Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಯುವ ಜನತೆ ರಾಷ್ಟ್ರೀಯ ಸಂಗೀತದತ್ತ ಒಲವು ತೋರಿಸುವಂತೆ ಪ್ರೇರಣೆ ಅಗತ್ಯ: ಪೂರ್ಣಿಮಾ
    ಊರ್ಮನೆ ಸಮಾಚಾರ

    ಯುವ ಜನತೆ ರಾಷ್ಟ್ರೀಯ ಸಂಗೀತದತ್ತ ಒಲವು ತೋರಿಸುವಂತೆ ಪ್ರೇರಣೆ ಅಗತ್ಯ: ಪೂರ್ಣಿಮಾ

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್‌ ಕಾಂ ಸುದ್ದಿ.
    ಕುಂದಾಪುರ:
    ʼವಿದ್ಯಾರ್ಥಿಗಳು, ಯುವ ಜನರು ರಾಷ್ಟ್ರೀಯ ಸಂಗೀತದ ಬಗ್ಗೆ ಒಲವು ತೋರಿಸುವಂತೆ ಅವರಿಗೆ ಪ್ರೇರಣೆ ನೀಡುವ ಅಗತ್ಯವಿದೆ. ಒಮ್ಮೆಈ ಸಂಗೀತದ ರುಚಿ ಹತ್ತಿದರೆ ಅವರೇ ಆಸಕ್ತಿಯಿಂದ ಪಾಲ್ಗೊಳ್ಳುತ್ತಾರೆ ಎಂದು ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಪೂರ್ಣಿಮಾ ಹೇಳಿದರು.

    Click Here

    Call us

    Click Here

    ಅವರು ಸಂಗೀತ ಭಾರತಿ ಟ್ರಸ್ಟ್ರ ರಿ. ಕುಂದಾಪುರದ ಪಾರಿಜಾತ ಹೋಟೆಲ್‌ನ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಏರ್ಪಡಿಸಿದ ಗ್ರೀಷ್ಮ ಸಂಗೀತ ಮಹೋತ್ಸವ ಜ್ಯೋತಿ ಬೆಳಗಿ ಉದ್ಘಾಟಿಸಿದರು.

    ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಗೀತ, ನೃತ್ಯ, ಜನಪದ ಕಲೆ ರಂಗ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ. ನೊಂದಾಯಿತ ಸಂಘ ಸಂಸ್ಥೆಗಳು, ವಾರ್ಷಿಕ ಲೆಕ್ಕ ಪತ್ರಗಳು ಸರಿ ಇದ್ದರೆ ವಿವಿಧ ಚಟುವಟಿಕೆ ನಡೆಸುತ್ತಿದ್ದರೆ ನೇರವಾಗಿ ಸರಕಾರದ ಸೇವಾ ಸಿಂಧು ಪೋರ್ಟಲ್ ಮೂಲಕವೇ ಕಾರ್ಯಕ್ರಮಕ್ಕಾಗಿ ನೆರವು ಕೋರಿ ಅರ್ಜಿ ಸಲ್ಲಿಸಬಹುದು. ಕುಂದಾಪುರದ ಸಂಗೀತ ಭಾರತಿ ಟ್ರಸ್ಟ್ ರಿ. 3 ದಶಕಗಳಿಂದ ನಿರಂತರ ಕಾರ್ಯಕ್ರಮ ನಡೆಸುತ್ತಿದ್ದು, ಯುವ ಕಲಾ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತಿರುವುದು ಅಭಿನಂದನೀಯ’ ಎಂದರು.

    ಖ್ಯಾತ ಪಿಟೀಲು ವಾದಕಿ ಚೈತಾಲಿ ಶೇವಲಿಕರ್, ಹಿಂದುಸ್ತಾನಿ ಶಾಸ್ತ್ರೀಯ ಗಾಯಕ ಸಮೀರ ಕುಲಕರ್ಣಿ, ತಬಲಾ ಕಲಾವಿದ ಸುಮಿತ್ ನಾಯಕ್ ಹಾಗೂ ಹಾರ್ಮೋನಿಯಂ ಕಲಾವಿದ ಅಜಯ್ ಹೆಗ್ಡೆಯವರು ಎರಡು ಗಂಟೆಗಳ ಕಾಲ ಉತ್ತಮ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟು ಮೆಚ್ಚುಗೆಗೆ ಪಾತ್ರರಾದರು. ಕಲಾವಿದೆ ಹಿರಣ್ಮಾಯಿ ಎಸ್. ತಾಳವಾದ್ಯದಲ್ಲಿ ಸಹಕರಿಸಿದರು.

