Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಕುಂದಾಪುರ: ಅಶೋಕ್‌ ತೆಕ್ಕಟ್ಟೆ ಅವರಿಗೆ ರಾಜ್ಯಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿ
    ಊರ್ಮನೆ ಸಮಾಚಾರ

    ಕುಂದಾಪುರ: ಅಶೋಕ್‌ ತೆಕ್ಕಟ್ಟೆ ಅವರಿಗೆ ರಾಜ್ಯಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿ

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್‌ ಕಾಂ ಸುದ್ದಿ.
    ಕುಂದಾಪುರ:
    ತಾಲೂಕಿನ ಹೆಸಕುತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಅಶೋಕ್‌ ತೆಕ್ಕಟ್ಟೆ ಅವರಿಗೆ 2026ನೇ ಸಾಲಿನ ರಾಜ್ಯಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ದೊರಕಿದೆ. ಬೆಂಗಳೂರಿನಲ್ಲಿ ನಡೆಯುವ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

    Click Here

    Call us

    Click Here

    ಅಶೋಕ್‌ ತೆಕ್ಕಟ್ಟೆ ಅವರು ಕಳೆದ 24 ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದು, ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿ, ಸಾಂಸ್ಕತಿಕ ವಿಕಸನ, ಕಲಿಕೆಯಲ್ಲಿ ನಾವಿನ್ಯತೆಯ ಶೋಧ, ಹೊಸ ಹೊಸ ಪ್ರಯೋಗಗಳ ಅನುಷ್ಠಾನದ ಮೂಲಕ ಶಾಲೆಯ ಹೆಸರನ್ನು ರಾಷ್ಟ್ರಮಟ್ಟದಲ್ಲಿ ಮೂಡಿಸುವಲ್ಲಿ ಶ್ರಮಿಸಿದ್ದಾರೆ.

    ಇಂಗ್ಲೀಷ್ ಭಾಷೆಯ ಸಂಪನ್ಮೂಲ ವ್ಯಕ್ತಿಯಾಗಿ ವಿದ್ಯಾರ್ಥಿಗಳು ಮಾತ್ರವಲ್ಲದೆ ಬೇರೆ ಬೇರೆ ಶಾಲಾ ಶಿಕ್ಷಕರಿಗೂ ತರಬೇತಿ ನೀಡುತ್ತಿದ್ದಾರೆ. ರಾಜ್ಯದಲ್ಲೇ ಮೊದಲ ಬಾರಿಗೆ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಇಂಗ್ಲಿಷ್ ಲ್ಯಾಂಗ್‌ಜ್ ಲ್ಯಾಬ್ ಸ್ಥಾಪನೆ, ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಗ್ರಾಮೀಣ ಪ್ರದೇಶದ ಸರಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಕಲಿಕೆ, ಪ್ರತಿ ದಿನದ ಬೆಳಿಗ್ಗೆ ಸ್ಪೋಕನ್ ಇಂಗ್ಲಿಷ್ ತರಗತಿ, 2015 ರಿಂದ ಪ್ರತಿ ದಿನ ಬೆಳಿಗ್ಗೆ 8 ಗಂಟೆಗೆ ಶಾಲೆಗೆ ತೆರಳಿ 8.30 ಯಿಂದ 9.30 ವರೆಗೆ ಸ್ಪೋಕನ್ ಇಂಗ್ಲಿಷ್ ಕ್ಲಾಸ್ ಮಾಡುತ್ತಿದ್ದಾರೆ. ಉಡುಪಿ ಜಿಲ್ಲೆಯಲ್ಲೇ ಮೊದಲ ಬಾರಿಗೆ Subject Wise Classroom ವ್ಯವಸ್ಥೆ ಆರಂಭ, ಚಟುವಟಿಕೆ ಆಧಾರಿತ,art integrated teaching, ಶಿಶು ಕೇಂದ್ರಿತ ಬೋಧನೆ, ಮಕ್ಕಳ ಇಂಗ್ಲೀಷ್ ಕಲಿಕೆಗಾಗಿ youtube ಚಾನೆಲ್, ಶಾಲೆಯಲ್ಲಿ ಚೆಸ್, ಭರತನಾಟ್ಯ, ಶಾಲಾ ಸಂಸತ್ ಸಂಚಾಲಕನಾಗಿ ಕೆಲಸ ಮಾಡುತ್ತಿದ್ದಾರೆ.

