ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಕಟಪಾಡಿಯಲ್ಲಿ ಆ. 16 ರಂದು ನಡೆದ KEN – MABUNI SHITO – RYU – KARATE SCHOOL OF INDIA ಹಾಗೂ ಆರ್. ವಿ. ಕನ್ಸ್ಟ್ರಕ್ಷನ್ ಜಂಟಿಯಾಗಿ ಆಯೋಜಿಸಿದ್ದ ‘COMPETE 5.0’ 3ನೇ ಆಹ್ವಾನಿತ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಮಣೂರು ಪಡುಕೆರೆಯ ನಿವಾಸಿ ಪ್ರೇರಣಾ ಎನ್. ಮೊಗವೀರ ಅವರು ಕುಮಿಟೆ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡರು.
ವಿಜೇತರಾದ ಪ್ರೇರಣಾ ಅವರಿಗೆ ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಅವರು ಟ್ರೋಫಿ ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು.
ಪ್ರೇರಣಾ ಅವರು ಪ್ರಸ್ತುತ ಕೋಟದ ವಿವೇಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ೮ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಮಣೂರು ಪಡುಕೆರೆ ದಾರೊಜ್ಜಿಮನೆಯ ಪ್ರೇಮ ಮತ್ತು ನಾಗೇಶ್ ದಂಪತಿಯ ಪುತ್ರಿಯಾಗಿದ್ದಾರೆ. ಇವರಿಗೆ MUKEN KAI KARATE DO FEDERATION OF INDIA ತರಬೇತುದಾರರಾದ ಮಂಜುನಾಥ್ ಮೊಗವೀರ ಅವರು ಕರಾಟೆ ತರಬೇತಿ ನೀಡಿದ್ದಾರೆ.ಪ್ರೇರಣಾ ಅವರ ಈ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಶಿಕ್ಷಕ ವೃಂದ ಅಭಿನಂದಿಸಿದ್ದಾರೆ.











