Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಆಯುರ್ವೇದ ಎಂದರೆ ಕಷಾಯವಲ್ಲ, ಜೀವನ ವಿಧಾನ: ಚಿತ್ರಕೂಟ ಜೆನ್ ಜೀ ಆಯುರ್ವೇದ ಸಂವಾದದಲ್ಲಿ ತಜ್ಞರ ಅಭಿಮತ
    ಊರ್ಮನೆ ಸಮಾಚಾರ

    ಆಯುರ್ವೇದ ಎಂದರೆ ಕಷಾಯವಲ್ಲ, ಜೀವನ ವಿಧಾನ: ಚಿತ್ರಕೂಟ ಜೆನ್ ಜೀ ಆಯುರ್ವೇದ ಸಂವಾದದಲ್ಲಿ ತಜ್ಞರ ಅಭಿಮತ

    Updated:05/10/2026No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್‌ ಕಾಂ ಸುದ್ದಿ.
    ಕುಂದಾಪುರ:
    ಆಯುರ್ವೇದ ಎಂದರೆ ಕೇವಲ ರೋಗ ಬಂದಾಗ ಕುಡಿಯುವ ಕಹಿ ಕಷಾಯ ಅಥವಾ ಕಟ್ಟುನಿಟ್ಟಿನ ಪಥ್ಯವಲ್ಲ; ಅದು ಪ್ರತಿಯೊಬ್ಬರೂ ತಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಸಮಗ್ರ ಜೀವನಶೈಲಿ ಎಂದು ತಜ್ಞರು ಪ್ರತಿಪಾದಿಸಿದ್ದಾರೆ.

    Click Here

    Call us

    Click Here

    ಚಿತ್ರಕೂಟ ಆಯುರ್ವೇದ ಸಂಸ್ಥೆಯ ವತಿಯಿಂದ ಆಯೋಜಿಸಲಾಗಿದ್ದ ಆಯುರ್ವೇದ ಹಬ್ಬದ ಅಂಗವಾಗಿ ನಡೆದ ‘ಚಿತ್ರಕೂಟ ಜೆನ್ ಜೀ ಆಯುರ್ವೇದ ಸಂವಾದ’ ಕಾರ್ಯಕ್ರಮದಲ್ಲಿ ವೈದ್ಯರು ಹಾಗೂ ಪ್ರಮುಖ ಕಂಟೆಂಟ್ ಕ್ರಿಯೇಟರ್‌ಗಳು ಭಾಗವಹಿಸಿ ಯುವಪೀಳಿಗೆ ಮತ್ತು ಆರೋಗ್ಯದ ಕುರಿತು ಮಹತ್ವದ ವಿಚಾರಗಳನ್ನು ಹಂಚಿಕೊಂಡರು. 

    ​ಕಾರ್ಯಕ್ರಮದಲ್ಲಿ ಮಾತನಾಡಿದ ಚಿತ್ರಕೂಟ ಆಯುರ್ವೇದದ ಸಂಸ್ಥಾಪಕ ಡಾ. ರಾಜೇಶ್ ಬಾಯರಿ ಅವರು, “ಆಯುರ್ವೇದ ಶಾಸ್ತ್ರವು ಮೊದಲು ‘ಸ್ವಸ್ಥಸ್ಯ ಸ್ವಾಸ್ಥ್ಯ ರಕ್ಷಣಂ’ ಎಂದು ಹೇಳುತ್ತದೆ. ಅಂದರೆ ಒಬ್ಬ ಆರೋಗ್ಯವಂತ ವ್ಯಕ್ತಿಯು ತನ್ನ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂದು ತಿಳಿಸುವುದೇ ಇದರ ಮೂಲ ಉದ್ದೇಶವಾಗಿದ್ದು, ಕಾಯಿಲೆ ಬಂದ ಮೇಲೆ ಗುಣಪಡಿಸುವ ‘ಆತುರಸ್ಯ ವಿಕಾರ ಪ್ರಶಮನಂ’ ನಂತರದ ಹಂತವಾಗಿದೆ. ಮುಂಜಾನೆ ಬ್ರಾಹ್ಮೀ ಮುಹೂರ್ತದಲ್ಲಿ ಏಳುವುದು, ನಾಲಿಗೆ ಸ್ವಚ್ಛಗೊಳಿಸುವುದು, ಋತುಮಾನಕ್ಕೆ ತಕ್ಕಂತೆ ಆಹಾರ ಸೇವನೆ ಮಾಡುವಂತಹ ಪ್ರಾಚೀನ ದಿನಚರಿಯನ್ನು ಪಾಲಿಸುವುದು ಇಂದಿನ ದಿನಗಳಲ್ಲಿ ಅತ್ಯಗತ್ಯವಾಗಿದೆ.