    ರಿಸರ್ವ್ ಬ್ಯಾಂಕ್ ಆಫ್‌ ಇಂಡಿಯಾದ ಅಹ್ವಾನದ ಮೇರೆಗೆ ಬೆಂಗಳೂರಿನ ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ ಕ್ವಿಜ್ ಸ್ಪರ್ಧೆಯ ರಿಸರ್ವ್ ಬ್ಯಾಂಕ್‌ ನಿರ್ದೇಶಕರ ಉಪಸ್ಥಿತಿಯಲ್ಲಿ ಕ್ವಿಜ್ ಮಾಸ್ಟರ್ ಆಗಿ ಕಾರ್ಯನಿರ್ವಹಣೆ, RIESI BANGALORE ಆಯೋಜಿಸಿದ ಅಂತಾರಾಷ್ಟ್ರೀಯ ಮಟ್ಟದ ಇ೦ಗ್ಲೀಷ್ ಕಾನ್ಸರೆನ್ಸ್ ನಲ್ಲಿ ಪ್ರಬಂಧ ಮ೦ಡನೆ, ಯುಎಸ್ ಗವರ್ನಮೆಂಟ್ ಪ್ರಾಯೋಜಕತ್ವದಲ್ಲಿ ಯೂನಿವರ್ಸಿಟಿ ಆಪ್ ಅರಿನದಿಂದ Professional Development for Teacher Trainers ಪದವಿ, ಉಡುಪಿ ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ‘ನಮ್ಮ ಇಂಚರ’ ಶಾಲೆಯಿಂದ ಮನೆಗೊಂದು ಪತ್ರಿಕೆ ಆರಂಭ, ಪತ್ರಿಕೆಗಳಲ್ಲಿ ನೂರಕ್ಕೂ ಹೆಚ್ಚು ಲೇಖನ ಹಾಗೂ ಕವನಗಳು ಪ್ರಕಟ. ತಾಲೂಕು ಹಾಗೂ ಜಿಲ್ಲಾ ಸಾಹಿತ್ಯ ಸಮ್ಮೇಳನಗಳಲ್ಲಿ ಕವನ ವಾಚನ ಕನ್ನಡ ಸಾಹಿತ್ಯ ಪರಿಷತ್‌ ಕೋಟೇಶ್ವರ ಹೋಬಳಿಯ ಸ್ಥಾಪಕ ಅಧ್ಯಕ್ಷ ಸ್ಥಾನ, ಜೇಸಿಐ ಕುಂದಾಪುರದ 2019 ನೇ ಸಾಲಿನ ಅಧ್ಯಕ್ಷರಾಗಿ ಸೇವೆ, ಈಗಾಗಲೇ 32 ಬಾರಿ ರಕ್ತದಾನ, ಹಲವರಿಗೆ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ತರಬೇತಿ ಸಂಪನ್ಮೂಲ ವ್ಯಕ್ತಿ, 50 ಕ್ಕೂ ಹೆಚ್ಚು ಸರಕಾರಿ, ಅನುದಾನಿತ, ಅನುದಾನರಹಿತ, ಸಿ ಬಿ ಎಸ್ ಇ ಶಾಲೆಗಳ ಶಿಕ್ಷಕರಿಗೆ ಇಂಗ್ಲೀಷ್ ತರಬೇತಿಗೆ ಸಂಪನ್ಮೂಲ ವ್ಯಕ್ತಿ, 300 ಕ್ಕೂ ಹೆಚ್ಚು ವೇದಿಕೆಗಳಲ್ಲಿ ವಿಶೇಷ ಸ್ಮರಣಶಕ್ತಿ ಪ್ರದರ್ಶನ, ರಾಜ್ಯಮಟ್ಟದಲ್ಲಿ ಪ್ರಸಾರ ಆಗುವ ರೇಡಿಯೋ ಕಾರ್ಯಕ್ರಮಗಳಾದ ಚುಕ್ಕಿ ಚಿನ್ನ, ಚಿಣ್ಣರ ಚುಕ್ಕಿ, edusat ಕಾರ್ಯಕ್ರಮಗಳಿಗೆ ಸಾಹಿತ್ಯ ರಚನೆ DSERT, RIESIಗಳಿಗಾಗಿ ರಾಜ್ಯಮಟ್ಟದ ಸಾಹಿತ್ಯ ರಚನೆಯ ಸಂಪನ್ಮೂಲ ವ್ಯಕ್ತಿ, ಕೋವಿಡ್ 19 ಸಮಯದಲ್ಲಿ ರಾಜ್ಯಮಟ್ಟದಲ್ಲಿ Happy English Web Series online ತರಬೇತಿ ಕಾರ್ಯಕ್ರಮ ಆರಂಭಿಸಿ ನಿರಂತರ 52 ವಾರಗಳ ಕಾಲ ತರಬೇತಿ ಆಯೋಜಿಸಿದ್ದಾರೆ.

