ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: 80ನೇ ಸ್ವಾತಂತ್ರ್ಯೋತ್ಸವನ್ನು ಬಾಲಗೋಕುಲ ಶಿಶು ಮಂದಿರ ಗೋಪಾಡಿಯಲ್ಲಿ ಯುವಕ ಮಂಡಳ ರಿ. ಗೋಪಾಡಿ, ಸಹನಾ ಯುವತಿ ಮಂಡಳ ಗೋಪಾಡಿ ಹಾಗೂ ರೋಟರಿ ಸಮುದಾಯ ದಳ ಕೋಟೇಶ್ವರ ಇವರ ಜಂಟಿ ಆಶ್ರಯದಲ್ಲಿ ನೆರವೇರಿಸಲಾಯಿತು.

ಕಾಶೀಯಮ್ಮ ಗೋಪಾಡಿ ಅವರು ಧ್ವಜಾರೋಹಣ ಗೈದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೃಷ್ಣಮೂರ್ತಿ ಹತ್ವಾರ್ ಗೋಪಾಡಿ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ರಾಮಕೃಷ್ಣ ಉಡುಪರು ಭಾಗವಹಿಸಿದ್ದರು. ಯುವಕ ಮಂಡಲರಿ. ಗೋಪಾಡಿ ಇದರ ಅಧ್ಯಕ್ಷರಾದ ಗಿರೀಶ್ ಉಪಾಧ್ಯಾಯರು, ರೋಟರಿ ಸಮುದಾಯ ದಳ ಕೋಟೇಶ್ವರದ ಅಧ್ಯಕ್ಷೆ ಸುಪ್ರೀತಾ ಪುರಾಣಿಕ, ಸಹನಾ ಯುವತಿ ಮಂಡಳದ ಅಧ್ಯಕ್ಷೆ ಭಾಗ್ಯಲಕ್ಷ್ಮೀ ಧನ್ಯ, ಶಿಶು ಮಂದಿರದ ಕಾರ್ಯದರ್ಶಿಯಾದ ರೋಹಿಣಿ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸ್ವಾತಂತ್ರ್ಯೋತ್ಸವದ ಶುಭ ಸಂದರ್ಭದಲ್ಲಿ ರೋಟರಿ ಸಮುದಾಯ ದಳ ಕೋಟೇಶ್ವರದಿಂದ ಬಾಲಗೋಕುಲ ಶಿಶುಮಂದಿರ ಗೋಪಾಡಿಯವರಿಗೆ ಖುರ್ಚಿ ಮತ್ತು ಶಿಶು ಮಂದಿರದ ಪುಟಾಣಿಗಳಿಗೆ ಏಕಾಗ್ರತೆ, ಕಲ್ಪನಾಶಕ್ತಿ ಹೆಚ್ಚಲಿ ಮತ್ತು ಮೊಬೈಲ್ ನಿಂದ ದೂರ ಉಳಿಯಲಿ ಎಂಬ ಉದ್ದೇಶದಿಂದ ಡ್ರಾಯಿಂಗ್ ಪುಸ್ತಕ ಮತ್ತು ಕ್ರೇಯಾನ್ಸ್ ಅನ್ನು ನೀಡಲಾಯಿತು.
ಮಕ್ಕಳು ಸ್ವಾತಂತ್ರ್ಯ ಹೋರಾಟಗಾರರ ವೇಷ ಧರಿಸಿ ಸುಭಾಷಿತ, ಅಮೃತವಚನ, ಕಗ್ಗ, ವಚನವನ್ನು ಹೇಳಿದರು. ನೆರದವರಿಗೆ ಸಿಹಿತಿಂಡಿ ಹಂಚಲಾಯಿತು. ಶ್ವೇತಾರಾಘವ್ ಪ್ರಾರ್ಥನೆ ಮಾಡಿ ಯೋಗೀಶ್ ಕಾಮತ್ ಸ್ವಾಗತಿಸಿದರು.ರಾಘವೇಂದ್ರ ಗೋಪಾಡಿ ನಿರೂಪಿಸಿ, ಪ್ರತೀಕಾ ವಂದನಾರ್ಪಣೆ ಮಾಡಿದರು.
















