Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಭಾರತ–ಭೂತಾನ್ ಯುವ ಸ್ನೇಹ ಶಿಬಿರಕ್ಕೆ ಆಳ್ವಾಸ್ ಕೆಡೆಟ್ ನಿಷ್ಮಾ ಪೂಜಾರಿ ಆಯ್ಕೆ
    alvas nudisiri

    ಭಾರತ–ಭೂತಾನ್ ಯುವ ಸ್ನೇಹ ಶಿಬಿರಕ್ಕೆ ಆಳ್ವಾಸ್ ಕೆಡೆಟ್ ನಿಷ್ಮಾ ಪೂಜಾರಿ ಆಯ್ಕೆ

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್‌ ಕಾಂ ಸುದ್ದಿ,
    ಮೂಡುಬಿದಿರೆ:
    ಆಳ್ವಾಸ್ ಸ್ವಾಯತ್ತ ಕಾಲೇಜಿನ ಎನ್‌ಸಿಸಿ ಆರ್ಮಿ ವಿಂಗ್‌ನ ಕೆಡೆಟ್ ನಿಷ್ಮಾ ಪೂಜಾರಿ ಅವರು ನವೆಂಬರ್‌ನಲ್ಲಿ ಭೂತಾನ್‌ನಲ್ಲಿ ನಡೆಯಲಿರುವ ಭಾರತ–ಭೂತಾನ್ ಯುವ ಸ್ನೇಹ ಶಿಬಿರಕ್ಕೆ (ಯುವ ವಿನಿಮಯ ಕಾರ್ಯಕ್ರಮ) ಆಯ್ಕೆಯಾಗಿದ್ದಾರೆ.

    Click Here

    Call us

    Click Here

    ಕರ್ನಾಟಕದಿಂದ ಆಯ್ಕೆಯಾಗಿರುವ ನಾಲ್ವರು ಕೆಡೆಟ್‌ಗಳಲ್ಲಿ ನಿಷ್ಮಾ ಅವರೂ ಒಬ್ಬರಾಗಿದ್ದು, ಆಳ್ವಾಸ್ ಎನ್‌ಸಿಸಿ ಘಟಕದ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸಾಧನೆಗಳ ಸಾಲಿಗೆ ಮತ್ತೊಂದು ಹೆಗ್ಗಳಿಕೆ ಸೇರ್ಪಡೆಯಾಗಿದೆ.

    ಭಾರತ ಮತ್ತು ಭೂತಾನ್ ದೇಶಗಳ ಯುವಜನರು ಹಾಗೂ ಎನ್‌ಸಿಸಿ ಕೆಡೆಟ್‌ಗಳ ನಡುವೆ ಸ್ನೇಹ, ಸಾಂಸ್ಕೃತಿಕ ವಿನಿಮಯ, ಪರಸ್ಪರ ತಿಳುವಳಿಕೆ ಮತ್ತು ಸಹಕಾರವನ್ನು ವೃದ್ಧಿಸುವ ಉದ್ದೇಶದಿಂದ ಯುವ ಸ್ನೇಹ ಶಿಬಿರವನ್ನು ಆಯೋಜಿಸಲಾಗುತ್ತದೆ. ವಿವಿಧ ದೇಶಗಳ ಕೆಡೆಟ್‌ಗಳು ಹಾಗೂ ಯುವ ಪ್ರತಿನಿಧಿಗಳೊಂದಿಗೆ ಸಂವಾದ, ಸಾಂಸ್ಕೃತಿಕ ವಿನಿಮಯ, ತಂಡ ಚಟುವಟಿಕೆಗಳು ಮತ್ತು ವಿವಿಧ ಶೈಕ್ಷಣಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅವಕಾಶವನ್ನು ಈ ಶಿಬಿರ ಒದಗಿಸುತ್ತದೆ. ಈ ಮೂಲಕ ಯುವಜನರಲ್ಲಿ ನಾಯಕತ್ವ ಗುಣ, ತಂಡಸ್ಫೂರ್ತಿ, ಸಾಂಸ್ಕೃತಿಕ ಅರಿವು ಹಾಗೂ ಅಂತಾರಾಷ್ಟ್ರೀಯ ಸ್ನೇಹದ ಮನೋಭಾವ ಬೆಳೆಸುವ ವೇದಿಕೆಯಾಗಿ ಶಿಬಿರ ಮಹತ್ವ ಪಡೆದಿದೆ.