    ಸಾಂಸ್ಕೃತಿಕ ವೇದಿಕೆಗಳ ವೇದಿಕೆಯ ರಚನೆ, ವರ್ಲಿ ಆರ್ಟ್, ಕೋಲಾಜ್ ಆರ್ಟ್, ಸ್ಯಾಂಡ್ ಆರ್ಟ್, ಕಾಲಿಗ್ರಾಫರ್ ಆಗಿ ಸಾಕಷ್ಟು ಕಲಾಕೃತಿ ರಚನೆ. ಭಾರತ ಜ್ಞಾನ ವಿಜ್ಞಾನ ಸಮಿತಿ, ಉಡುಪಿ ಜಿಲ್ಲೆ ಕುಂದಾಪುರ ಘಟಕದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

    ಇವರ ಸೇವೆ ಸಾಧನೆಗೆ 2015 ರಲ್ಲಿ ರಾಜ್ಯ ಸರಕಾರದಿಂದ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ, 2026-27ರ ರಾಷ್ಟ್ರಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯ ಅಂತಿಮ ಸುತ್ತಿಗೆ ಕರ್ನಾಟಕ ರಾಜ್ಯದಿಂದ ಆಯ್ಕೆಯಾಗಿ ರಾಷ್ಟ್ರಮಟ್ಟಕ್ಕೆ ನಾಮನಿರ್ದೇಶನಗೊಂಡ 6 ಶಿಕ್ಷಕರಲ್ಲಿ ಒಬ್ಬರು. ಕರ್ನಾಟಕ ರಾಜ್ಯ ಗುಣಮಟ್ಟ ಮೌಲ್ಯಂಕನ ದಲ್ಲಿ ಶಾಲೆಯು ರಾಜ್ಯಕ್ಕೇ ನಾಲ್ಕನೇ ಸ್ಥಾನದೊಂದಿಗೆ A ಶ್ರೇಣಿ ಪಡೆದಿದೆ. A ಶ್ರೇಣಿ ಪಡೆದ ರಾಜ್ಯದ ಕೇವಲ 5 ಶಾಲೆಗಳಲ್ಲಿ ಒಂದು ಎನ್ನುವ ಹೆಗ್ಗಳಿಕೆಯಲ್ಲಿ ನಿರ್ಣಾಯಕ ಪಾತ್ರ. ರೋಟರಿ ಕ್ಲಬ್, ಕುಂದಾಪುರ ಮಿಡ್ ಟೌನ್ ಇವರಿಂದ ನೇಶನ್ ಬಿಲ್ಡರ್ ಪ್ರಶಸ್ತಿ, ರೋಟರಿ ಕ್ಲಬ್ ಮಣಿಪಾಲ ಇವರಿಂದ People of Action Award, ಶ್ರೀ ಶೃಂಗೇರಿ ಶಂಕರ ಮಠ ಕುಂಭಾಶಿ ಇವರಿಂದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ, ತೆಕ್ಕಟ್ಟೆ ಫ್ರೆಂಡ್ಸ್ (ರಿ) ತೆಕ್ಕಟ್ಟೆ ಇವರಿಂದ ಸೃಜನಶೀಲ ಶಿಕ್ಷಕ ಪ್ರಶಸ್ತಿ, ರೋಟರಿ ಕ್ಲಬ್ ತೆಕ್ಕಟ್ಟೆ ಇವರಿಂದ ನೇಶನ್ ಬಿಲ್ಡರ್ ಪ್ರಶಸ್ತಿ, ಸರಕಾರಿ ನೌಕರರ ಕ್ರೀಡಾಕೂಟದಲ್ಲಿ 2024 ರಲ್ಲಿ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ರಾಜ್ಯಮಟ್ಟದಲ್ಲಿ ದ್ವಿತೀಯ ಸ್ಥಾನ, ಸರಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ 2025 ರಲ್ಲಿ ತೃತೀಯ ಸ್ಥಾನ, ಪ್ರಬಂಧ ಸ್ಪರ್ಧೆ, ಪಾಠೋಪಕಾರಣ ತಯಾರಿ ಸ್ಪರ್ಧೆ, ರಸಪ್ರಶ್ನೆ ಸ್ಪರ್ಧೆ, ಡಿಸ್ಕಸ್ ಥೋ, ಕ್ಯಾರಂ ಸ್ಪರ್ಧೆಗಳಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.

