ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಬೆಂಗಳೂರಿನ ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸುತ್ತಿರುವ ಡಾ. ಲಕ್ಷ್ಮೀ ಐತಾಳ್ ಅವರನ್ನು ಹೊಸಾಡು ಮುಳ್ಳಿಕಟ್ಟೆಯ ಶ್ರೀ ಗಣೇಶ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಶ್ರೀ ಗಣೇಶ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಸದಸ್ಯೆ, ಸಂಘದ ಅಧ್ಯಕ್ಷ ಮರಳೀಧರ ಐತಾಳ್ ಮತ್ತು ಗೀತಾ ಐತಾಳ್ ದಂಪತಿಯ ಪುತ್ರಿಯಾಗಿರುವ ಡಾ. ಲಕ್ಷ್ಮೀ ಐತಾಳ್ ಅವರು ಜೋಧಪುರದ ಎಐಐಎಂಎಸ್ ಸಂಸ್ಥೆಯಲ್ಲಿ ಮಕ್ಕಳ ಶಸ್ತ್ರ ಚಿಕಿತ್ಸಾ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕ ಗಳಿಸಿದ್ದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶ್ವಿನಿ, ಸಿಬ್ಬಂದಿಗಳಾದ ಶ್ರೀಕರ ಐತಾಳ್, ಪ್ರದೀಪ ಮಯ್ಯ, ವಸೂಲಾತಿ ಅಧಿಕಾರಿ ಬಿ.ಜಿ. ಆಚಾರ್ ಉಪಸ್ಥಿತರಿದ್ದರು. ಸಂಘದ ಸಲಹೆಗಾರ ಎಸ್. ವಿ. ಐತಾಳ್ ಕಾರ್ಯಕ್ರಮ ನಿರ್ವಹಿಸಿದರು.