    ಗಣರಾಜ್ಯೋತ್ಸವ ಶಿಬಿರದ ಸಾಧನೆ:
    ನಿಷ್ಮಾ ಅವರು 2026ರ ಗಣರಾಜ್ಯೋತ್ಸವ ಶಿಬಿರದಲ್ಲಿ ನವದೆಹಲಿಯಲ್ಲಿ ಗೌರವ ರಕ್ಷೆ ನೀಡುವ ಅವಕಾಶ ಪಡೆದಿದ್ದರು. ಇದರೊಂದಿಗೆ ಹಾಸನದಲ್ಲಿ ನಡೆದ ‘ಏಕ ಭಾರತ ಶ್ರೇಷ್ಠ ಭಾರತ’ ಶಿಬಿರ, ಐಜಿಸಿ ಶಿಬಿರ ಹಾಗೂ ಆರ್‌ಡಿಸಿ ಶಿಬಿರಗಳಲ್ಲಿ ಭಾಗವಹಿಸಿದ್ದಾರೆ. ಎನ್‌ಸಿಸಿಯ ವಿವಿಧ ಹಂತಗಳ ಶಿಬಿರಗಳಲ್ಲಿ ತೋರಿದ ಸಕ್ರಿಯ ಪಾಲ್ಗೊಳ್ಳುವಿಕೆ ಹಾಗೂ ಸಾಧನೆಯ ಹಿನ್ನೆಲೆಯಲ್ಲಿ, ಎನ್‌ಸಿಸಿ ದೆಹಲಿ ಮುಖ್ಯ ಕಚೇರಿಯಿಂದ ಭಾರತ–ಭೂತಾನ್ ಯುವ ಸ್ನೇಹ ಶಿಬಿರಕ್ಕೆ ಅವರು ಆಯ್ಕೆಯಾಗಿದ್ದಾರೆ.

    ಆಳ್ವಾಸ್ ಸ್ವಾಯತ್ತ ಕಾಲೇಜಿನ ಎನ್‌ಸಿಸಿ ಆರ್ಮಿ ವಿಂಗ್ 18 ಕರ್ನಾಟಕ ಬೆಟಾಲಿಯನ್ ಎನ್‌ಸಿಸಿ, ಮಂಗಳೂರು ವ್ಯಾಪ್ತಿಗೆ ಒಳಪಡುತ್ತದೆ. ರಾಷ್ಟ್ರೀಯ ಮಟ್ಟದ ಶಿಬಿರಗಳು, ಸ್ಪರ್ಧೆಗಳು ಹಾಗೂ ಯುವ ವಿನಿಮಯ ಕಾರ್ಯಕ್ರಮಗಳಲ್ಲಿ ಕೆಡೆಟ್‌ಗಳಿಗೆ ಅವಕಾಶ ಕಲ್ಪಿಸುವ ಮೂಲಕ ಘಟಕವು ವಿದ್ಯಾರ್ಥಿಗಳಲ್ಲಿ ಶಿಸ್ತು, ನಾಯಕತ್ವ, ಆತ್ಮವಿಶ್ವಾಸ ಹಾಗೂ ದೇಶಸೇವೆಯ ಮನೋಭಾವ ಬೆಳೆಸುವಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದೆ.

    Click here

    Click here

    Click here

    Call us

    Call us

    ಆಶಾ ಭಟ್ ಬಳಿಕ ಮತ್ತೊಂದು ಅಂತಾರಾಷ್ಟ್ರೀಯ ಹೆಜ್ಜೆ:
    ಆಳ್ವಾಸ್ ಸಂಸ್ಥೆಯ ಎನ್‌ಸಿಸಿ ಘಟಕದಿಂದ ಅಂತಾರಾಷ್ಟ್ರೀಯ ಯುವ ವಿನಿಮಯ ಕಾರ್ಯಕ್ರಮದಲ್ಲಿ ಭಾಗವಹಿಸಿದವರ ಸಾಲಿನಲ್ಲಿ ಹಿರಿಯ ವಿದ್ಯಾರ್ಥಿನಿ ಹಾಗೂ ನಟಿ ಆಶಾ ಭಟ್ ಅವರೂ ಪ್ರಮುಖರಾಗಿದ್ದಾರೆ. ಆಳ್ವಾಸ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದ ಸಂದರ್ಭದಲ್ಲಿ ಎನ್‌ಸಿಸಿಯಲ್ಲಿ ಸಕ್ರಿಯರಾಗಿದ್ದ ಆಶಾ ಭಟ್ ಅವರು ಗಣರಾಜ್ಯೋತ್ಸವ ಶಿಬಿರದಲ್ಲಿ ಭಾಗವಹಿಸಿದ್ದರು. ಬಳಿಕ 2009ರಲ್ಲಿ ಸಾರ್ಕ್ ರಾಷ್ಟ್ರಗಳ ಎನ್‌ಸಿಸಿ ಪ್ರತಿನಿಧಿ ಬಳಗದೊಂದಿಗೆ ಶ್ರೀಲಂಕಾಕ್ಕೆ ತೆರಳಿದ ಅವರು, ಅಲ್ಲಿನ ಮಿಲಿಟರಿ ಅಕಾಡೆಮಿಗೆ ಭೇಟಿ ನೀಡಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಅವರು ‘ಆಲ್ ರೌಂಡರ್’ ಪ್ರಶಸ್ತಿಯನ್ನೂ ಪಡೆದಿದ್ದರು. ಇದೀಗ ನಿಷ್ಮಾ ಪೂಜಾರಿ ಅವರು ಅಂತಾರಾಷ್ಟ್ರೀಯ ಯುವ ವಿನಿಮಯ ಕಾರ್ಯಕ್ರಮಕ್ಕೆ ಆಯ್ಕೆಯಾಗಿರುವ ಮೂಲಕ ಆಳ್ವಾಸ್ ಎನ್‌ಸಿಸಿ ಘಟಕದ ಅಂತಾರಾಷ್ಟ್ರೀಯ ಸಂಪರ್ಕದ ಪರಂಪರೆಗೆ ಮತ್ತೊಂದು ಮಹತ್ವದ ಸೇರ್ಪಡೆಯಾಗಿದ್ದಾರೆ.

