ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಸಿಬ್ಬಂದಿ ಕ್ಷೇಮಪಾಲನಾ ಸಮಿತಿ ಆಶ್ರಯದಲ್ಲಿ ಸೆಪ್ಟೆಂಬರ್ 17,18 ಮತ್ತು 19ರಂದು ಕಾಲೇಜಿನ ಮೂಕಾಂಬಿಕಾ ಸಭಾಂಗಣದಲ್ಲಿ ಸಿಬ್ಬಂದಿಗಳಿಗೆ ಉಡುಪಿಯ ಹಾರ್ಟ್ಫುಲ್ನೆಸ್ ಸಂಸ್ಥೆಯವರು ಧ್ಯಾನದ ಕುರಿತು ಕಾರ್ಯಗಾರ ನಡೆಸಿದರು.
ಉಡುಪಿಯ ಹಾರ್ಟ್ಫುಲ್ನೆಸ್ ಸಂಸ್ಥೆಯ ತರಬೇತುದರಾದ ವಿವೇಕಾನಂದ ಪೈ ಅವರು ಮೂರು ದಿನದ ತರಬೇತಿ ಕಾರ್ಯಗಾರವನ್ನು ನಡೆಸಿಕೊಟ್ಟರು.
ಪ್ರಾಂಶುಪಾಲರಾದ ಡಾ. ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಹಾರ್ಟ್ಫುಲ್ನೆಸ್ ನ ತರಬೇತುದಾರ, ನಿವೃತ್ತ ಸರ್ಜನ್ ಡಾ. ಸುರೇಶ್ ಬಾಳಿಗ ಹಾಗೂ ಹಾರ್ಟ್ಫುಲ್ನೆಸ್ ನ ಸದಸ್ಯ ಪ್ರಭಾಕಿರಣ್ ಕೆ. ಶೆಟ್ಟಿ ಉಪಸ್ಥಿತರಿದ್ದರು.
ಉಪ-ಪ್ರಾಂಶುಪಾಲ ಡಾ. ಚೇತನ್ ಶೆಟ್ಟಿ ಕೋವಾಡಿ ಹಾಗೂ ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ತನುಜಾ ಮೂರು ದಿನದ ತರಬೇತಿಯ ಕುರಿತು ಅನುಭವ ಹಂಚಿಕೊಂಡರು. ಸಿಬ್ಬಂದಿ ಕ್ಷೇಮಪಾಲನಾ ಸಮಿತಿಯ ಕಾರ್ಯದರ್ಶಿ ಮಹೇಶ್ ನಾಯ್ಕ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
















