ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಬ್ರಹ್ಮಶ್ರೀ ನಾರಾಯಣ ಗುರುಗಳು ಕೊಟ್ಟಿರುವ ಸಂದೇಶ ಜನಸಾಮಾನ್ಯರ ಬದುಕಿನಲ್ಲಿ ಹೊಸಶಕ್ತಿಯನ್ನು ನೀಡಿದ್ದು ಈ ನಿಟ್ಟಿನಲ್ಲಿ ನಾರಾಯಣ ಗುರುಗಳ 172ನೇ ಜನ್ಮ ದಿನದ ಆಂಗವಾಗಿ ಸಾಸ್ತಾನದಿಂದ ಅರಂಭವಾದ ಈ ಪರಿವರ್ತನಾ ಜಾಥಾ ಎಲ್ಲಾ ಪ್ರದೇಶದಲ್ಲೂ ಮೇಳೈಸಲಿ ಅಲ್ಲದೆ ನಾರಾಯಣ ಗುರುಗಳ ಸಂದೇಶವನ್ನು ಸಮಾಜಕ್ಕೆ ಬಿತ್ತರಿಸಲು ಶಕ್ತಿಯನ್ನು ಪಡೆಯಲಿ ಇದರಿಂದ ಒಂದು ಸುಂದರ ಸಮಾಜ ನಿರ್ಮಾಣವಾಗಲಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಭಾನುವಾರ ಸಾಸ್ತಾನ ಪೇಟೆಯಲ್ಲಿ ಶ್ರೀ ಬ್ರಹ್ಮಬೈದರ್ಕಳ ಬಿಲ್ಲವ ಸೇವಾ ಸಂಘ ಸಾಸ್ತಾನ, ಶ್ರೀ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ ಕೋಟ ಇವರ ಸಹಭಾಗಿತ್ವದಲ್ಲಿ ಶ್ರೀ ನಾರಾಯಣಗುರುಗಳ 172ನೇ ಜನ್ಮ ದಿನಾಚರಣೆಯ ಅಂಗವಾಗಿ ಶ್ರೀ ನಾರಾಯಣಗುರು ಪರಿವರ್ತನಾ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.
ಈ ಸಂದರ್ಭದಲ್ಲಿ ಸಾಹಿತಿ ನರೇಂದ್ರ ಕುಮಾರ್ ಕೋಟ, ಸಮುದಾಯದ ಪ್ರಮುಖರಾದ ವಿಠ್ಠಲ ಪೂಜಾರಿ ಪಾಂಡೇಶ್ವರ, ಐರೋಡಿ ವಿಠ್ಠಲ ಪೂಜಾರಿ, ಎಂಸಿ.ಚಂದ್ರಶೇಖರ್, ಸದಾನಂದ ಪೂಜಾರಿ, ಪ್ರಸಾದ್ ಬಿಲ್ಲವ, ರತ್ನಾ ಜೆ ರಾಜ್, ಪಂಜು ಪೂಜಾರಿ, ಗೋವಿಂದ ಪೂಜಾರಿ, ಗರಡಿ ಪಾತ್ರಿ ಶಂಕರ್ ಪೂಜಾರಿ, ಸುಧಾಕರ್ ಪೂಜಾರಿ, ಸೇರಿದಂತೆ ಶ್ರೀ ಬ್ರಹ್ಮಬೈದರ್ಕಳ ಬಿಲ್ಲವ ಸೇವಾ ಸಂಘ ಸಾಸ್ತಾನ, ಶ್ರೀ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ ಕೋಟ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸಾಸ್ತಾನ ಪೇಟೆಯಿಂದ ಪ್ರಾರಂಭಗೊಂಡ ಜಾಥಾ ಕೋಡಿ- ಪಾರಂಪಳ್ಳಿ ಪಡುಕೆರ- ಕೋಟ- ಸಾಲಿಗ್ರಾಮ ಮೂಲಕ ಸಾಗಿ ಕೊನೆಯಲ್ಲಿ ಸಾಸ್ತಾನ ಗೋಳಿಗರಡಿ ದೇವಸ್ಥಾನದ ಸಭಾಂಗಣದಲ್ಲಿ ಸಮಾಪನಗೊಂಡಿತು.
















