Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ವೇಗವಾಗಿ ಮರೆಯುವ ಕಾಲದಲ್ಲಿ ಸಂತೋಷ್ ಕೋಟ ಸಂಸ್ಮರಣೆ ನೆನಪಿಸುವ ಕಾರ್ಯ ಶ್ಲಾಘನೀಯ: ನರೇಂದ್ರ ಕುಮಾರ್ ಕೋಟ
    ಊರ್ಮನೆ ಸಮಾಚಾರ

    ವೇಗವಾಗಿ ಮರೆಯುವ ಕಾಲದಲ್ಲಿ ಸಂತೋಷ್ ಕೋಟ ಸಂಸ್ಮರಣೆ ನೆನಪಿಸುವ ಕಾರ್ಯ ಶ್ಲಾಘನೀಯ: ನರೇಂದ್ರ ಕುಮಾರ್ ಕೋಟ

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್‌ ಕಾಂ ಸುದ್ದಿ.
    ಕೋಟ:
    ಈ ಸಮಾಜದಲ್ಲಿ ಯಾವುದೇ ವಸ್ತು ಕಳೆದುಕೊಂಡಾಗ ವೇಗವಾಗಿ ಮರೆತು ಬಿಡುವ ಕಾಲದಲ್ಲಿ ಸಂತೋಷ್ ಮೇಷ್ಟ್ರ್ ಹೆಸರನ್ನು ಸದಾಕಾಲ ನೆನಪುಳಿಯುವಂತೆ ಮಾಡುವ ಪಂಚವರ್ಣ ಕಾರ್ಯವೈಕರಿಗೆ ಮೆಚ್ಚುಗೆ ಸೂಚಿಸುತ್ತೇನೆ ಎಂದು ಸಾಹಿತಿ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ನರೇಂದ್ರ ಕುಮಾರ್ ಕೋಟ ಹೇಳಿದರು.

    Click Here

    Call us

    Click Here

    ಅವರು ಬುಧವಾರ ಕೋಟದ ಪಂಚವರ್ಣ ಕಛೇರಿಯಲ್ಲಿ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಇಂಡಿಕಾ ಕಲಾಬಳಗ ಪಡುಕರೆ, ಜೈ ಹಿಂದ್ ಕ್ರಿಕೆಟಸ್೯ ಪಡುಕರೆ ಇವರ ಸಹಯೋಗದೊಂದಿಗೆ ನೆನಪಿನಂಗಳದಿ ಸಂತೋಷ್ ಮೇಷ್ಟ್ರು ಸಂಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಅವರ ಸಾಹಿತ್ಯಿಕ ಬದುಕು ಸೇರಿದಂತೆ ಅವರ ವಿವಿಧ ಕ್ಷೇತ್ರಗಳ ಆಯಾಮಗಳ ಕಾರ್ಯವೈಕರಿಯನ್ನು ನೆನಪಿಸುವ ಅಥವಾ ಅದರ ಬಗ್ಗೆ ಅಧ್ಯಯನದ ಮೂಲಕ ಒಂದೆಡೆ ರೂಪುಗೊಳಿಸಿ ಅವರ ಹೆಸರಿನಲ್ಲಿ ಉದಯೋನ್ಮುಖ ಸಾಹಿತಿಗಳ ಗುರುತಿಸುವ ಯೋಚನೆಗೆ ಬಣ್ಣ ಬಡಿಯುವ ಕಾರ್ಯ ಮಾಡೋಣ  ಎಂದರಲ್ಲದೆ ಸಾಹಿತ್ಯಿಕ ಕ್ಷೇತ್ರದ ದಿನಗಳಲ್ಲಿ ನನ್ನ ಅವರ ಒಡನಾಟವನ್ನು ಸಂಸ್ಮರಣೆಯಲ್ಲಿ  ತಿಳಿಯ ಪಡಿಸಿದರು.

    ಸಭೆಯಲ್ಲಿ ಇದೇ ಬರುವ ಅಗಸ್ಟ್ 30ರಂದು ಜೈಹಿಂದ್ ಕ್ರಿಕೆಟಸ್ಸ್೯ ಪಡುಕರೆ ಸಾರಥ್ಯದಲ್ಲಿ ಸಂತೋಷ್ ಮೇಷ್ಟ್ರು ನೆನಪಿನಂಗಳದಿ ಬೃಹತ್ ರಕ್ತದಾನ ಹಾಗೂ ಆರೋಗ್ಯ ತಪಾಸಣಾ ಶಿಬಿರದ ಬಗ್ಗೆಗಿನ ಪೋಸ್ಟರ್ ಅನ್ನು ಅನಾವರಣಗೊಳಿಸಲಾಯಿತು.

