ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕ್ಷೇತ್ರ ಸಂಪನ್ಮೂಲ ಕೇಂದ್ರ ಬೈಂದೂರು ಇಲ್ಲಿ ವಿಶೇಷ ಚೇತನ ವಿದ್ಯಾರ್ಥಿಗಳಿಗೆ ಸರಕಾರದಿಂದ ಕೊಡ ಮಾಡಲ್ಪಟ್ಟ ಸಾಧನ ಸಲಕರಣೆ ವಿತರಣಾ ಕಾರ್ಯಕ್ರಮ ಬಿಇಓ ಕಚೇರಿ ಅಧ್ಯಕ್ಷರಾದ ಮನೋರಾಜ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಬೈಂದೂರಿನ ಶಾಸಕರಾದ ಗುರುರಾಜ್ ಶೆಟ್ಟಿ ಗಂಟಿಹೊಳೆ ಅವರು ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಬೈಂದೂರು ತಾಲೂಕು ಗ್ಯಾರೆಂಟಿ ಯೋಜನೆಯ ಅಧ್ಯಕ್ಷರಾದ ಮೋಹನ್ ಪೂಜಾರಿ, ಪಟ್ಟಣ ಪಂಚಾಯಿತಿ ಬೈಂದೂರಿನ ಆರೋಗ್ಯ ನಿರೀಕ್ಷಕರಾದ ಸಂತೋಷ್, ಕಂಬದ ಕೋಣೆ ಸಂಯೋಜಕ ವೃತ್ತದ ECO ಸತ್ಯನಾ ಕೊಡೇರಿ, ಬೈಂದೂರು ಸಂಯೋಜಕ ಕೇಂದ್ರದ Eco ರಾಜೇಶ್, ಬೈಂದೂರು ಬಿ ಆರ್ ಪಿ ಮಂಜುನಾಥ ದೇವಾಡಿಗ, ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾನ್ಯಶಾಸಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲ ವಿಶೇಷ ಚೇತನ ವಿದ್ಯಾರ್ಥಿಗಳಿಗೆ ಶ್ರವಣೋಪಕರಣ, ವೀಲ್ ಚೇರ್, ಎಂ ಆರ್ ಕಿಟ್ ಮುಂತಾದ ಸಾಧನ ಸಲಕರಣೆಗಳನ್ನುವಿತರಿಸಿದರು. ಸಿಆರ್‌ಪಿಗಳಾದ ಗಣೇಶ್ ಪೂಜಾರಿ ರಾಮನಾಥ ಮೇಸ್ತ ಬಿಐಈಆರ್ ಟಿ ನಾಗೇಶ ಸಹಕರಿಸಿದರು. ಬಿಐಇಆರ್‌ಟಿ ನಾಗರತ್ನ ಕಾರ್ಯಕ್ರಮ ನಿರೂಪಿಸಿದರು. ಬಿಆರ್‌ಪಿ ಮಂಜುನಾಥ ದೇವಾಡಿಗ ಸ್ವಾಗತಿಸಿದರು. ಸಿಆರ್‌ಪಿ ಯಶೋಧ ಧನ್ಯವಾದಗಳನ್ನು ಅರ್ಪಿಸಿದರು.
















