ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ರಕ್ತದಾನ ಶ್ರೇಷ್ಠದಾನ, ಯುವಕರೆಲ್ಲ ಸಂಘಟಿತರಾಗಿ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡುವುದು ಸಾಮಾಜಿಕ ಕಳಕಳಿಗೆ ಒಂದು ನಿದರ್ಶನ, ರಕ್ತಕ್ರತಕವಾಗಿ ತಯ್ಯಾರು ಮಾಡುದು ಸಾಧ್ಯವಿಲ್ಲ. ಸ್ವಯಂಪ್ರೇರಿತವಾಗಿ ಒಬ್ಬನಿಗೆ ಮತ್ತೊಬ್ಬನು ದಾನ ಮಾಡುದರಿಂದ ಒಂದು ಜೀವ ಉಳಿಸಬಹುದು ಎಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯದ ವ್ಯವಸ್ಥಾಪನ ಸಮಿತಿ ಸದಸ್ಯರಾದ ರಾಜೇಶ್ ಕಾರಂತ್ ಉಪ್ಪಿನಕುದ್ರು ಹೇಳಿದರು.

ಅವರು ಪಂಚಾಗಂಗಾ ರೈತರ ಸೇವಾ ಸಹಕಾರಿ ಸಂಘ ನಿ. ಹೆಮ್ಮಾಡಿ, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ರಿ. ಉಡುಪಿ, ಲಯನ್ಸ್ ಕ್ಲಬ್ ಕುಂದಾಪುರ ಸಿಟಿ ಸೆಂಟರ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ,ಸಿ, ಟ್ರಸ್ಟ್ ರಿ. ಕುಂದಾಪುರ, ರೋಟರಿ ಕ್ಲಬ್ ಕುಂದಾಪುರ ಮಿಡ್ ಟೌನ್, ಜೆಸಿಐ ಕುಂದಾಪುರ ಸಿಟಿ, ಶ್ರೀ ಸಾಯಿಸ್ಪಂದನ ಪೌoಡೆಷನ್ ರಿ. ಕುಂದಾಪುರ, ಯುನೈಟೆಡ್ ಫ್ರೆಂಡ್ಸ್ ತಲ್ಲೂರು, ಇವರೆಲ್ಲರ ಸಹಬಾಗಿತ್ವದಲ್ಲಿ, ರಕ್ತನಿಧಿ ವಿಭಾಗ, ಕೆಎಂಸಿ ಮಣಿಪಾಲ ಇವರ ಸಹಕಾರದೊಂದಿಗೆ ತಲ್ಲೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಸಂತೋಷ್ ಶೆಟ್ಟಿ ಹಕ್ಲಾಡಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಪ್ರಸಾದ್ ಕೋಡಿ, ಸತೀಶ್ ಸಾಲ್ಯಾನ್,ಸಚಿನ್ ಕುಮಾರ್ ಶೆಟ್ಟಿ, ಡಾ. ಗಣೇಶ್ ಮೋಹನ್, ಕುಸುಮಾಕರ ಶೆಟ್ಟಿ, ಕಿರಣ್ ದೇವಾಡಿಗ, ಯೋಜನಾಧಿಕಾರಿ, ಉಮೇಶ್ ಶೆಟ್ಟಿ, ಹರೀಶ್ ಕೋಟ್ಯಾನ್, ಆನಂದ ಬಿಲ್ಲವ, ಉಪಸ್ಥಿತರಿದ್ದು ಶುಭ ಹಾರೈಸಿದರು.
ಕಾರ್ಯಕ್ರಮದ ಅಂಗವಾಗಿ, ನಿರಂತರ ರಕ್ತದಾನಿಗಳಾದ ಗುರುರಾಜ್ ಹೆಬ್ಬಾರ್ ಕುಂದಾಪುರ ಮತ್ತು ಪ್ರಶಾಂತ್ ಕುಂದಾಪುರ ಅವರನ್ನು ಅಭಿನಂದಿಸಲಾಯಿತು. ಹಟ್ಟಿಯಂಗಡಿ ಪ್ರಾಥಮಿಕ ಅರೋಗ್ಯ ಕೇಂದ್ರದಿಂದ ವರ್ಗಾವಣೆಗೊಂಡ ವೈದ್ಯಧಿಕಾರಿ ಡಾ. ರಂಗನಾಥ್ ವೈಪಿ ಅವರನ್ನು ಜನಪರ ಸೇವೆಗಾಗಿ ಸನ್ಮಾನಿಸಲಾಯಿತು.
ಒಟ್ಟು ಮುನ್ನೂರುಕ್ಕು ಮಿಕ್ಕಿ ಜನರು ಭಾಗವಹಿಸಿದ್ದು, 175 ಯೂನಿಟ್ ರಕ್ತ ಸಂಗ್ರಹಿಸಲಾಯತು. ಕಾವ್ಯ ಶೆಟ್ಟಿ ಪ್ರಾರ್ಥನೆ ಗೈದರು. ಶ್ವೇತಾ ಕುಂದಾಪುರ ಸಭಾ ಕಾರ್ಯಕ್ರಮ ನಿರೂಪಿಸಿ, ಭಾಸ್ಕರ್ ಆಚಾರ್ಯ ಉಪ್ಪಿನಕುದ್ರು ಸ್ವಾಗತಿಸಿ, ವಂದನಾರ್ಪಣೆ ಗೈದರು.
















