ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಇಲ್ಲಿನ ಕೋಟದ ಕದ್ರಿಕಟ್ಟು ಅಮೃತ್ ಯುವಕ ಸಂಘದ ವತಿಯಿಂದ ಕದ್ರಿಕಟ್ಟು ಪರಿಸರದಲ್ಲಿ 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ನೂತನ ಬಸ್ ತಂಗುದಾಣವನ್ನು ನಿರ್ಮಿಸಿದ್ದು ಇದನ್ನು ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ. ಕುಂದರ್ ಲೋಕಾರ್ಪಣೆಗೊಳಿಸಿದರು.
ಈ ಸಂದರ್ಭದಲ್ಲಿ ಅಮೃತ್ ಯುವಕ ಸಂಘದ ಅಧ್ಯಕ್ಷ ಜಗನಾಥ ಕಾಂಚನ್, ಪದಾಧಿಕಾರಿಗಳು, ಗಣ್ಯರಾದ ಕವಿತಾ ಸದಾನಂದ ಪೂಜಾರಿ, ಚಂದ್ರ ಆಚಾರ್, ಜಿ.ಎಸ್. ಆನಂದ್ ದೇವಾಡಿಗ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಚಂದ್ರ ಪೂಜಾರಿ ಕದ್ರಿಕಟ್ಟು ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.











