ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ವಿದ್ಯಾ ಭಾರತಿ ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನ ಸಂಬಂಧಿತ ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಆಯೋಜನೆಯಲ್ಲಿ ಪಿ.ಆರ್.ಎನ್ ಅಮೃತ ಭಾರತಿ ಸಮೂಹ ಸಂಸ್ಥೆಗಳು, ಹೆಬ್ರಿ ಇಲ್ಲಿ ನಡೆದ ಜಿಲ್ಲಾ ಮಟ್ಟದ ವಿಜ್ಞಾನ ಮೇಳದ ವಿವಿಧ ಸ್ಪರ್ಧೆಗಳಲ್ಲಿ ಶಿಶು ವರ್ಗ ವಿಭಾಗದಲ್ಲಿ ತೆಕ್ಕಟ್ಟೆ ಸೇವಾಸಂಗಮ ವಿದ್ಯಾಕೇಂದ್ರದ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದಿದ್ದಾರೆ.
ಇಲ್ಲಿನ ವಿದ್ಯಾರ್ಥಿಗಳಾದ ಮನ್ವಿತ್ ಕಾರಂತ್, ನವಚಾರಿತ ವಿಜ್ಞಾನ ಮಾದರಿಯಲ್ಲಿ , ಅನಿರುದ್ಧ, ವಸ್ತುವಿನ ಸ್ಥಿತಿಗಳ ಮಾದರಿಯಲ್ಲಿ ಪ್ರಥಮ ದ್ವಿತೀಯ ಸ್ಥಾನ ಗಳಿಸಿದರೆ, ನಮೀಶ್ ಚಂದನ್ ಪರಿಸರ ಮಾಲಿನ್ಯ ಮತ್ತು ಅದರ ವಿಧಗಳು, ನಿತ್ಯಾ ಎನ್ ಪುತ್ರನ್, ಸರಳಯಂತ್ರಗಳ ತಯಾರಿಕಾ ಮಾದರಿಯಲ್ಲಿ ಸ್ಪರ್ಧೆಯಲ್ಲಿ ಗಳಿಸಿದರೆ, ಗಣಿತ ನವಚಾರಿತ ಮಾದರಿ ಸ್ಪರ್ಧೆಯಲ್ಲಿ ಕಾರ್ತಿಕೇಯ ತೃತೀಯ ಸ್ಥಾನ ಗಳಿಸಿದರೆ, ವಿಜ್ಞಾನ ಪ್ರಯೋಗ ಸ್ಪರ್ಧೆಯಲ್ಲಿ ಗೌರಿ ತೃತೀಯ ಸ್ಥಾನ ಗಳಿಸಿದರೆ, ಸಂಸ್ಕೃತಿ ಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ ಸುಧಾಂಶ್ ಕುಮಾರ್, ಹರಿಪ್ರಿಯಾ ಮತ್ತು ಮನಸ್ವಿ, ಪ್ರಥಮ ಸ್ಥಾನ ಪಡೆದಿರುತ್ತಾರೆ. ಬಾಲ ವಿಭಾಗದ ಸಾಂಪ್ರದಾಯಿಕ ಯೋಗ ಸ್ಪರ್ಧೆಯಲ್ಲಿ 7ನೇ ತರಗತಿಯ ಅಮಿತ್ ಪ್ರಭು ದ್ವಿತೀಯ ಸ್ಥಾನ, ಆರ್ಟಿಸ್ಟಿಕ್ ಯೋಗದಲ್ಲಿ 7ನೇ ತರಗತಿಯ ಆಶ್ರಿತ್ ಪಿ ಐತಾಳ್ ದ್ವಿತೀಯ ಸ್ಥಾನ ಮತ್ತು ಗಣಿತ ಮಾದರಿ ಯಲ್ಲಿ 6ನೆ ತರಗತಿಯ ಶಿವಾನಿ ಕೆ. ಎಸ್, ನವಚಾರಿತ ವಿಜ್ಞಾನ ಮಾದರಿಯಲ್ಲಿ ನೇ ತರಗತಿಯ ಅನಘ ಅಡಿಗ, ಘರ್ಷಣೆ ಮಿತ್ರ ಮತ್ತು ಶತ್ರು ವಿಜ್ಞಾನ ಮಾದರಿಯಲ್ಲಿ ಸಹನಾ ವಿ ಬಾಯರಿ, ರಿದಮಿಕ ಮತ್ತು ಆರ್ಟಿಸ್ಟಿಕ್ ಯೋಗದಲ್ಲಿ ಯಶಿ ಮತ್ತು ಅನಘ ಆರ್ ಭಟ್ ತೃತೀಯ ಸ್ಥಾನ ಪಡೆದಿದ್ದಾರೆ.











