Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಕಿರಿಮಂಜೇಶ್ವರ: ಶ್ರೀ ಕೃಷ್ಣ ಜನ್ಮಾಷ್ಟಮಿ ‘ಜನತಾ ರಸಬುಗ್ಗೆ 3.0’ ಮುದ್ದು ಕೃಷ್ಣ ಹಾಗೂ ಮುದ್ದು ರಾಧೆ ಸ್ಪರ್ಧೆ
    ಊರ್ಮನೆ ಸಮಾಚಾರ

    ಕಿರಿಮಂಜೇಶ್ವರ: ಶ್ರೀ ಕೃಷ್ಣ ಜನ್ಮಾಷ್ಟಮಿ ‘ಜನತಾ ರಸಬುಗ್ಗೆ 3.0’ ಮುದ್ದು ಕೃಷ್ಣ ಹಾಗೂ ಮುದ್ದು ರಾಧೆ ಸ್ಪರ್ಧೆ

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್‌ ಕಾಂ ಸುದ್ದಿ.
    ಕುಂದಾಪುರ:
    ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಕಿರಿಮಂಜೇಶ್ವರದ ಜನತಾ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್‌ನ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್‌ನಲ್ಲಿ ‘ಜನತಾ ರಸಬುಗ್ಗೆ 3.0’ ಕಾರ್ಯಕ್ರಮ ಅತ್ಯಂತ ಅದ್ದೂರಿಯಾಗಿ ನೆರವೇರಿತು.

    Click Here

    Call us

    Click Here

    ಈ ಕಾರ್ಯಕ್ರಮಕ್ಕೆ ಜೀ ಕನ್ನಡ ಸರಿಗಮಪ ಲಿಟಲ್ ಚಾಂಪ್ಸ್  ಖ್ಯಾತಿಯ ಮಂಗಳೂರಿನ ಲಿಟಲ್ ವೈಲಿನ ಚಾಂಪ್ ಅಸ್ಮಿತ್ ಎ. ಜೆ ವಿಶೇಷ ಅತಿಥಿಯಾಗಿ  ಆಗಮಿಸಿ ” ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ವೇದಿಕೆ ದೊರಕಬೇಕು. ಇದು ಅವರಲ್ಲಿ ಧೈರ್ಯ ಮತ್ತು ಆತ್ಮವಿಶ್ವಾಸವನ್ನು ತುಂಬುತ್ತದೆ. ಹೊಸ ಹೊಸ ಸಾಧನೆಗಳ ಕಡೆಗೆ ಅವರು ದೃಷ್ಟಿ ಹಾಯಿಸಲು ಇದು ಅನುಕೂಲ ಮಾಡಿಕೊಡುತ್ತದೆ ಹಾಗೆ ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ ಮುದ್ದು ಕೃಷ್ಣ ಮತ್ತು ಮುದ್ದು ರಾಧೆಯರ ಸ್ಪರ್ಧೆಗಳ ಮೂಲಕ ಮಕ್ಕಳ ಪ್ರತಿಭಾ ಪ್ರಕಾಶನಕ್ಕೆ ಅವಕಾಶವನ್ನು ನೀಡಿರುವುದು ಸ್ತುತ್ಯಾರ್ಹ” ಎಂದರು.

    https://www.youtube.com/live/nu7FEGqtrZY?si=XyUTu1d_n30h5WnE .

    ಜನತಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಗಣೇಶ ಮೊಗವೀರರು ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ “ನಮ್ಮ ಮಕ್ಕಳು ಕೇವಲ ಶೈಕ್ಷಣಿಕ ಚಟುವಟಿಕೆಗಳಿಗೆ ಸೀಮಿತರಾಗದೆ, ಸಾಂಸ್ಕೃತಿಕ ಕ್ಷೇತ್ರದಲ್ಲೂ ಸಾಧನೆಗೈಯುವಂತಾಗಬೇಕೆಂಬುದೇ ನಮ್ಮ ಅಭಿಲಾಷೆಯಾಗಿದೆ. ಆ ನಿಟ್ಟಿನಲ್ಲಿಯೇ ನಮ್ಮ ವಿದ್ಯಾಸಂಸ್ಥೆಯಲ್ಲಿ ಮುದ್ದು ಕೃಷ್ಣ ಮತ್ತು ಮುದ್ದು ರಾಧೆ ಎಂಬ ಕಾರ್ಯಕ್ರಮವನ್ನು  ಆಯೋಜಿಸುತ್ತಿದ್ದೇವೆ. ಕೃಷ್ಣ ಜನ್ಮಾಷ್ಠಮಿ ನಮ್ಮ ನಾಡಿನಲ್ಲಿ ಸಂಭ್ರಮ- ಸಡಗರದಿಂದ ಆಚರಿಸುವ ಹಬ್ಬವಾಗಿದೆ. ಕೃಷ್ಣ ಜಗತ್ತಿಗೆ ನೀಡಿರುವ ಸಂದೇಶಗಳು ಇಂದಿಗೂ ಪ್ರಸ್ತುತವಾಗಿದ್ದು, ಅವುಗಳ ಪಾಲನೆ ಮಾಡುತ್ತಾ ಜೀವನದಲ್ಲಿ ಮುಂದೆ ಸಾಗೋಣ” ಎಂದು ಕರೆಕೊಟ್ಟರು.

    1 ವರ್ಷದಿಂದ 3 ವರ್ಷದೊಳಗಿನ ಮಕ್ಕಳಿಗೆ ಹಾಗೂ 3 ವರ್ಷ ಮೇಲ್ಪಟ್ಟು 6 ವರ್ಷದೊಳಗಿನ ಮಕ್ಕಳಿಗೆ “ಮುದ್ದು ಕೃಷ್ಣ–ಮುದ್ದು ರಾಧೆ’ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಆಕರ್ಷಕ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು.

    ಜಿದ್ದಾಜಿದ್ದಿನಿಂದ ಕೂಡಿದ್ದ ಮುದ್ದು ಕೃಷ್ಣ ಸ್ಪರ್ಧೆಯ ಜೂನಿಯರ್ ವಿಭಾಗದಲ್ಲಿ ಪ್ರಿಶಾ ಸಿ. ಶೆಟ್ಟಿ ಪ್ರಥಮ ಸ್ಥಾನದೊಂದಿಗೆ ₹15,999, ಮೈತ್ರೆಯಿ ವಿ ಐತಾಳ್ ದ್ವಿತೀಯ ಸ್ಥಾನದೊಂದಿಗೆ ₹13,999, ನಯಾಂಶ್ ಸುಶೀರ್ ತೃತೀಯ ಸ್ಥಾನದೊಂದಿಗೆ ₹12,999, ಅನ್ಮಯ್ ಎಮ್ ಆಚಾರ್ಯ 4 ನೇ ಸ್ಥಾನದೊಂದಿಗೆ ₹11,999, ಕ್ಷೀರ ಕೆ ಪೂಜಾರಿ 5 ನೇ ಸ್ಥಾನದೊಂದಿಗೆ ₹4,999,  ದಿವ್ಯಾಂಶ್ ವಿ ಮೊಗವೀರ 6ನೇ ಸ್ಥಾನದೊಂದಿಗೆ ₹4,555, ಶನಯ ಗಣೇಶ್ 7ನೇ ಸ್ಥಾನದೊಂದಿಗೆ ₹3,999, ಆರ್ವಿನ್ ಎ. ಪೂಜಾರಿ 8ನೇ ಸ್ಥಾನದೊಂದಿಗೆ ₹3,555, ಶೈಶಾ 9ನೇ ಸ್ಥಾನದೊಂದಿಗೆ ₹2,999 ಹಾಗೂ ಆರ್ನಾ ಎ 10ನೇ ಸ್ಥಾನದೊಂದಿಗೆ ₹2,555 ರೂಪಾಯಿಗಳ ನಗದು ಬಹುಮಾನದೊಂದಿಗೆ ಪದಕ, ಫಲಕ ಮತ್ತು ಪ್ರಮಾಣ ಪತ್ರಗಳನ್ನು ಪಡೆದುಕೊಂಡರು.

