ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಸ್ವಚ್ಛತೆ ನಮ್ಮ ಮನೆಯಲ್ಲಿ ಪ್ರಾರಂಭಗೊಳ್ಳಬೇಕು, ಪರಿಸರವನ್ನು ಮಲಿನಗೊಳಿಸುವ ಮನಸ್ಥಿತಿ ಬಿಟ್ಟು ಪ್ರತಿಯೊರ್ವರು ಸ್ವಚ್ಛತೆಯಡೆ ಮುಖ ಮಾಡಬೇಕು ಎಂದು ತೆಕ್ಕಟ್ಟೆ ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಂತೋಷ್ ಕುಮಾರ್ ಹೇಳಿದರು.
ಅವರು ಭಾನುವಾರ ಪಂಚವರ್ಣ ಯುವಕ ಮಂಡಲ ಕೋಟ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಕೋಟ ನೇತೃತ್ವದಲ್ಲಿ 319ನೇ ಭಾನುವಾರದ ಪರಿಸರಸ್ನೇಹಿ ಅಭಿಯಾನದ ಪ್ರಯುಕ್ತ ಗೀತಾನಂದ ಫೌಂಡೇಶನ್ ಮಣೂರು, ತೆಕ್ಕಟ್ಟೆ ಗ್ರಾಮಪಂಚಾಯತ್ , ಎಸ್ ಎಲ್ ಆರ್ ಎಂ ಘಟಕ ತೆಕ್ಕಟ್ಟೆ, ರೋಟರಿ ಸಮುದಾಯ ದಳ ಕೋಟೇಶ್ವರ ಇವರ ಸಹಯೋಗದೊಂದಿಗೆ ಸ್ವಚ್ಛತಾ ಹೀ ಸೇವಾ ಅಂಗವಾಗಿ ತೆಕ್ಕಟ್ಟೆ ಕೊಮೆ ಬೀಚ್ ಸ್ವಚ್ಛತಾ ಅಭಿಯಾನದಲ್ಲಿ ಮಾತನಾಡಿದರು.
ಪಂಚವರ್ಣದಂತಹ ಸಂಘಟನೆಗಳು ಗ್ರಾಮ ಗ್ರಾಮದಲ್ಲಿದ್ದರೆ ಆ ಗ್ರಾಮಗಳು ಸುಂದರ ಸ್ವಚ್ಛ ಗ್ರಾಮಗಳಾಗಿ ಮೂಡಿಬರಲು ಸಾಧ್ಯ,ಸಂಘಸಂಸ್ಥೆಗಳು ಸದಾ ಕ್ರಿಯಾಶೀಲತೆಯಿಂದಿದ್ದರೆ ಸಾಮಾಜಿಕ ಸ್ವಾಸ್ಥ್ಯ ಕಾಪಾಡಲು ಸಾಧ್ಯ ಎಂದರು.
ಜಿಲ್ಲಾಡಳಿತ ಕರೆ ಕೊಟ್ಟ ಸ್ವಚ್ಛತಾ ಹೀ ಸೇವಾ ಅಂಗವಾಗಿ ಪ್ರತಿಜ್ಞಾವಿಧಿಯನ್ನು ತೆಕ್ಕಟ್ಟೆ ಎಸ್ ಎಲ್ ಆರ್ ಎಂ ಘಟಕದ ಮುಖ್ಯಸ್ಥೆ ರೇವತಿ ತೆಕ್ಕಟ್ಟೆ ಭೋಧಿಸಿದರು. ಸ್ವಚ್ಛ ಬೀಚ್ ಅಂಗವಾಗಿ ಸುಮಾರು 400ಕೆ.ಜಿ ತ್ಯಾಜ್ಯವನ್ನು ಸಮುದ್ರ ತಟದಿಂದ ಹೊರತೆಗೆಯಲಾಗಿತು.
ಸಭೆಯಲ್ಲಿ ತೆಕ್ಕಟ್ಟೆ ಪಂಚಾಯತ್ ಮಾಜಿ ಅಧ್ಯಕ್ಷ ಶೇಖರ್ ಕಾಂಚನ್, ರೋಟರಿ ಸಮುದಾಯದಳ ಕೋಟೇಶ್ವರ ಅಧ್ಯಕ್ಷೆ ಸುಪ್ರೀತಾ ಪುರಾಣಿಕ್, ಕೊಮೆ ಪರಿಸರದ ಗಣೇಶ್ ಕಾಂಚನ್, ಪಂಚವರ್ಣ ಸಂಘಟನೆಯ ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ಉಪಸ್ಥಿತರಿದ್ದರು. ಸಂಯೋಜಕ ರವೀಂದ್ರ ಕೋಟ ಸ್ವಾಗತಿಸಿ, ಕಾರ್ಯಕ್ರಮವನ್ನು ಪ್ರಭಾಕರ್ ಬಿಎಸ್‌ಎನ್‌ಎಲ್ ನಿರೂಪಿಸಿ, ರೇವತಿ ತೆಕ್ಕಟ್ಟೆ ವಂದಿಸಿದರು.
