    Click here

    Click here

    Click here

    Call us

    Call us

    kundapura
    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ರೋಟರಿ ಕ್ಲಬ್ ಕೋಟ ಬ್ರಿಗೇಡ್: ಸದಸ್ಯತ್ವ ಅಭಿವೃದ್ಧಿ ಮತ್ತು ಪಬ್ಲಿಕ್ ಇಮೇಜ್‌ ಝೋನಲ್ ಸೆಮಿನಾರ್

    05/09/2026

    ವಂದೇ ಮಾತರಂ ಹೆಸರಿನಲ್ಲಿ ರಾಜಕೀಯ ಮಾಡುವುದನ್ನು ನಿಲ್ಲಿಸಿ: ಕೆ. ವಿಕಾಸ್ ಹೆಗ್ಡೆ

    05/09/2026

    ಬಸ್ರೂರಿನ ಕೋಟಿ ಚೆನ್ಯಯ್ಯ ಪಂಜೂರ್ಲಿ ಗರಡಿ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಉತ್ಸವ

    05/09/2026
    Leave A Reply Cancel Reply

    sixteen + 8 =

    Call us

    Click Here

    Call us

    Call us

    Call us
    Highest Viewed Recently
    • ಕುಂದಾಪುರ: ಅಶೋಕ್‌ ತೆಕ್ಕಟ್ಟೆ ಅವರಿಗೆ ರಾಜ್ಯಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿ
    • ರೋಟರಿ ಕ್ಲಬ್ ಕೋಟ ಬ್ರಿಗೇಡ್: ಸದಸ್ಯತ್ವ ಅಭಿವೃದ್ಧಿ ಮತ್ತು ಪಬ್ಲಿಕ್ ಇಮೇಜ್‌ ಝೋನಲ್ ಸೆಮಿನಾರ್
    • ವಂದೇ ಮಾತರಂ ಹೆಸರಿನಲ್ಲಿ ರಾಜಕೀಯ ಮಾಡುವುದನ್ನು ನಿಲ್ಲಿಸಿ: ಕೆ. ವಿಕಾಸ್ ಹೆಗ್ಡೆ
    • ಬಸ್ರೂರಿನ ಕೋಟಿ ಚೆನ್ಯಯ್ಯ ಪಂಜೂರ್ಲಿ ಗರಡಿ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಉತ್ಸವ
    • ಕುಂದಾಪುರ: ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.