    https://www.youtube.com/live/9KAheDeSav8?si=bS0V5AxULj7T8HpI .

    ಇತ್ತೀಚಿನ ದಿನಗಳಲ್ಲಿ ಯುವಪೀಳಿಗೆಯಲ್ಲಿ 30–40ರ ಹರೆಯದಲ್ಲೇ ಮಂಡಿನೋವು, ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ತೊಂದರೆಗಳು ಕಾಣಿಸಿಕೊಳ್ಳುತ್ತಿದ್ದು, ಕಳಪೆ ಎಣ್ಣೆಯ ಬಳಕೆ, ಸಂಸ್ಕರಿಸಿದ ಸಕ್ಕರೆ ಹಾಗೂ ವ್ಯಾಯಾಮದ ಕೊರತೆಯೇ ಇದಕ್ಕೆ ಮುಖ್ಯ ಕಾರಣವಾಗಿದೆ. ರಾತ್ರಿ ಮಲಗುವ ಕನಿಷ್ಠ 45 ನಿಮಿಷಗಳ ಮೊದಲು ಮೊಬೈಲ್ ಪರದೆಯಿಂದ ದೂರವಿರುವ ‘ಡಿಜಿಟಲ್ ಡಿಟಾಕ್ಸ್’ ರೂಢಿಸಿಕೊಂಡರೆ ನಿದ್ರೆಯ ಗುಣಮಟ್ಟ ಹೆಚ್ಚುತ್ತದೆ ಹಾಗೂ ಸಕಾರಾತ್ಮಕ ಚಿಂತನೆಗಳಿಂದ ಮಾನಸಿಕ ಸ್ವಾಸ್ಥ್ಯ ವೃದ್ಧಿಸುತ್ತದೆ” ಎಂದು ಸಲಹೆ ನೀಡಿದರು. 

    ಹೆಗ್ಗದ್ದೆ ಸ್ಟುಡಿಯೋಸ್‌ನ ಸಂದೀಪ್ ಶೆಟ್ಟಿ ಹೆಗ್ಗದ್ದೆ ಅವರು ಮಾತನಾಡಿ, “ಇಂದಿನ ಧಾವಂತದ ಬದುಕಿನಲ್ಲಿ ಜನರಿಗೆ ಎಲ್ಲವೂ ತಕ್ಷಣವೇ ಪರಿಹಾರವಾಗಬೇಕು ಎಂಬ ಭ್ರಮೆಯಿದೆ. ಆದರೆ ದೇಹದ ಯಾವುದೇ ಸಮಸ್ಯೆಯನ್ನು ಸರಿಪಡಿಸಿ ಸಮಸ್ಥಿತಿಗೆ ತರಲು ಕನಿಷ್ಠ 90 ರಿಂದ 120 ದಿನಗಳ ಶ್ರಮ ಮತ್ತು ತಾಳ್ಮೆ ಬೇಕಾಗುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಕೆಲವೇ ದಿನಗಳಲ್ಲಿ ರೋಗ ವಾಸಿ ಮಾಡುತ್ತೇವೆ ಎಂದು ಹರಿದಾಡುವ ಸುಳ್ಳು ಭರವಸೆಗಳನ್ನು ಸಾರ್ವಜನಿಕರು ನಂಬಬಾರದು. ಇಂದಿನ ಪೋಷಕರು ಪ್ರೀತಿಯ ಹೆಸರಿನಲ್ಲಿ ಮಕ್ಕಳಿಗೆ ಪ್ಯಾಕೆಟ್ ತಿನಿಸುಗಳು ಹಾಗೂ ಜಂಕ್ ಫುಡ್ ನೀಡುತ್ತಿದ್ದು, ಈ ಅಧಿಕ ಕ್ಯಾಲೋರಿಯ ಆಹಾರಗಳು ಮಕ್ಕಳಲ್ಲಿ ಬೊಜ್ಜು ಮತ್ತು ಬಾಲ ಮಧುಮೇಹಕ್ಕೆ ನಾಂದಿ ಹಾಡುತ್ತಿವೆ. ಆದ್ದರಿಂದ ಮಕ್ಕಳಿಗೆ ಮನೆಯಲ್ಲೇ ತಯಾರಿಸಿದ ಪೌಷ್ಟಿಕ ಆಹಾರಗಳನ್ನು ನೀಡಿ, ದೈಹಿಕ ಆಟೋಟಗಳಿಗೆ ಪ್ರೋತ್ಸಾಹಿಸುವ ಮೂಲಕ ಅವರ ಆರೋಗ್ಯದ ಜವಾಬ್ದಾರಿಯನ್ನು ಪೋಷಕರೇ ಹೊರಬೇಕು” ಎಂದು ಎಚ್ಚರಿಸಿದರು. 