    Click here

    Click here

    Click here

    Call us

    Call us

    ಸೀನಿಯರ್ ವಿಭಾಗದ ಮುದ್ದುಕೃಷ್ಣ ಸ್ಪರ್ಧೆಯಲ್ಲಿ  ಅಘನ್ಯ ಜೆ ಪೂಜಾರಿ ಪ್ರಥಮ ಸ್ಥಾನದೊಂದಿಗೆ ₹15,999, ರಿಯಾ ಪಿ. ಶ್ರೀಯಾನ್, ದ್ವಿತೀಯ ಸ್ಥಾನದೊಂದಿಗೆ ₹13,999, ಶಿವಕಾರ್ತಿಕೇಯ ತೃತೀಯ ಸ್ಥಾನದೊಂದಿಗೆ ₹12,999, ಶ್ರೀದಾ ಕೆ. ಇವರು 4ನೇ ಸ್ಥಾನದೊಂದಿಗೆ ₹11,999,  ಸುತೀಕ್ಷಾ ಎಸ್. ಆಚಾರ್ಯ ಇವರು 5ನೇ ಸ್ಥಾನದೊಂದಿಗೆ ₹4,999, ಶ್ರೀಯಾ ಕೆ. ಕಾಂಚನ್ 6ನೇ ಸ್ಥಾನದೊಂದಿಗೆ ₹4,555, ವಿಧಾತ್ರಿ ವಿ ಭಟ್ 7ನೇ ಸ್ಥಾನದೊಂದಿಗೆ ₹3,999, ಆಕೃತಿ ಎ ಪೂಜಾರಿ 8ನೇ ಸ್ಥಾನದೊಂದಿಗೆ ₹3,555, ಶ್ರೀಯಾ ವೈ ಖಾರ್ವಿ 9ನೇ ಸ್ಥಾನದೊಂದಿಗೆ ₹2,999 ಹಾಗೂ ವೈನವಿ ಜೆ ಸಾಲಿಯಾನ್ 10ನೇ ಸ್ಥಾನದೊಂದಿಗೆ ₹2,555 ರೂಪಾಯಿಗಳ ನಗದು ಬಹುಮಾನದೊಂದಿಗೆ ಪದಕ, ಫಲಕ ಮತ್ತು ಪ್ರಮಾಣ ಪತ್ರಗಳನ್ನು ಪಡೆದುಕೊಂಡರು.

    ಜೂನಿಯರ್ ವಿಭಾಗದ ಮುದ್ದು ರಾಧೆ   ಸ್ಪರ್ಧೆಯಲ್ಲಿ ವಿಶಿಕಾ ಪ್ರಥಮ ಸ್ಥಾನ ಪಡೆದು ₹5,999, ಆರ್ಯಹಿ ಯೋಗೀಶ್ ದ್ವಿತೀಯ ಸ್ಥಾನದೊಂದಿಗೆ ₹4,999, ಬಿ ಆರ್ ರಾಧಿಕಾ ಮಯ್ಯ ತೃತೀಯ ಸ್ಥಾನದೊಂದಿಗೆ ₹3,999 ರೂಪಾಯಿಗಳ  ನಗದು ಬಹುಮಾನದೊಂದಿಗೆ ಪದಕ, ಫಲಕ ಮತ್ತು ಪ್ರಮಾಣ ಪತ್ರಗಳನ್ನು ಪಡೆದುಕೊಂಡರು.

