ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ರಾಮಕ್ಷತ್ರಿಯ ಯುವಕ ಸಮಾಜ ನೇತೃತ್ವದಲ್ಲಿ ಅಕ್ಟೋಬರ್ 17ರಿಂದ 20ರ ತನಕ 40ನೇ ವರ್ಷದ ಶ್ರೀ ಶಾರದೋತ್ಸವ ಸಮಾರಂಭವು ಅದ್ದೂರಿಯಾಗಿ ಜರುಗಲಿದೆ. ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ಜರುಗಿತು.
ಬೈಂದೂರು ರಾಮಕ್ಷತ್ರಿಯ ಸಮಾಜದ ಅಧ್ಯಕ್ಷರಾದ ಗುರುದತ್ತ ಹೆಬ್ಬಾಗಿಲುಮನೆ ತಗ್ಗರ್ಸೆ ಮತ್ತು ಶ್ರೀ ರಾಮ ವಿವಿಧೊದ್ದೇಶ ಟ್ರಸ್ಟ್ ಅಧ್ಯಕ್ಷರಾದ ರಾಮಕೃಷ್ಣ ಶೇರುಗಾರ್ ಬಿಜೂರು ಉಪಸ್ಥಿತಿಯಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು.

ಈ ವೇಳೆ ಸಮಾಜದ ಪ್ರಮುಖರಾದ ಸುಬ್ರಾಯ ಸೋಡಿತಾರ್, ಜಯಾನಂದ ಹೋಬಳಿದಾರ್, ಸದಾಶಿವ ಡಿ. ಪಡುವರಿ, ಕೃಷ್ಣಯ್ಯ ಮದ್ದೋಡಿ ವೆಂಕಟರಮಣ ಬಿಜೂರು, ಶಿವಾನಂದ ಮುದ್ದೋಡಿ, ದಿನಕರ ಹೋಬಳಿದಾರ್, ಆನಂದ ಮುದ್ದೋಡಿ, ಸೀತಾರಾಮ ಎಸ್., ವಾಸುದೇವ ಕೆ. ಹಾಗೂ ಯುವಕ ಸಮಾಜದ, ಗೌರವಾಧ್ಯಕ್ಷ ರಾಜಶೇಖರ್ ರೊಕ್ಕನ್, ಅಧ್ಯಕ್ಷ ರಾಜೇಶ್ ಕಲ್ಲುಕಂಟ, ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ದಡ್ಡು, ಕಾರ್ಯದರ್ಶಿ ಶಿವಾನಂದ ದುಬಾರಿ, ಮಾತೃ ಮಂಡಳಿ ಅಧ್ಯಕ್ಷರಾದ ಸೀತಾ ಭಾಸ್ಕರ,, ವಸಂತಿ ಮದ್ದೋಡಿ ಇನ್ನಿತರರು ಉಪಸ್ಥಿತರಿದ್ದರು.
ಶ್ರೀ ಶಾರದೋತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮಗಳು:
ಅ.17ರ ಬೆಳಿಗ್ಗೆ ಶ್ರೀ ಶಾರದಾಂಬೆ ವಿಗ್ರಹವನ್ನು ವಾದ್ಯಘೋಷದೊಂದಿಗೆ ತಂದು ಪ್ರತಿಷ್ಠಾಪಿಸಿದ ಬಳಿಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಭಜನಾ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಲಿದೆ. ಅ. 20ರ ತನಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದೆ. ಅ.19ರಂದು ನವಚಂಡಿಕಾ ಯಾಗ, ಪ್ರತಿನಿತ್ಯ ಭಜನೆ ಹಾಗೂ ವಿವಿಧ ಪೂಜಾ ಕಾರ್ಯಕ್ರಮಗಳು ಜರುಗಲಿದೆ.
ಅ.17ರ ಮಧ್ಯಾಹ್ನ ಭಕ್ತಿಗೀತೆ, ರಂಗೋಲಿ, ಸಂಗೀತ ಕುರ್ಚಿ, ಹೂಮಾಲೆ ಕಟ್ಟುವ ಸ್ಪರ್ಧೆಗಳು ನಡೆಯಲಿದ್ದು, ಬಳಿಕ ಭಗವದ್ಗೀತಾ ಪಠಣ ಸ್ಪರ್ಧೆ ನಡೆಯಲಿದೆ. ಸಂಜೆ ಕುಣಿತ ಭಜನಾ ಸ್ಪರ್ಧೆ ನಡೆಯಲಿದೆ.
ಅ.18ರಂದು ಸಂಜೆ ಸಭಾ ಕಾರ್ಯಕ್ರಮ ಬಳಿಕ ನೃತ್ಯ ಸಿಂಚನಾ ಹಾಗೂ ನವದುರ್ಗೆ ನೃತ್ಯ ರೂಪಕ ನಡಯಲಿದೆ. ಅ.19ರಂದು ಸಭಾ ಕಾರ್ಯಕ್ರಮ ಅಭಿನಂದನಾ ಸಮಾರಂಭ ಬಳಿಕ ರಾಮಕ್ಷತ್ರಿಯ ಬಾಂದವರಿಗಾಗಿ ರಾಜ್ಯ ಮಟ್ಟದ ಸಾಂಸ್ಕೃತಿಕ ನೃತ್ಯ ಸ್ಪರ್ಧೆ ಜರುಗಲಿದೆ.
ಅ.20ರ ಸಂಜೆ ವೈಭವದ ಪುರಮೆರವಣೆಗೆ ಜರುಗಲಿದೆ.
















