ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಕ್ಲಬ್ ಆರಂಭವಾದ ಪ್ರಥಮ ವರ್ಷದಲ್ಲಿಯೇ ರೋಟರಿ ಕ್ಲಬ್ ಕೋಟ ಬ್ರಿಗೇಡ್‌ಗೆ ಹೊಸ ಕ್ಲಬ್‌ಗಳ ವಿಭಾಗದಲ್ಲಿ ಔಟ್ ಸ್ಟ್ಯಾಂಡಿಂಗ್ ನ್ಯೂ ಕ್ಲಬ್ ಜಿಲ್ಲಾ ಪ್ರಶಸ್ತಿ ಲಭಿಸಿದೆ.
ಇತ್ತೀಚೆಗೆ ಹಾಸನದಲ್ಲಿ ನಡೆದ ಜಿಲ್ಲಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರೋಟರಿ ಕ್ಲಬ್ ಕೋಟ ಬ್ರಿಗೇಡ್ ಚಾರ್ಟರ್ ಅಧ್ಯಕ್ಷ ಪ್ರಥ್ವಿನ್ ಸಿ ಮೆಂಡನ್ ಹಾಗೂ ಈ ವರ್ಷದ ಅಧ್ಯಕ್ಷ ಪ್ರಕಾಶ್ ಪೂಜಾರಿ ಬನ್ನಾಡಿ ಅವರಿಗೆ ನಿಕಟ ಪೂರ್ವ ಜಿಲ್ಲಾ ಗವರ್ನರ್ ಪಾಲಾಕ್ಷ ಕೆ. ಅವರು ಪ್ರಶಸ್ತಿ ನೀಡಿ ಗೌರವಿಸಿದರು.
ಈ ಸಂದರ್ಭ ಜಿಲ್ಲಾ ಅವಾರ್ಡ್ ಕಮಿಟಿ ಸಭಾಪತಿ, ಪಿಡಿಜಿ ಸಿಎ ದೇವಾನಂದ್, ಜಿಲ್ಲಾ ಅವಾರ್ಡ್ ಕಮಿಟಿ ಉಪ ಸಭಾಪತಿ ಜೈಕಿಶನ್ ಶೆಟ್ಟಿ, ಪಿಡಿಜಿ ರಾಜಾರಾಮ್ ಭಟ್, ಕ್ಲಬ್ ಅಡ್ವೈಸರ್ ಚಂದ್ರಶೇಖರ್ ಮೆಂಡನ್, ಜೋನಲ್ ಲೆಫ್ಟಿನೆಂಟ್ ದಯಾನಂದ್ ಆಚಾರ್, ಮಾಜಿ ಅಧ್ಯಕ್ಷರಾದ ಸುರೇಶ್ ಆಚಾರ್, ವೆಂಕಟೇಶ್ ಆಚಾರ್, ಪ್ರಕಾಶ್ ಹಂದಟ್ಟು, ಕಾರ್ಯದರ್ಶಿ ಶಿವರಾಜ್ ಹಾಗೂ ಸದಸ್ಯರಾದ ರಾಘವೇಂದ್ರ ಆಚಾರ್, ಭಾಸ್ಕರ್ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.











