ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಾಲೂಕು ಕಚೇರಿಯಲ್ಲಿ ರಾಜ್ಯ ಸರಕಾರದ ನೂತನ ಪ್ರಜಾಸೇವೆ ಆಂದೋಲನದ ಕುರಿತಾದ ಪೂರ್ವಭಾವಿ ಸಭೆ ನಡೆಯಿತು.

ಬೈಂದೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಗುರುರಾಜ್ ಗಂಟಿಹೊಳೆ ಉದ್ದೇಶಿಸಿ ಮಾತನಾಡಿ, ಜನರ ಸಮಸ್ಯೆ ಗಳನ್ನು ಆಲಿಸಲು ಹಾಗೂ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕಳೆದ ಮೂರು ವರ್ಷಗಳಲ್ಲಿ ಜನ ಸ್ಪಂದನ ಕಾರ್ಯಕ್ರಮಗಳನ್ನು ಕೈಗೊಂಡಿದ್ದರೂ ಜನ ಸ್ಪಂದನ ಸಭೆಗಳಲ್ಲಿ ಇತ್ಯರ್ಥವಾದ ಅರ್ಜಿಗಳು ಹಾಗೂ ಬಾಕಿ ಉಳಿದಿರುವ ಅರ್ಜಿಗಳ ಕುರಿತಾದ ಮಾಹಿತಿ ಅಧಿಕಾರಿಗಳಿಗೆ ಇಲ್ಲ.
ಈ ಸಭೆಯಲ್ಲೂ ಹಾಜರಾಗಲು ನೋಟಿಸು ಕಳುಹಿಸಿರುವ ಹೆಚ್ಚಿನ ಇಲಾಖೆಗಳು ಗೈರು ಹಾಜರಾಗಿದ್ದು ಹಾಗೂ ಪ್ರಜಾ ಸೇವೆ ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಅಧಿಕಾರಿಗಳಲ್ಲಿ ಸ್ಪಷ್ಟತೆ ಇಲ್ಲದಿರುವುದಾಗಿದೆ. ಹಾಗಾಗಿ ಪ್ರಜಾಸೇವೆ ಆಂದೋಲನವೂ ಮತ್ತೊಂದು ಕಾಟಾಚಾರದ ಜನ ಸ್ಪಂದನ ಕಾರ್ಯಕ್ರಮವಾಗದೇ ಕ್ಷೇತ್ರದ ಜನ ಸಾಮಾನ್ಯರ ಬೇಡಿಕೆಗಳಿಗೆ ಹಾಗೂ ಸಮಸ್ಯೆಗಳಿಗೆ ಪರಿಣಾಮಕಾರಿಯಾಗಿ ಸ್ಪಂದಿಸಲು ಎಲ್ಲಾ ಇಲಾಖೆಗಳು ತಮ್ಮ ತಮ್ಮ ಹೊಣೆಯರಿತು,ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು ಎಂದರು.
ಸಭೆಯಲ್ಲಿ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷರಾದ ಮೋಹನ್ ಪೂಜಾರಿ, ಬೈಂದೂರು ತಹಶೀಲ್ದಾರ್ ಹಾಗೂ ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.
















