಿಯಿಂದ ಕರಾವೇ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ದೇವಕಿ ಬಾರ್ಕೂರು ಅವರನ್ನು ಸನ್ಮಾನಿಸಲಾಯಿತು.
ರಾಜ್ಯ ಸಂಚಾಲಕ ಪ್ರಸನ್ನ ಕುಮಾರ್ ಶೆಟ್ಟಿ ಅಧ್ಯಕ್ಷತೆಯನ್ನು ವಹಿಸಿದ್ದರು. ಉಡುಪಿ ಜಿಲ್ಲಾಧ್ಯಕ್ಷರಾದ ಸುಧೀರ್ ಪೂಜಾರಿ, ಶಾಲಾ ಎಸ್ ಡಿ ಎಂ ಸಿ ಉಪಾಧ್ಯಕ್ಷೆ ಉಷಾ, ಕರಾವೇ ಜಿಲ್ಲಾ ಉಪಾಧ್ಯಕ್ಷ ನಿಜಾಮ್, ಪ್ರಧಾನಕಾರ್ಯದರ್ಶಿ ವಿರೇಶ್, ಶಾಲಾ ವಿಜ್ಞಾನ ಶಿಕ್ಷಕಿ ವೀಣಾ ಶೆಟ್ಟಿ, ಉಷಾರಾಣಿ ಸೇರಿದಂತೆ ಸಹಶಿಕ್ಷಕರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಕರಾವೇ ಸುಮಾ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.
















