ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಒಂದು ಭಾಷೆ ಬೆಳೆಯಲು ವಿವಿಧ ಭಾಷೆಗಳ ನಡುವೆ ಸಮನ್ವಯ ಅಗತ್ಯವಿದೆ. ಭಾಷೆಯನ್ನು ಬಳಸುವುದು ಭಾಷೆಯ ಉಳಿವು ಮತ್ತು ಬೆಳವಣಿಗೆಗೆ ಮೂಲ ದಾರಿ. ನಮ್ಮ ಮಾತೃಭಾಷೆಯನ್ನು ಪ್ರೀತಿಸುವುದರ ಜೊತೆಯಲ್ಲಿ ವಿವಿಧ ಭಾಷೆಗಳನ್ನು ಗೌರವಿಸೋಣ ಎಂದು ಕನ್ನಡ ಉಪನ್ಯಾಸಕರಾದ ಹೆಚ್. ಸುಜಯೀoದ್ರ ಹಂದೆ ಅಭಿಪ್ರಾಯಪಟ್ಟರು.
ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಎಸ್ ವಿ ಕಾಮರ್ಸ್ ಕ್ಲಬ್ ವತಿಯಿಂದ ನಡೆದ ಕನ್ನಡ ಸಿರಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಸಮಾಜ ಸೇವಕ ಆನಂದ ಬಿಲ್ಲವ ಬೈಲುಮನೆ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ವಿದ್ಯಾರ್ಥಿ ಪ್ರತಿನಿಧಿಗಳಾದ ಅದಿತಿ ಎಸ್. ಖಾರ್ವಿ, ನಿಸರ್ಗ ಖಾರ್ವಿ ಮತ್ತು ಸನ್ಮಿತಾ ಖಾರ್ವಿ ಕನ್ನಡದ ಬಗೆಗೆ ಅಭಿಪ್ರಾಯಗಳನ್ನು ಹಂಚಿಕೊಂಡರು.
ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಕವಿತಾ ಎಂ.ಸಿ ಅಧ್ಯಕ್ಷತೆ ವಹಿಸಿದ್ದರು. ಎಸ್‌ವಿ ಕಾಮರ್ಸ್ ಕ್ಲಬ್ ಸಂಯೋಜಕ ನರೇಂದ್ರ ಎಸ್. ಗಂಗೊಳ್ಳಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮಾನ್ವಿ ಮತ್ತು ಸಹನಾ ಕನ್ನಡ ಗೀತೆಯನ್ನು ಹಾಡಿದರು. ವರದ ಹೆಬ್ಬಾರ್ ಸ್ವಾಗತಿಸಿ, ಸಿಂಚನ ನಿರೂಪಿಸಿ, ಶ್ರೀನಿವಾಸ ಪೈ ವಂದಿಸಿದರು.

















