ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಅಡಿಕೆ ಮರದ ತಲೆ ಕತ್ತರಿಸುವ ವೇಳೆ ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಕುಂದಾಪುರ ತಾಲೂಕಿನ ಉಳ್ತೂರು ಗ್ರಾಮದ ಹಲ್ತೂರಿನಲ್ಲಿ ಸಂಭವಿಸಿದೆ
ಮೃತರನ್ನು ಉಳ್ತೂರು ಗ್ರಾಮದ ಭುಜಂಗ ಶೆಟ್ಟಿ(56) ಎಂದು ಗುರುತಿಸಲಾಗಿದೆ.
ಅವರು ಆ.8ರಂದು ಮನೆಯ ಜಾಗದಲ್ಲಿಯ ಅಡಿಕೆ ಮರ ಮರದ ತಲೆಯನ್ನು ಕತ್ತರಿಸುವಾಗ ಆಕಸ್ಮಿಕವಾಗಿ ಸುಮಾರು 20 ಅಡಿ ಎತ್ತರದಿಂದ ನೆಲಕ್ಕೆ ಬಿದ್ದಿದ್ದರು. ಬಿದ್ದ ಪರಿಣಾಮ ತಲೆ ಹಾಗೂ ಬೆನ್ನಿಗೆ ತೀವ್ರ ಗಾಯಗಳಾಗಿದ್ದವು.
ಅವರನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆ.20ರಂದು ಮಧ್ಯಾಹ್ನ ಆಸ್ಪತ್ರೆಯಿಂದ ಬಿಡುಗಡೆಗೊಂಡಬಳಿಕ ಹಲ್ತೂರಿನ ಮನೆಗೆ ಕರೆತರಲಾಗಿತ್ತು. ಆದರೆ ಸಂಜೆ ಮನೆಯಲ್ಲಿ ಮೃತಪಟ್ಟದ್ದಾರೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
















