ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಡಾ. ಶಿವರಾಮ ಕಾರಂತ ಪ್ರತಿಷ್ಠಾನ ಕೋಟ, ಕೋಟತಟ್ಟು ಗ್ರಾಮ ಪಂಚಾಯತ್, ಉಡುಪಿಯ ಹಾಜಿ ಅಬ್ದುಲ್ಲ ಸಾಹೇಬ್ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್, ಸಂದೀಪ್ ಶೆಟ್ಟಿ ಸಾರಥ್ಯದ ಏಸ್ ಕ್ರೀಟ್ ಅಡೆಷನ್ಸ್ ಹಾಗೂ ‘ಉಸಿರು ಕೋಟ’ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ನೀಡಲಾಗುವ 2026ನೇ ಸಾಲಿನ ಪ್ರತಿಷ್ಠಿತ ಕಾರಂತ ಶಿಕ್ಷಕ ಪುರಸ್ಕಾರಕ್ಕೆ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರು ಆಯ್ಕೆಯಾಗಿದ್ದಾರೆ.
ಪ್ರಾಥಮಿಕ ಶಾಲಾ ವಿಭಾಗ:
ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕೋಣಿಹರ ಶಿಕ್ಷಕ ಯಶವಂತ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಗ್ಗೇರಿ ಸಬಿತ. ಕೆ., ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಕಾಮಜಲು ಸುಧಾ ಸಂದೇಶ್, ದ. ಕ. ಜಿ. ಪಂ. ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕಾರ್ನಾಡು ಶ್ರೀದೇವಿ ಸತ್ಯನಾರಾಯಣ ಮುಲ್ಕಿ, ಬಿಎಂ ಆಂಗ್ಲ ಮಾಧ್ಯಮ ಶಾಲೆ ಪರ್ಕಳ ವಿನಯ ನಾಗರಾಜ ಬಾಯರಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೆಸ್ಕುತ್ತೂರು ವಿಜಯ ಆರ್, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಸ ಕಾರ್ಕಡ ಸತ್ಯನಾರಾಯಣ, ಕರ್ನಾಟಕ ಪಬ್ಲಿಕ್ ಸ್ಕೂಲ್ ಹೊಸ್ಮಾರು ನಾಗೇಶ ನಲ್ಲೂರು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಡುಕುಡೂರು ಹರೀಶ್ ಪೂಜಾರಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಣೂರು ಪಡುಕರೆ ವಾಣಿ, ಸೇವಾ ಸಂಗಮ ವಿದ್ಯಾಕೇಂದ್ರ ವಿದ್ಯಾಗಿರಿ ತೆಕ್ಕಟ್ಟೆ ಹರ್ಷ ಕೋಟೇಶ್ವರ.
ಪ್ರೌಢಶಾಲಾ ವಿಭಾಗ:
ಕರ್ನಾಟಕ ಪಬ್ಲಿಕ್ ಸ್ಕೂಲ್ ಕೋಟೇಶ್ವರ ಸುಧಾ ಬಾಯಿ ನಾಯಕ, ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆ ಕುಂದಾಪುರ ಹರೀಶ ಆಚಾರ್ಯ, ಶ್ರೀ ರಾಮ ವಿದ್ಯಾಕೇಂದ್ರ ಕೋಡಿ ಕುಂದಾಪುರ ಜಿತೇಂದ್ರ, ಅಮೃತ ಭಾರತಿ ವಿದ್ಯಾಕೇಂದ್ರ ಹೆಬ್ರಿ ಮಹೇಶ್ ಹೈಕಾಡಿ, ಸರಕಾರಿ ಪ್ರೌಢಶಾಲೆ ಕಾವಡಿ ಸುಭಿಕ್ಷಾ ಶೆಟ್ಟಿ, ಸರಕಾರಿ ಪ್ರೌಢಶಾಲೆ ಹೈಕಾಡಿ ಪ್ರವೀಣ್ ಕುಮಾರ್ ಶೆಟ್ಟಿ, ಸರಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ), ಕಬಕ ಡಾ. ಶಾಂತಾ ಪುತ್ತೂರು, ಸರಕಾರಿ ಪ್ರೌಢಶಾಲೆ ಬಡಗ ಎಕ್ಕಾರು ಇಂದಿರಾ ಎನ್. ರಾವ್, ಸಿದ್ಧಿ ವಿನಾಯಕ ವಸತಿ ಶಾಲೆ ಹಟ್ಟಿಯಂಗಡಿ ರಾಮ ದೇವಾಡಿಗ, ಸರಕಾರಿ ಪ್ರೌಢಶಾಲೆ ಯಲ್ದುರ್ ಮಮತಾರಾಣಿ ಕೆ., ಸರಕಾರಿ ಪ್ರೌಢಶಾಲೆ ಕೊಯಿಲ ಜನಾರ್ಧನ್, ಸರಕಾರಿ ಪ್ರೌಢಶಾಲೆ ಮಣೂರು ಪಡುಕೆರೆ ರೂಪ, ವಿವೇಕ ಬಾಲಕಿಯರ ಪ್ರೌಢಶಾಲೆ ಕೋಟ ಮಹಾಲಕ್ಷ್ಮಿ ಸೋಮಯಾಜಿ ಆಯ್ಕೆಯಾಗಿದ್ದಾರೆ.
ಆಯ್ಕೆಯಾದ ಪುರಸ್ಕೃತ ಶಿಕ್ಷಕರಿಗೆ ಸೆ.26ರ ಶನಿವಾರ ಅಪರಾಹ್ನ 4.00 ಗಂಟೆಗೆ ಕೋಟದ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್‌ನಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನೀಡಿ ಗೌರವಿಸಲಾಗುವುದು ಎಂದು ಪ್ರತಿಷ್ಠಾನದ ಗೌರವಾಧ್ಯಕ್ಷ ಆನಂದ ಸಿ. ಕುಂದರ್, ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ, ಪಿಡಿಓ ರವೀಂದ್ರ ರಾವ್ ಹಾಗೂ ಕಾರ್ಯದರ್ಶಿ ಸುಮತಿ ಅಂಚನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
















