ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಅಖಂಡ ಭಾರತಕ್ಕಾಗಿ ಒಂದೆಡೆ ಹೋರಾಟಗಳು ತೀವ್ರಗೊಳ್ಳುತ್ತಿದೆ. ಇತ್ತ ಕಾಕ್ರೋಚ್ ಗಳೆಂಬ ಮುತಾಂದ ಶಕ್ತಿಗಳು ದೇಶವನ್ನು ವಿಭಜಿಸುವ ಷ್ಯಡಂತರ ಮಾಡುತ್ತಿದೆ. ಇದಕ್ಕೆ ಈ ದೇಶದ ಹಿಂದೂಗಳು ಅವಕಾಶ ನೀಡುವುದಿಲ್ಲ. ಯಾವ ಸ್ವಾತಂತ್ರ್ಯ ಪೂರ್ವದಲ್ಲಿ ಮುಸ್ಲಿಂ ಲೀಗ್ ಈ ದೇಶವನ್ನು ಅಸ್ಥಿರಗೊಳಿಸಿ ತುಂಡಾಗಲು ಕಾರಣಿಭೂತರಾದರೋ ಅದೇ ತುಂಡಾದ ದೇಶಗಳು ಮತ್ತೆ ಅಖಂಡ ಭಾರತಕ್ಕಾಗಿ ಹಪಹಪಿಸುವ ಸನ್ನಿವೇಶವು ಎದುರಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಆದರ್ಶ ಕೆಲ ಹೇಳಿದರು.
ಅವರು ಭಾನುವಾರ ಕೋಟದಲ್ಲಿ ಹಿಂದೂ ಜಾಗರಣ ವೇದಿಕೆ ಕೋಟ ಆಶ್ರಯದಲ್ಲಿ ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಬೃಹತ್ ‘ಪಂಜಿನ ಮೆರವಣಿಗೆ’ಮತ್ತು ಸಭಾ ಕಾರ್ಯಕ್ರಮದಲ್ಲಿ ದಿಕ್ಸೂಚಿ ಮಾತನಾಡಿದರು. ದೇಶ ಒಡೆಯುವ ಹುನ್ನಾರಕ್ಕೆ ಈ ಹಿಂದೂ ಸಮಾಜ ಸಿಡಿದ್ದೆದ್ದು ನಿಲ್ಲಲಿದೆ ಅಲ್ಲದೆ ಯಾವ ಅಸ್ಥಿರಗೊಂಡ ವಿಚಾರಗಳು ಮತ್ತೆ ಒಂದುಗೂಡಲು ಆರಂಭಿದೆ ಇದಕ್ಕೆ ಇತ್ತೀಚಿಗಿನ ವಂದೇ ಮಾತರಂ ಗೀತೆಯೇ ಸಾಕ್ಷಿ ಎಂದು ಇನ್ನು ಕೆಲವೆ ವರ್ಷಗಳಲ್ಲಿ ತುಂಡುತುಂಡಾದ ನಮ್ಮ ಅಖಂಡತೆಯ ಕನಸು ನನಾಸಗಲಿದೆ ಬಲಿಷ್ಠ ಭಾರತ ಈ ಹಿಂದೂ ಧರ್ಮದ ಪ್ರತೀಕ ಎಂಬುವುದನ್ನು ತೋರ್ಪಡಿಸಲಿದೆ ಎಂದರು. .
ಸಭಾ ಕಾರ್ಯಕ್ರಮವನ್ನು ಕೋಟ ಮಹತೋಭಾರ ಶ್ರೀ ಹಿರೇಮಹಾಲಿಂಗೇಶ್ವರ ದೇವಸ್ಥಾನ ಕೋಟ ಇದರ ಆಡಳಿತ ಮುಖ್ಯಸ್ಥ ಹಲಸಿನಕಟ್ಟೆ ಅನಂತಪದ್ಮನಾಭ ಐತಾಳ್ ದೀಪ ಬೆಳಗಿಸಿ ಉದ್ಘಾಟಿಸಿದರು.
ಸಭಾಧ್ಯಕ್ಷತೆಯನ್ನು ಹಿಂದೂ ಜಾಗರಣಾ ವೇದಿಕೆ ಕೋಟ ಘಟಕದ ಅಧ್ಯಕ್ಷ ಪವನ್ ಕುಂದರ್ ವಹಿಸಿದ್ದರು.
ಸಾಲಿಗ್ರಾಮದಲ್ಲಿ ಪಂಜಿನ ಮೆರವಣಿಗೆ ಚಾಲನೆ:
ಸಾಲಿಗ್ರಾಮದ ಶ್ರೀ ಗುರುನರಸಿಂಹ ಹಾಗೂ ಶ್ರೀ ಆಂಜನೇಯ ದೇವಸ್ಥಾನದಲ್ಲಿ ಪಂಜಿಗೆ ಕೋಟ ಸಿ ಎ ಬ್ಯಾಂಕ್ ನಿರ್ದೇಶಕ ರಘು ಮಧ್ಯಸ್ಥ ಪಾರಂಪಳ್ಳಿ ಜ್ಯೋತಿ ಪ್ರಜ್ವಲಿಸಿದರು.
ಅಲ್ಲಿಂದ ಹೊರಟ ಪಂಜಿನ ಮೆರವಣಿಗೆ ವಿವಿಧ ಘೋಷ ವಾಕ್ಯಗಳೊಂದಿಗೆ ಕೋಟ ಬಸ್ ನಿಲ್ದಾಣದವರೆಗೆ ತಲುಪಿತು.ನೂರಾರು ಹಿಂದೂ ಕಾರ್ಯಕರ್ತರು ಮೆರವಣಿಗೆಯಲ್ಲಿ ಸಾಕ್ಷಿಯಾದರು.ಜಾಗರಣಾ ವೇದಿಕೆಯ ಜ್ಞಾನೇಶ್ ಆಚಾರ್ ಪ್ರತಿಜ್ಞಾವಿಧಿ ಭೋಧಿಸಿದರು.
ಕಾರ್ಯಕ್ರಮವನ್ನು ಮಂಜುನಾಥ ಆಚಾರ್ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.
















