ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಗಣೇಶೋತ್ಸವ ಕಾರ್ಯಕ್ರಮದ ಮೂಲಕ ಕೋಟ ಸಾರ್ವಜನಿಕ ಗಣೇಶೋತ್ಸವ ಸಾಮಾಜಿಕ ಸೇವಾ ಕಾರ್ಯವನ್ನು ನಿಜಕ್ಕೂ ಶ್ಲಾಘನೀಯ ಎಂದು ಕುಂದಾಪುರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಹೇಳಿದರು.
ಅವರು ಗುರುವಾರ ಕೋಟದ ಅಮೃತೇಶ್ವರೀ ದೇಗುಲದ ಸಭಾಂಗಣದಲ್ಲಿ ಕೋಟದ 51ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿ, ಗಣೇಶೋತ್ಸವ ಸಾಂಸ್ಕೃತಿಕವಾಗಿ ಜನಮಾನಸದಿ ನೆಲೆಯೂರಿ ಜಾತಿ ಮತ ಭೇದ ತೊರೆದು ಆಚರಿಸುವ ಉತ್ಸವವಾಗಿ ರೂಪುಗೊಂಡಿದೆ ಎಂದರು.
ಈ ಸಂದರ್ಭದಲ್ಲಿ ಕೋಟ ಗ್ರಾಮಸಹಾಯಕ ರಾಜು ಕುಂದರ್,ನ್ಯಾಯವಾದಿ ಕರುಣಾಕರ ನಾಯ್ಕ್,ಅಟಲ್ ಜೀ ಕೇಂದ್ರದ ಗಿರೀಶ್ ಪೂಜಾರಿ ಇವರುಗಳನ್ನು ಸನ್ಮಾನಿಸಲಾಯಿತು.
ಇದೇವೇಳೆ ಉತ್ಸವದಲ್ಲಿ ಹಮ್ಮಿಕೊಂಡ ಇತರ ಚಟುವಟಿಕೆಗಳ ಸ್ಪರ್ಧಾ ಕಾರ್ಯಕ್ರಮದಲ್ಲಿ ವಿಜೇತರಾದರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಸಭಾಧ್ಯಕ್ಷತೆಯನ್ನು ಸಮಿತಿಯ ಗೌರವಾಧ್ಯಕ್ಷ ಆನಂದ್ ಸಿ. ಕುಂದರ್ ವಹಿಸಿದ್ದರು. ಕಾರ್ಯಕ್ರಮವನ್ನು ಸಮಿತಿಯ ಅಧ್ಯಕ್ಷ ಜಿ.ಎಸ್. ಆನಂದ್ ದೇವಾಡಿಗ ಉದ್ಘಾಟಿಸಿ, ಸ್ವಾಗತಿಸಿದರು.
ಮುಖ್ಯ ಅಭ್ಯಾಗತರಾಗಿ ಮಂದಾರ್ತಿ ದೇಗುಲದ ಅಭ್ಯಂತರ ಪ್ರದೀಪ್ ಶೆಟ್ಟಿ ಉಪಸ್ಥಿತರಿದ್ದರು. ಸಲಹಾ ಸಮಿತಿಯ ಪ್ರಭಾಕರ್ ಅಡಿಗ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಮಿತಿಯ ಕೋಶಾಧಿಕಾರಿ ಚಂದ್ರ ಪೂಜಾರಿ ಲೆಕ್ಕ ಪತ್ರ ವಾಚಿಸಿದರು. ರಂಜಿತ್, ಜೀವನ್, ಅವಿನಾಶ್ ಸನ್ಮಾನ ಪತ್ರ ವಾಚಿಸಿದರು. ಸಮಿತಿಯ ಕಾರ್ಯದರ್ಶಿ ಚಂದ್ರ ಆಚಾರ್ ನಿರೂಪಿಸಿ, ವಂದಿಸಿದರು.
ಕೋಟದ ಅಮೃತೇಶ್ವರೀ ದೇಗುಲದ ಸಭಾಂಗಣದಲ್ಲಿ ಕೋಟದ 51ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಸಭಾಕಾರ್ಯಕ್ರಮದಲ್ಲಿ ಕೋಟ ಗ್ರಾಮಸಹಾಯಕ ರಾಜು ಕುಂದರ್,ನ್ಯಾಯವಾದಿ ಕರುಣಾಕರ ನಾಯ್ಕ್,ಅಟಲ್ ಜೀ ಕೇಂದ್ರದ ಗಿರೀಶ್ ಪೂಜಾರಿ ಇವರುಗಳನ್ನು ಸನ್ಮಾನಿಸಲಾಯಿತು.
ಕೋಟ.ಸೆ.೧೮ ಕೋಟ ಗಣೇಶೋತ್ಸವ
















