ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಬೇಳೂರು, ದೇಲಟ್ಟು ಗ್ರಾಮದ ಪುಟಾಣಿ ಪ್ರತಿಭೆ ಪ್ರದ್ಯುಮ್ನ ಅಡಿಗಗೆ ʼಇಂಟರ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್’ನಲ್ಲಿ ಜಾಗತಿಕ ಗೌರವ ಲಭಿಸಿದೆ.
ಪದ್ಮರಾಜ ಅಡಿಗ ಹಾಗೂ ಪದ್ಮನಿ ಅಡಿಗ ದಂಪತಿಯ ಪುತ್ರ 1.7 ವರ್ಷದ ಪುಟಾಣಿ ಪ್ರದ್ಯುಮ್ನ ಅಡಿಗ ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ಅಸಾಧಾರಣ ಜ್ಞಾಪಕ ಶಕ್ತಿ ಪ್ರದರ್ಶಿಸುವ ಮೂಲಕ ಇಂಟರ್‌ನ್ಯಾಶನಲ್ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಜಾಗತಿಕ ದಾಖಲೆ ಬರೆದಿದ್ದಾರೆ.
ಈ ವಿಶಿಷ್ಟ ಸಾಧನೆಗಾಗಿ ಸಂಸ್ಥೆಯು ಮಗುವಿಗೆ ಸೂಪರ್ ಟ್ಯಾಲೆಂಟೆಡ್ ಕಿಡ್ ಎಂಬ ಬಿರುದು ನೀಡಿ ಗೌರವಿಸಿದೆ. ಪ್ರಾಣಿಗಳು, ವಾಹನಗಳು, ರಾಷ್ಟ್ರಧ್ವಜಗಳು, ಬಾಹ್ಯಾಕಾಶದ ಅಂಶಗಳು ಹಾಗೂ ದೇಹದ ಭಾಗಗಳು ಸೇರಿದಂತೆ ಒಟ್ಟು 300 ಫ್ಲ್ಯಾಶ್‌ಕಾರ್ಡ್‌ಗಳನ್ನು ಅತ್ಯಂತ ನಿಖರವಾಗಿ ಗುರುತಿಸುವ ಮೂಲಕ ಪ್ರದ್ಯುಮ್ನ ಅಪರೂಪದ ಸಾಧನೆ ಮಾಡಿದ್ದಾನೆ.
ಮಗುವಿನ ಚಟುವಟಿಕೆಗಳ 42ಕ್ಕೂ ಅಧಿಕ ವಿಡಿಯೋಗಳನ್ನು ಸಂಸ್ಥೆಗೆ ಕಳುಹಿಸಿಕೊಡಲಾಗಿದ್ದು, ಇದನ್ನು ವಿಶ್ಲೇಷಿಸಿ ಪ್ರಸ್ತುತ ಮಗುವಿಗೆ ಸಂಸ್ಥೆಯಿಂದ ಅಧಿಕೃತ ಪದಕ ಹಾಗೂ ಪ್ರಮಾಣ ಪತ್ರ ನೀಡಿದ್ದಾರೆ.
