    ವೇಣೂರಿನ ನಂದಿತಾ ಹಾಗೂ ನಾರಾಯಣ ಪೂಜಾರಿ ದಂಪತಿಯ ಪುತ್ರಿಯಾಗಿರುವ ನಿಷ್ಮಾ ಪೂಜಾರಿ ಅವರು ಪ್ರಸ್ತುತ ಆಳ್ವಾಸ್ ಸ್ವಾಯತ್ತ ಕಾಲೇಜಿನಲ್ಲಿ ತೃತೀಯ ವರ್ಷದ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

    ಇವಳ ಸಾಧನೆಯನ್ನು ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, ಟ್ರಸ್ಟಿ ವಿವೇಕ್ ಆಳ್ವ ಅಭಿನಂದಿಸಿದ್ದಾರೆ. 

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಮಂಗಳೂರು ವಿ.ವಿ ಅಂತರ್ ಕಾಲೇಜು ಮಹಿಳಾ ಕಬಡ್ಡಿ: ಆಳ್ವಾಸ್ 18ನೇ ಬಾರಿಗೆ ಚಾಂಪಿಯನ್

    01/10/2026

    ಡಾ. ಬಿ.ಬಿ. ಹೆಗ್ಡೆ ಕಾಲೇಜು: ಕುಂದಾಪ್ರ ಕನ್ನಡ ಗಾದೆಗಳ ಬಗೆಗಿನ ಸಂವಾದ ಕಾರ್ಯಾಗಾರ

    01/10/2026

    ಪ್ರಕೃತಿ, ಪರಂಪರೆ ಮತ್ತು ಸ್ವಾವಲಂಬನೆಯ ಸಮನ್ವಯ ರಷ್ಯಾದಲ್ಲಿ ಕಾಣಬಹುದು: ವಿವೇಕ್ ಆಳ್ವ

    01/10/2026
    Leave A Reply Cancel Reply

    one + 10 =

    Call us

    Click Here

    Call us

    Call us

    Call us
    Highest Viewed Recently
    • ತೆಕ್ಕಟ್ಟೆ ವಿಶ್ವವಿನಾಯಕ ವಿದ್ಯಾ ಸಂಸ್ಥೆಯಲ್ಲಿ ಗಾಂಧೀ ಜಯಂತಿ ಆಚರಣೆ
    • ಶ್ರೀ ಕಾಳಾವರ ವರದರಾಜ ಎಂ. ಶೆಟ್ಟಿ ಸ.ಪ್ರ.ದ ಕಾಲೇಜು: ಬೃಹತ್ ರಕ್ತದಾನ ಶಿಬಿರ
    • ಭಾರತ–ಭೂತಾನ್ ಯುವ ಸ್ನೇಹ ಶಿಬಿರಕ್ಕೆ ಆಳ್ವಾಸ್ ಕೆಡೆಟ್ ನಿಷ್ಮಾ ಪೂಜಾರಿ ಆಯ್ಕೆ
    • 25 ವರ್ಷಗಳ ನಿರಂತರ ಸೇವೆ ದೇಶಕ್ಕೆ ದಿಕ್ಸೂಚಿ: ಸಂಸದ ಕೋಟ ಶ್ರೀನಿವಾಸ ಪೂಜಾರಿ
    • ಮಣೂರು ಪಡುಕರೆ: ವಿಠ್ಠಲ್ ವಿ ಗಾಂವ್ಕರ್ ಪದ ಪುಷ್ಪಾಂಜಲಿಯ ಭಾವ ನಮನ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.