Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಪ್ರಯತ್ನವೇ ಯಶಸ್ಸಿನ ಕೀಲಿ ಕೈ: ಮಂಜುನಾಥ್‌ ನಾಯಕ್
    ಊರ್ಮನೆ ಸಮಾಚಾರ

    ಪ್ರಯತ್ನವೇ ಯಶಸ್ಸಿನ ಕೀಲಿ ಕೈ: ಮಂಜುನಾಥ್‌ ನಾಯಕ್

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್‌ ಕಾಂ ಸುದ್ದಿ.
    ಬ್ರಹ್ಮಾವರ:
    ಗ್ರಾಮಾಭಿವೃದ್ಧಿ ಮತ್ತು ಸ್ವ ಉದ್ಯೋಗ ತರಬೇತಿ (ರುಡ್‌ಸೆಟ್) ಸಂಸ್ಥೆ, ಬ್ರಹ್ಮಾವರ ವತಿಯಿಂದ ಆಯೋಜಿಸಲಾಗಿದ್ದ ಮಸಾಲ, ಹಪ್ಪಳ, ಉಪ್ಪಿನಕಾಯಿ ಹಾಗೂ ಫಾಸ್ಟ್ ಫುಡ್ ತಯಾರಿಕೆ ತರಬೇತಿಯ ಸಮಾರೋಪ ಸಮಾರಂಭವು ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.

    Click Here

    Call us

    Click Here

    ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಉಡುಪಿ ಬೇಕರಿ ಮತ್ತು ಆಹಾರ ಉದ್ಯಮ ಅಸೋಸಿಯೇಷನ್ ನಿರ್ದೇಶಕ ಹಾಗೂ ಕೋಟೇಶ್ವರ ಚಂದು ಮಸಾಲ ಮಾಲಕರಾದ ಮಂಜುನಾಥ್ ನಾಯಕ್ ಅವರು ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಿ ಮಾತನಾಡಿ, ಉದ್ಯಮದಲ್ಲಿ ಯಶಸ್ಸು ಸಾಧಿಸಲು ಆಸಕ್ತಿ, ಗುಣಮಟ್ಟ ಹಾಗೂ ನಿರಂತರ ಪ್ರಯತ್ನ ಅತ್ಯಂತ ಮುಖ್ಯ ಎಂದು ಅವರು ಹೇಳಿದರು. ತಮ್ಮ ಸ್ವಂತ ಉದ್ಯಮದ ಅನುಭವವನ್ನು ಹಂಚಿಕೊಂಡ ಅವರು, ಮಸಾಲಾ ಪೌಡರ್ ತಯಾರಿಕೆಯ ಕುರಿತು ಯಾವುದೇ ಪೂರ್ವಜ್ಞಾನವಿಲ್ಲದಿದ್ದರೂ, ಆಸಕ್ತಿ ಮತ್ತು ಪರಿಶ್ರಮದಿಂದ ಕಲಿತು ಇಂದು ತಮ್ಮದೇ ಆದ ಬ್ರಾಂಡ್ ಹೊಂದಿರುವುದಾಗಿ ತಿಳಿಸಿದರು.

    ಆಹಾರ ಉದ್ಯಮದಲ್ಲಿ ತ್ವರಿತ ಯಶಸ್ಸಿಗಾಗಿ ಯಾವುದೇ ಕಾರಣಕ್ಕೂ ಕಳಪೆ ಗುಣಮಟ್ಟದ ಸಾಮಗ್ರಿಗಳನ್ನು ಬಳಸಬಾರದು. ಗ್ರಾಹಕರಿಗೆ ಸದಾ ಗುಣಮಟ್ಟದ ಆಹಾರವನ್ನು ಒದಗಿಸಬೇಕು. ಹೊಸದಾಗಿ ತಯಾರಿಸಿದ ಆಹಾರ ಪದಾರ್ಥಗಳನ್ನು ಮೊದಲು ಕುಟುಂಬದ ಸದಸ್ಯರು ಹಾಗೂ ಸ್ನೇಹಿತರಿಗೆ ನೀಡಿ, ಅವರ ಅಭಿಪ್ರಾಯ ಮತ್ತು ತೃಪ್ತಿಯನ್ನು ತಿಳಿದುಕೊಂಡ ನಂತರ ಮಾರುಕಟ್ಟೆಗೆ ಪರಿಚಯಿಸುವುದು ಉತ್ತಮ ಎಂದು ಸಲಹೆ ನೀಡಿದರು. ಯಾವುದೇ ಕಾರಣಕ್ಕೂ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳಬಾರದು ಎಂದರು.

