ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಭಾರತೀಯ ಅಂಚೆ ಇಲಾಖೆಯಲ್ಲಿ ಕಳೆದ 44 ವರ್ಷಗಳಿಂದ ಡಾಕ್ ಸೇವಕ್ ಆಗಿ ಕರ್ತವ್ಯ ನಿರ್ವಹಿಸಿ ವಯೋನಿವೃತ್ತಿ ಹೊಂದಿದ ಗಂಗೊಳ್ಳಿ ಅಂಚೆ ಕಚೇರಿಯ ಇಮ್ತಿಯಾಜ್ ಅಹಮ್ಮದ್ ಅವರನ್ನು ಸಮ್ಮಾನಿಸಿ ಬೀಳ್ಕೊಡಲಾಯಿತು.
ಕುಂದಾಪುರ ಅಂಚೆ ಉಪವಿಭಾಗದ ಎಎಸ್ಪಿ ಮಹೇಶ್ ಮತ್ತು ಗಂಗೊಳ್ಳಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ತಬ್ರೇಜ್ ಅವರು ಇಮ್ತಿಯಾಜ್ ಅಹಮ್ಮದ್ ಸಮ್ಮಾನಿಸಿ ಬೀಳ್ಕೊಟ್ಟರು. ಗಂಗೊಳ್ಳಿ ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ವೀಣಾ, ತ್ರಾಸಿ ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ಚೆನ್ನಯ್ಯ ಪೂಜಾರಿ, ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿ ಸೊಸೈಟಿ ಮುಖ್ಯ ಕಾರ್ಯನಿರ್ವಾಹಕ ಗಣೇಶ ನಾಯಕ್, ಅಂಜುಮಾನ್ ಉರ್ದು ಘೋಷಾ ಶಾಲೆಯ ಕಾರ್ಯದರ್ಶಿ ಉಮ್ಮರ್ ಬಾಷಾ ಸಾಹೇಬ್, ನಿವೃತ್ತ ಪೋಸ್ಟ್ ಮಾಸ್ಟರ್‌ಗಳಾದ ದೇವರಾಯ ಶೇರುಗಾರ್, ಉದಯ ಕುಮಾರ್ ಶೆಟ್ಟಿ, ಅಂಚೆ ಕಚೇರಿಯ ಸಿಬ್ಬಂದಿಗಳು ಮತ್ತಿತರರು ಉಪಸ್ಥಿತರಿದ್ದರು.
ಅಂಚೆಪೇದೆ ಶ್ವೇತಾ ಸ್ವಾಗತಿಸಿದರು. ನಿವೃತ್ತ ಪೋಸ್ಟ್ ಮಾಸ್ಟರ್ ಸೀತಾರಾಮ ಗಾಣಿಗ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.