    ಇಂಡಿಕಾ ಕಲಾ ಬಳಗದ ಅಧ್ಯಕ್ಷ ಎಂ ಜಯರಾಮ ಶೆಟ್ಟಿ ಮಣೂರು ಅವರ ಭಾವಚಿತ್ರಕ್ಕೆ ಪುಷ್ಭನಮನ ಸಲ್ಲಿಸಿ ದೀಪ ಪ್ರಜ್ವಲಿಸಿದರು. ಕೋಟ ಮಹತೋಭಾರ ಶ್ರೀ ಹಿರೇಮಹಾಲಿಂಗೇಶ್ವರ ದೇಗುಲದ ಟ್ರಸ್ಟಿ  ಕೃಷಿಕರಾದ ಭಾಸ್ಕರ ಶೆಟ್ಟಿ,ದಸಂಸ ಕೋಟ ಹೋಬಳಿಯ ಪ್ರಮುಖರಾದ ರಾಜು ಬೆಟ್ಟಿನಮನೆ ಸಂತೋಷ್ ಜೀವನ ನಡೆದುಬಂದ ದಾರಿಗಳನ್ನು ಅವಲೋಕಿಸಿದರು.

    Click here

    Click here

    Click here

    Call us

    Call us

    ಸಭೆಯಲ್ಲಿ ಪಂಚವರ್ಣ ಸಂಘಟನೆಯ ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಮನೋಹರ್ ಪೂಜಾರಿ,ಜೈಹಿಂದ್ ಕ್ರಿಕೆಟಸ್ಸ್೯ ಪಡುಕರೆ ಇದರ ಉದಯ್‌ ಪಡುಕರೆ, ಪ್ರಶಾಂತ್ ಪಡುಕರೆ, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ಉಪಸ್ಥಿತರಿದ್ದರು.

    ಸಂತೋಷ್ ಕಾಂಚನ್ ಸ್ವಾಗತಿಸಿ,ಪ್ರಭಾಕರ್ ಮಣೂರು ಪ್ರಾಸ್ತಾವಿಕ ನುಡಿಗಳನ್ನಾಡಿ, ಕಲಾವತಿ ಅಶೋಕ್ ನಿರೂಪಿಸಿ, ರವೀಂದ್ರ ಕೋಟ ಸಹಯೋಜಿಸಿ ವಂದಿಸಿದರು.

    Kota
    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಗಂಗೊಳ್ಳಿ ಅಂಚೆ ಕಚೇರಿಯ ಇಮ್ತಿಯಾಜ್ ಅಹಮ್ಮದ್ ಅವರಿಗೆ ಸನ್ಮಾನ

    13/08/2026

    ಕಾಳಾವರ ವರದರಾಜ ಎಂ. ಶೆಟ್ಟಿ ಪದವಿ ಕಾಲೇಜಿನಲ್ಲಿ ಮಾದಕ ದ್ರವ್ಯ ವಿರೋಧಿ ಅರಿವು ದಿನ

    13/08/2026

    ಕುಂದಾಪುರ: ವಿಬಿ-ಜಿ ರಾಮ್ ಜಿ ಯೋಜನೆ ಪ್ರಗತಿ ಪರಿಶೀಲನಾ ಸಭೆ

    13/08/2026
    Leave A Reply Cancel Reply

    9 + 4 =

    Call us

    Click Here

    Call us

    Call us

    Call us
    Highest Viewed Recently
    • ಗಂಗೊಳ್ಳಿ ಅಂಚೆ ಕಚೇರಿಯ ಇಮ್ತಿಯಾಜ್ ಅಹಮ್ಮದ್ ಅವರಿಗೆ ಸನ್ಮಾನ
    • ವೇಗವಾಗಿ ಮರೆಯುವ ಕಾಲದಲ್ಲಿ ಸಂತೋಷ್ ಕೋಟ ಸಂಸ್ಮರಣೆ ನೆನಪಿಸುವ ಕಾರ್ಯ ಶ್ಲಾಘನೀಯ: ನರೇಂದ್ರ ಕುಮಾರ್ ಕೋಟ
    • ಕುಂದಾಪುರ: ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಡಾ. ಹೆಚ್. ಶಾಂತಾರಾಮ್‌ ಸಾಹಿತ್ಯ ಪ್ರಶಸ್ತಿ ಪ್ರದಾನ
    • ಕಾಳಾವರ ವರದರಾಜ ಎಂ. ಶೆಟ್ಟಿ ಪದವಿ ಕಾಲೇಜಿನಲ್ಲಿ ಮಾದಕ ದ್ರವ್ಯ ವಿರೋಧಿ ಅರಿವು ದಿನ
    • ಇಎಸ್‌ಐ ವೇತನ ಮಿತಿಯನ್ನು 35,000ರೂ.ಗೆ ಹೆಚ್ಚಿಸಲು ಲೋಕಸಭೆಯಲ್ಲಿ ಸಂಸದ ಕೋಟ ಆಗ್ರಹ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.