ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಜೆಸಿಐ ಸಂಸ್ಥೆ ವಲಯ 15ರ ವತಿಯಿಂದ ಸಮಾಜಮುಖಿ ಕಾರ್ಯಗಳು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದ ಗಣ್ಯರನ್ನು ಗುರುತಿಸಿ ನೀಡಲಾಗುವ ಪ್ರತಿಷ್ಠಿತ ‘ಸಾಧನಾಶ್ರೀʼ ಪ್ರಶಸ್ತಿಗೆ ಜೆಸಿಐ ಶಿರೂರು ಪೂರ್ವಾಧ್ಯಕ್ಷ ಜೆಸಿಐ ಸೆನೆಟರ್ ನಾಗೇಶ್ ಕೆ. ಅವರು ಭಾಜನರಾಗಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭವು ಮಡಂತ್ಯಾರಿನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಜೆಸಿಐ ವಲಯ 15ರ ಅಧ್ಯಕ್ಷರಾದ ಜೆಎಫ್‌ಎಸ್ ಸಂತೋಷ್ ಶೆಟ್ಟಿ ಅವರು ಜೆಸಿಐ ಸೆನೆಟರ್ ನಾಗೇಶ್ ಕೆ. ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.
ಜೆಸಿಐ ಸೆನೆಟರ್ ನಾಗೇಶ್ ಕೆ. ಅವರು ಸಾಮಾಜಿಕ ಸೇವೆ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಸಲ್ಲಿಸಿರುವ ಗಮನಾರ್ಹ ಸೇವೆ ಮತ್ತು ಸಾಧನೆಯನ್ನು ಗುರುತಿಸಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಸಮಾರಂಭದಲ್ಲಿ ವಲಯ ಉಪಾಧ್ಯಕ್ಷರಾದ ಜೆಎಫ್‌ಎಂ ಪ್ರದೀಪ್ ಶೆಟ್ಟಿ, ಮಾರ್ಕೆಟಿಂಗ್ ವಿಭಾಗದ ನಿರ್ದೇಶಕರಾದ ಜೆಸಿ ಸ್ವರಾಜ್ ಶೆಟ್ಟಿ, ವ್ಯವಹಾರ ವಿಭಾಗದ ನಿರ್ದೇಶಕರಾದ ಜೆಸಿ ವಿಕೇಶ್ ಮಾನ್ಯ, ಶಿರೂರು ಜೆಸಿಐ ಅಧ್ಯಕ್ಷರಾದ ಜೆಸಿ ವಿನೋದ್ ಮೇಸ್ತ, ಕಾರ್ಯದರ್ಶಿ ಪವನ್ ಪೂಜಾರಿ, ಜೆಸಿ ಮಹಿಳಾ ಅಧ್ಯಕ್ಷೆ ಜ್ಯೋತಿ ಪೂಜಾರಿ, ಲಕ್ಷ್ಮೀ ನಾಗೇಶ್ ಸೇರಿದಂತೆ ಜೆಸಿಐನ ಪ್ರಮುಖ ಪದಾಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.
ಸಮಾಜಮುಖಿ ಚಿಂತನೆ, ಶೈಕ್ಷಣಿಕ ಸೇವೆ ಹಾಗೂ ನಿರಂತರ ಸಾಧನೆಯ ಮೂಲಕ ಸಮಾಜಕ್ಕೆ ನೀಡಿರುವ ಕೊಡುಗೆಗಾಗಿ ಜೆಸಿಐ ಸೆನೆಟರ್ ನಾಗೇಶ್ ಕೆ. ಅವರಿಗೆ ದೊರೆತಿರುವ ಈ ಗೌರವವು ಅವರ ಸೇವಾ ಮನೋಭಾವಕ್ಕೆ ಸಂದಿರುವ ಮತ್ತೊಂದು ಹೆಮ್ಮೆಯ ಮನ್ನಣೆಯಾಗಿದೆ.
















