ಕುಂದಾಪ್ರ ಡಾಟ್ ಕಾಂ ಸುದಿದ.
ಕೋಟ: ರೋಟರಿ ಜಿಲ್ಲೆ 3182 ಪ್ರಾಯೋಚಿತ 150 ಇಂಟರಾಕ್ಟ್ ಕ್ಲಬ್‌ಗಳ ಜಿಲ್ಲಾ ಇಂಟರಾಕ್ಟ್ ಪ್ರತಿನಿಧಿಯಾಗಿ ಕೋಟದ ವಿವೇಕ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿನಿಯಾದ ಸೃಷ್ಟಿ ಅವರನ್ನು ಆಯ್ಕೆ ಮಾಡಲಾಗಿದೆ.
ಯಕ್ಷಗಾನ, ನೃತ್ಯ ರಂಗನಟನೆ, ನಿರೂಪಣೆ,ಕ್ರೀಡೆ ಮೊದಲಾದ ಕ್ಷೇತ್ರಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಬಹುಮುಖಿ ಪ್ರತಿಭಾವಂತಳಾದ ಈಕೆ ಯನ್ನು ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಇಂಟರಾಕ್ಟ್ ಸಭಾಪತಿ ರೋಟೆರಿಯನ್ ಸುರೇಶ್ ಬೇಳೂರು ಪೂರ್ವ ಸಭಾಪತಿ ಗಣೇಶ ಶೆಟ್ಟಿ ಕೋಟ ಸಾಲಿಗ್ರಾಮದ ರಾಜೇಂದ್ರ ಸುವರ್ಣ ಅವರು ಹಾಗೂ ಬಾಲಕಿಯರ ಪ್ರೌಢಶಾಲೆಯ ಇಂಟರಾಕ್ಟ್ ಸಂಚಾಲಕರಾದ ನರೇಂದ್ರ ಕುಮಾರ್ ಕೋಟ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.