    ಸಂಗೀತ ಭಾರತಿ ಟ್ರಸ್ಟ್ ರಿ. ಕಾರ್ಯದರ್ಶಿ ನಾರಾಯಣ ಕೆ. ವಿಶ್ವಸ್ಥರಾದ ಎ.ಎಸ್.ಎನ್. ಹೆಬ್ಬಾರ್, ಸುಬ್ರಾಯ ಹಾಲಂಬಿ, ಸೀತಾರಾಮ ನಕ್ಕತ್ತಾಯ, ಡಾ. ಎಚ್. ಆರ್. ಹೆಬ್ಬಾರ್, ಶ್ರೀಮತಿ ಸುಪ್ರಸನ್ನ ನಕ್ಕತ್ತಾಯ ಅತಿಥಿಗಳನ್ನು ಗೌರವಿಸಿದರು.

    Click here

    Click here

    Click here

    Call us

    Call us

    ರಾಮಮೋಹನ ಕಾರಂತ ಮುಂಬೈ, ಕೆ. ಶಾಂತಾರಾಮ ಪ್ರಭು ಕುಂಭಾಸಿ, ಡಾ. ಕಾಶೀನಾಥ ಪೈ ಗಂಗೊಳ್ಳಿ ಕಲಾವಿದರನ್ನು ಗೌರವಿಸಿದರು.

    ವಿಶ್ವಸ್ಥರಾದ ಯು. ಎಸ್. ಶೆಣೈ ಸ್ವಾಗತಿಸಿದರು. ಕುಂದಾಪುರ ಭಂಡಾರ್‌ಕಾರ‍್ಸ್ ಕಾಲೇಜಿನ ಸಮುದಾಯ ಬಾನುಲಿ ಕೇಂದ್ರದ ನಿರೂಪಕಿ ಜ್ಯೋತಿ ಸಾಲಿಗ್ರಾಮ ಅತಿಥಿಗಳನ್ನು ಪರಿಚಯಿಸಿದರು. ನಾರಾಯಣ ಕುಂದಾಪುರ ವಂದಿಸಿದರು.

    kundapura
    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ವಿದ್ಯಾರಣ್ಯ ಶಾಲೆಯ ವಿದ್ಯಾರ್ಥಿಗಳು ಕರಾಟೆ ಪಂದ್ಯಾಟದಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

    04/08/2026

    ಮಣೂರು ಪಡುಕರೆ: ಇಂಟರ್ಯಾಕ್ಟ್ ಕ್ಲಬ್ ಪದಗ್ರಹಣ ಸಮಾರಂಭ

    04/08/2026

    ತೆಕ್ಕಟ್ಟೆ: ದಿನಸಿ ಅಂಗಡಿಯಲ್ಲಿ ಅಗ್ನಿ ಅವಘಡ – 40 ಲಕ್ಷ ರೂ.ಗೂ ಅಧಿಕ ನಷ್ಟ

    04/08/2026
    Leave A Reply Cancel Reply

    sixteen + 9 =

    Call us

    Click Here

    Call us

    Call us

    Call us
    Highest Viewed Recently
    • ವಿದ್ಯಾರಣ್ಯ ಶಾಲೆಯ ವಿದ್ಯಾರ್ಥಿಗಳು ಕರಾಟೆ ಪಂದ್ಯಾಟದಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ
    • ಮಣೂರು ಪಡುಕರೆ: ಇಂಟರ್ಯಾಕ್ಟ್ ಕ್ಲಬ್ ಪದಗ್ರಹಣ ಸಮಾರಂಭ
    • ಅಲ್ಪಸಂಖ್ಯಾತ ವಿದ್ಯಾರ್ಥಿಗಳ ದೂರ ಶಿಕ್ಷಣ ಪ್ರವೇಶಾತಿ: ಅರ್ಜಿ ಸಲ್ಲಿಕೆ – ಅವಧಿ ವಿಸ್ತರಣೆ
    • ತೆಕ್ಕಟ್ಟೆ: ದಿನಸಿ ಅಂಗಡಿಯಲ್ಲಿ ಅಗ್ನಿ ಅವಘಡ – 40 ಲಕ್ಷ ರೂ.ಗೂ ಅಧಿಕ ನಷ್ಟ
    • ಕೋಟ: ಕ್ರೆಡಿಟ್ ಕಾರ್ಡ್‌ ಅಪ್‌ಡೇಟ್‌ ಹೆಸರಿನಲ್ಲಿ ಮಹಿಳೆಗೆ 1.99 ಲಕ್ಷ ರೂ. ವಂಚನೆ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.