ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ಕೃಷಿಕರನ್ನು ಕಾಣಬಹುದು ಆದರೆ ಕೃಷಿ ಕೂಲಿ ಕಾರ್ಮಿಕರನ್ನು ಯಾರೊಬ್ಬರು ಗುರುತಿಸುವುದಿಲ್ಲ ಆದರೆ ಪಂಚವರ್ಣ ಸಂಘಟನೆ ರೈತರೆಡೆಗೆ ಮೂಲಕ ಅಂತವರನ್ನು ಹುಡುಕಿ ಗುರುತಿಸಿ ಗೌರವಿಸುವ ಕಾರ್ಯ ಅತ್ಯಂತ ಶ್ಲಾಘನೀಯ ಕಾರ್ಯ ಎಂದು ಕೋಟ ಸಹಕಾರಿ ವ್ಯವಸಾಯಕ ಸಂಘದ ಅಧ್ಯಕ್ಷ ಡಾ.ಕೆ.ಕೃಷ್ಣ ಕಾಂಚನ್ ಅಭಿಪ್ರಾಯಪಟ್ಟರು.
ಅವರು ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ನೇತೃತ್ವದಲ್ಲಿ ಗೀತಾನಂದ ಫೌಂಡೇಶನ್ ಮಣೂರು,ರೈತಧ್ವನಿ ಸಂಘ ಕೋಟ, ಗೆಳೆಯರ ಬಳಗ ಕಾರ್ಕಡ, ಸ್ನೇಹಕೂಟ ಮಣೂರು,ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ಇವರ ಸಹಯೋಗದೊಂದಿಗೆ ರೈತರೆಡೆಗೆ ನಮ್ಮ ನಡಿಗೆ 57ನೇ ಸರಣಿ ಕಾರ್ಯಕ್ರಮದಲ್ಲಿ ಮಾತನಾಡಿ, ಕೃಷಿ ಕಾಯಕ ನಡೆಸುವ ಕೂಲಿ ಕಾರ್ಮಿಕರ ಸ್ಥಿತಿಗತಿಯನ್ನುಅರಿಯುವರು ವಿರಳ ಪ್ರಸ್ತುತ ಕೂಲಿ ಕಾರ್ಮಿಕರು ಕೊರತೆ ಇದ್ದು ಈ ಬಗ್ಗೆ ರೈತ ಸಮುದಾಯ ವಿಶೇಷ ಕಾಳಜಿ ಅಗತ್ಯ ಎಂದರಲ್ಲದೆ ಪಂಚವರ್ಣ ಸಂಘಟನೆ ಸಾಮಾಜಿಕ ಬದ್ಧತೆ ಎಲ್ಲರಿಗೂ ಮಾದರಿ ಎಂದರು.
ಈ ಸಂದರ್ಭದಲ್ಲಿ ಹಂದಟ್ಟು ಭಾಗದ ಕೃಷಿ ಕೂಲಿ ಕಾರ್ಮಿಕರಾದ ನರ್ಸಿ ಇವರನ್ನು ಕೃಷಿ ಪರಿಕರದ ಜೊತೆಗೆ ಹಂದಟ್ಟು ಹಾಲು ಉತ್ಪಾದಕ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಜಾನಕಿ ಹಂದೆ ಕೃಷಿ ಪ್ರಶಸ್ತಿ ನೀಡಿ ಗೌರವಿಸಿದರು.
ಸಭಾಧ್ಯಕ್ಷತೆಯನ್ನು ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಕೆ.ಮನೋಹರ್ ಪೂಜಾರಿ ವಹಿಸಿದ್ದರು. ಮುಖ್ಯ ಅಭ್ಯಾಗತರಾಗಿ ರೈತಧ್ವನಿ ಸಂಘದ ಅಧ್ಯಕ್ಷ ಎಂ. ಜಯರಾಮ ಶೆಟ್ಟಿ, ಸ್ನೇಹಕೂಟ ಮಣೂರು ಇದರ ಕೋಶಾಧಿಕಾರಿ ವಿಜಯಲಕ್ಷ್ಮಿ ಭಟ್,ಗೆಳೆಯರ ಬಳಗ ಕಾರ್ಕಡ ಅಧ್ಯಕ್ಷ ಕೆ. ತಾರಾನಾಥ ಹೊಳ್ಳ, ಹಂದಟ್ಟು ಮಹಿಳಾ ಬಳಗದ ಅಧ್ಯಕ್ಷೆ ಯಶೋದ ಹಂದಟ್ಟು, ಪಂಚವರ್ಣ ಸಂಘಟನೆಯ ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಮಹಿಳಾಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ಉಪಸ್ಥಿತರಿದ್ದರು.
ಕಲಾವತಿ ಅಶೋಕ್ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪುಷ್ಭ ಹಂದಟ್ಟು ಸನ್ಮಾನಪತ್ರ ವಾಚಿಸಿ,ಕಾರ್ಯಕ್ರಮವನ್ನು ಸುಜಾತ ಬಾಯರಿ ನಿರೂಪಿಸಿ,ಶಕೀಲ ಹಂದಟ್ಟು ವಂದಿಸಿದರು.
