    ಉದ್ಯಮದಲ್ಲಿ ಏಳು-ಬೀಳುಗಳು ಸಹಜ. ಅವುಗಳಿಂದ ಹಿಂಜರಿಯದೆ ನಿರಂತರವಾಗಿ ಪ್ರಯತ್ನಿಸುತ್ತಾ ಮುನ್ನಡೆಯಬೇಕು. “ಪ್ರಯತ್ನವೇ ಯಶಸ್ಸಿನ ಕೀಲಿ ಕೈ” ಎಂದು ಹೇಳಿ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.

    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರುಡ್‌ಸೆಟ್ ಸಂಸ್ಥೆಯ ನಿರ್ದೇಶಕರಾದ ಡಾ. ಬೊಮ್ಮಯ್ಯ ಎಂ. ಮಾತನಾಡಿ, ಉದ್ಯಮದಲ್ಲಿ 12 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಉದ್ಯಮಿಗಳಿಂದ ಪಡೆದ ಮಾಹಿತಿಯು ನಮಗೆ ನೈಜ ಅನುಭವವನ್ನು ನೀಡಿದಂತಾಗಿದೆ. ಇಂತಹ ಅನುಭವಗಳನ್ನು ಆಧಾರವಾಗಿಟ್ಟುಕೊಂಡು ಮುಂದಿನ ಹೆಜ್ಜೆಗಳನ್ನು ಜಾಗರೂಕತೆಯಿಂದ ಇಡಬೇಕು ಎಂದು ಹೇಳಿದರು. ತರಬೇತಿಯ ಸಂದರ್ಭದಲ್ಲಿ ಪಡೆದ ಅನುಭವ ಹಾಗೂ ಜ್ಞಾನವನ್ನು ತಮ್ಮ ಕುಟುಂಬದವರು, ಸ್ನೇಹಿತರು ಹಾಗೂ ಇತರರೊಂದಿಗೆ ಹಂಚಿಕೊಳ್ಳುವಂತೆ ಶಿಬಿರಾರ್ಥಿಗಳಿಗೆ ಕರೆ ನೀಡಿ, ಅವರ ಮುಂದಿನ ಭವಿಷ್ಯಕ್ಕೆ ಶುಭ ಹಾರೈಸಿದರು.

    Click here

    Click here

    Click here

    Call us

    Call us

    ಈ ಸಂದರ್ಭದಲ್ಲಿ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ಉಪನ್ಯಾಸಕಿ ಚೈತ್ರ ಕೆ. ಕಾರ್ಯಕ್ರಮ ನಿರೂಪಿಸಿದರು. ಹಿರಿಯ ಉಪನ್ಯಾಸಕರಾದ ಸಂತೋಷ್ ಸ್ವಾಗತಿಸಿದರು. ಹಿರಿಯ ಕಚೇರಿ ಸಹಾಯಕರಾದ ರವಿ ವಂದಿಸಿದರು.  

    kundapura
    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಕಿರಿಮಂಜೇಶ್ವರ: ಟ್ಯಾಂಕರ್‌ನ ಚಕ್ರ ಕಳಚಿ ವ್ಯಕ್ತಿಗೆ ಡಿಕ್ಕಿ – ಗಾಯ

    18/08/2026

    ಗಂಗೊಳ್ಳಿ ಪ್ರಸಿದ್ಧ ಗುತ್ತಿಗೆದಾರ ಶ್ರೀನಿವಾಸ ಎಂ. ನಿಧನ

    18/08/2026

    ಕರ್ನಾಟಕ ಸಂಘ ಕತಾರ್‌: 80ನೇ ಸ್ವಾತಂತ್ರ್ಯೋತ್ಸವ

    18/08/2026
    Leave A Reply Cancel Reply

    5 × one =

    Call us

    Click Here

    Call us

    Call us

    Call us
    Highest Viewed Recently
    • ಕಿರಿಮಂಜೇಶ್ವರ: ಟ್ಯಾಂಕರ್‌ನ ಚಕ್ರ ಕಳಚಿ ವ್ಯಕ್ತಿಗೆ ಡಿಕ್ಕಿ – ಗಾಯ
    • ಗಂಗೊಳ್ಳಿ ಪ್ರಸಿದ್ಧ ಗುತ್ತಿಗೆದಾರ ಶ್ರೀನಿವಾಸ ಎಂ. ನಿಧನ
    • ಪ್ರಯತ್ನವೇ ಯಶಸ್ಸಿನ ಕೀಲಿ ಕೈ: ಮಂಜುನಾಥ್‌ ನಾಯಕ್
    • ಕರ್ನಾಟಕ ಸಂಘ ಕತಾರ್‌: 80ನೇ ಸ್ವಾತಂತ್ರ್ಯೋತ್ಸವ
    • ಸುಜ್ಞಾನ ಕಾಲೇಜಿನಲ್ಲಿ ಸಿಎ ಹಾಗೂ ಸಿಎಸ್‌ ತರಬೇತಿ ಕಾರ್ಯಕ್ರಮ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.