    ಸೀನಿಯರ್ ವಿಭಾಗದ ಮುದ್ದು ರಾಧೆ ಸ್ಪರ್ಧೆಯಲ್ಲಿ ಆರಾಧ್ಯ ಆರ್ ಪ್ರಥಮ ಸ್ಥಾನ ಪಡೆದು ₹5,999, ಜೇಷ್ನ ದ್ವಿತೀಯ ಸ್ಥಾನದೊಂದಿಗೆ ₹4,999, ಕೃತಿ ವೈ ತೃತೀಯ ಸ್ಥಾನದೊಂದಿಗೆ ₹3,999 ರೂಪಾಯಿಗಳ ನಗದು ಬಹುಮಾನದೊಂದಿಗೆ ಪದಕ, ಫಲಕ ಮತ್ತು ಪ್ರಮಾಣ ಪತ್ರಗಳನ್ನು ಪಡೆದುಕೊಂಡರು.

    ಮುದ್ದುಕೃಷ್ಣ ಜ್ಯೂನಿಯರ್ ವಿಭಾಗದಲ್ಲಿ ಆರ್ವಿಕ ಎ, ಮನನ್ ಡಿ ಖಾರ್ವಿ, ಯಶ್ವಿ ಮಣಿಕಂಠ ಆಚಾರ್ಯ, ಶರದ್ವಿ ಆರ್, ರಿಯಾನ್ಶಿ ಪಿ ಖಾರ್ವಿ, ಆರ್ವಿ ಅವಿನಾಶ್ ಭಂಡಾರಿ, ದ್ವಿತ್ವನ್ ನಾಗರಾಜ್,ಅಯಾನ್ ವಿ ಎಸ್, ನಿಹಾನ್ವಿ ಜಿ ಮತ್ತು ನಕ್ಷತ್ರ ಎಸ್ ಸಮಾಧಾನಕರ ಬಹುಮಾನಗಳನ್ನು ಪಡೆದರು.

    ಮುದ್ದುಕೃಷ್ಣ ಸೀನಿಯರ್ ವಿಭಾಗದಲ್ಲಿ ಅವ್ಯನ್ ಜಿ ಎಸ್, ರಿಶಾನಿ ವಿನೋದ, ಯುಕ್ತ ಜನಾರ್ಧನ, ಧನ್ವಿಕ ಡಿ ಕುಂದರ್, ಐರಾ ಗೌಡ, ನಿಶಾಲ್ ಬಿ ದೇವಾಡಿಗ, ಜಾಹ್ನವಿ, ಬೃಂದಾ ಖಾರ್ವಿ, ಜಯಶ್ರೀ ಜಗದೀಶ, ಅನರ್ಘ್ಯ ಹೆಚ್, ನಿಯತಿ ಹೆಚ್ ಪಿ, ಪ್ರಖ್ಯಾತ ಖಾರ್ವಿ, ಗಾನ್ಯ ಎಸ್ ಖಾರ್ವಿ, ವರುಣಿಕ ಸಿ ಶೆಟ್ಟಿ, ಭವಿಷ್ಯ ಬಿ ದೇವಾಡಿಗ  ಸಮಾಧಾನಕರ ಬಹುಮಾನಗಳನ್ನು ಪಡೆದರು.

    ಅದೃಷ್ಟ ಕೂಪನ್ ಮೂಲಕ ದ್ರಿತ್ವಾನ್ ಚಿನ್ನದ ನಾಣ್ಯವನ್ನು ಹಾಗೂ ಅವಿನ್ ಆರ್ ಆಚಾರ್ಯ, ಆರ್ಯ ಪ್ರಧಾಯಿನಿ ಜಿ ಆಚಾರ್ಯ, ಸ್ಕಂದ, ಯಶ್ವಿ ಮಣಿಕಂಠ ಆಚಾರ್ಯ, ವಚನ ನಾಗರಾಜ ಆಚಾರ್ಯ, ಪ್ರಖ್ಯಾತ ಖಾರ್ವಿ, ದಿಶಾ ಮತ್ತು ಸುದೀಕ್ಷ ಎಸ್. ಆಚಾರ್ಯ ಬೆಳ್ಳಿ ನಾಣ್ಯವನ್ನು ಪಡೆದುಕೊಂಡರು.

