ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸಭಾಕಂಪನವಿಲ್ಲದೆ ಆತ್ಮವಿಶ್ವಾಸದೊಂದಿಗೆ ವೇದಿಕೆಯನ್ನು ಬಳಸಿಕೊಂಡು ನಿರೂಪಣೆ ಮಾಡುವ ಸಂದರ್ಭದಲ್ಲಿ ವಿಷಯ ಸಂಗ್ರಹಣೆ, ಸ್ಪಷ್ಟ ಉಚ್ಛಾರ ಮತ್ತು ನಿರರ್ಗಳತೆಯಿಂದ ಪ್ರೇಕ್ಷಕರನ್ನು ಸೆಳೆಯುವಂತಹ ಪದಬಳಕೆ ಮಾಡುವ ಮೂಲಕ ಉತ್ತಮ ನಿರೂಪಣೆ ಮಾಡಲು ಸಾಧ್ಯ ಎಂದು ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕಿ ರೇಷ್ಮಾ ಶೆಟ್ಟಿ ಹೇಳಿದರು.
ಅವರು ಇಲ್ಲಿನ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಭಾಷಾ ಸಂಘ ಆಯೋಜಿಸಿದ ʼನಿರೂಪಣೆ ಕುರಿತಾದ ಕಾರ್ಯಾಗಾರʼದಲ್ಲಿ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪ-ಪ್ರಾಂಶುಪಾಲರಾದ ಡಾ. ಚೇತನ್ ಶೆಟ್ಟಿ ಕೋವಾಡಿ ಉಪಸ್ಥಿತರಿದ್ದರು.
ಭಾಷಾ ಸಂಘದ ಸಂಯೋಜಕರಾದ ಸ್ವಾತಿ ಜಿ. ರಾವ್ ಸ್ವಾಗತಿಸಿ, ಪ್ರವೀಣಾ ಎಮ್. ಪೂಜಾರಿ ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿ, ಸರೋಜಾ ವಂದಿಸಿ, ಮೇಘಾ ಎಸ್. ಭಟ್ ಕಾರ್ಯಕ್ರಮ ನಿರೂಪಿಸಿದರು.
