    ಹಾಗೂ ಭಾಗವಹಿಸಿದ ಎಲ್ಲ ಸ್ಪರ್ಧಿಗಳಿಗೂ ಪದಕ ಹಾಗೂ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ಜನತಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಶ್ಯಾಮಲಾ ಗಣೇಶ ಮೊಗವೀರ, ಹೆಮ್ಮಾಡಿಯ ಜನತಾ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲರಾದ ರಮೇಶ್ ಪೂಜಾರಿ , ಜನತಾ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರು ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಉದಯ್ ನಾಯ್ಕ ಪೋಷಕರು, ಶಿಕ್ಷಕ- ಶಿಕ್ಷಕೇತರ ವರ್ಗದವರು ಮತ್ತು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

    ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಶಾಲೆಯ ಮುಖ್ಯ ಶಿಕ್ಷಕಿ ದೀಪಿಕಾ ಆಚಾರ್ಯ ಸ್ವಾಗತಿಸಿದರು, ಸಹಶಿಕ್ಷಕಿ ಅನಿತಾ ಮತ್ತು ಸಹ ಶಿಕ್ಷಕ ಮಹಾದೇವ ಕಾರ್ಯಕ್ರಮ ನಿರೂಪಿಸಿದರು. ಸಹ ಶಿಕ್ಷಕ ರಾಘವೇಂದ್ರ ದುರ್ಗ ಬಿಲ್ಲವ ವಂದಿಸಿದರು.

    kundapura
    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಪ್ಲಾಸ್ಟಿಕ್‌ನಲ್ಲಿ ಸಂಗ್ರಹಿಸಿದ ನೀರು ಆರೋಗ್ಯಕ್ಕೆ ಮಾರಕ: ಶ್ರೀ ರಾಘವೇಶ್ವರ

    07/09/2026

    ಕುಂದಾಪುರ: ಶಿಕ್ಷಕರ ದಿನಾಚರಣೆಯ ಅಂಗವಾಗಿ ಶಿಕ್ಷಕ ರವಿಶಂಕರ್‌ ಹೆಬ್ಬಾರ್ ಅವರಿಗೆ ಸನ್ಮಾನ

    07/09/2026

    ಬದುಕಿನ ಪರಿಷ್ಕಾರಕ್ಕೆ ಸಂಸ್ಕೃತ ಅಗತ್ಯ: ಆದರ್ಶ ಗೋಖಲೆ

    07/09/2026
    Leave A Reply Cancel Reply

    5 × 1 =

    Call us

    Click Here

    Call us

    Call us

    Call us
    Highest Viewed Recently
    • ಕಿರಿಮಂಜೇಶ್ವರ: ಶ್ರೀ ಕೃಷ್ಣ ಜನ್ಮಾಷ್ಟಮಿ ‘ಜನತಾ ರಸಬುಗ್ಗೆ 3.0’ ಮುದ್ದು ಕೃಷ್ಣ ಹಾಗೂ ಮುದ್ದು ರಾಧೆ ಸ್ಪರ್ಧೆ
    • ಪ್ಲಾಸ್ಟಿಕ್‌ನಲ್ಲಿ ಸಂಗ್ರಹಿಸಿದ ನೀರು ಆರೋಗ್ಯಕ್ಕೆ ಮಾರಕ: ಶ್ರೀ ರಾಘವೇಶ್ವರ
    • ಕುಂದಾಪುರ: ಶಿಕ್ಷಕರ ದಿನಾಚರಣೆಯ ಅಂಗವಾಗಿ ಶಿಕ್ಷಕ ರವಿಶಂಕರ್‌ ಹೆಬ್ಬಾರ್ ಅವರಿಗೆ ಸನ್ಮಾನ
    • ಬದುಕಿನ ಪರಿಷ್ಕಾರಕ್ಕೆ ಸಂಸ್ಕೃತ ಅಗತ್ಯ: ಆದರ್ಶ ಗೋಖಲೆ
    • ಕೋಟ ಪಂಚವರ್ಣ ಸಂಘಟನೆ ವತಿಯಿಂದ ಶಿಕ್ಷಕರ ದಿನಾಚರಣೆ, ಗುರುವಂದನೆ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.