    Click here

    Click here

    Click here

    Call us

    Call us

    ಖ್ಯಾತ ​ಕಂಟೆಂಟ್ ಕ್ರಿಯೇಟರ್ ಮಂಜುನಾಥ್ ಕಾಮತ್ (ಉಡುಪಿಯ ಕಂಡೀರಾ) ತಮ್ಮ ಸ್ವಂತ ಅನುಭವವನ್ನು ಹಂಚಿಕೊಂಡು, ಸಾಮಾಜಿಕ ಜಾಲತಾಣಗಳ ಕೆಲಸದ ಒತ್ತಡ, ತಡರಾತ್ರಿಯ ನಿದ್ರೆ ಹಾಗೂ ಹೊರಗಿನ ಆಹಾರ ಸೇವನೆಯಿಂದ ತಾವು ಎದುರಿಸಿದ ಆರೋಗ್ಯ ಸಮಸ್ಯೆಗಳನ್ನು ವಿವರಿಸಿದರು. ಬಳಿಕ ಆಯುರ್ವೇದದ ಮಾರ್ಗದರ್ಶನದಂತೆ ಬೆಳಿಗ್ಗೆ ಬೇಗ ಏಳುವುದು ಮತ್ತು ನೈಸರ್ಗಿಕ ಆಹಾರ ಪದ್ಧತಿಯನ್ನು ಕಟ್ಟುನಿಟ್ಟಾಗಿ ಪಾಲಿಸಿದ ನಂತರ ಯಾವುದೇ ಅಡ್ಡಪರಿಣಾಮಗಳಿಲ್ಲದೆ ಸಂಪೂರ್ಣ ಸ್ವಸ್ಥರಾದದ್ದನ್ನು ಸ್ಮರಿಸಿದರು. ಕಂಟೆಂಟ್ ಕ್ರಿಯೇಟರ್‌‌ಗಳು ಕೇವಲ ಲೈಕ್ಸ್ ಮತ್ತು ವ್ಯೂಸ್‌ಗಳಿಗಾಗಿ ಕೆಲಸ ಮಾಡದೆ, ಸಮಾಜಕ್ಕೆ ನೈಜ ಹಾಗೂ ಜವಾಬ್ದಾರಿಯುತ ಆರೋಗ್ಯ ಸಂದೇಶಗಳನ್ನು ತಲುಪಿಸುವ ಅಗತ್ಯವಿದೆ ಎಂದು ಅವರು ತಿಳಿಸಿದರು. ಪೋಷಕರು ಮಕ್ಕಳ ಗೌರವ ಗಳಿಸಬೇಕಾದರೆ ಈ ಕಾಲದ ಹೊಸ ವಿಷಯಗಳನ್ನು ಕಲಿಯಬೇಕು ಎಂದು ಹೇಳಿದರು. 

    ​ಸಂವಾದದ ಕೊನೆಯಲ್ಲಿ ಸಭಿಕರ ಪ್ರಶ್ನೆಗಳಿಗೆ ಉತ್ತರಿಸಿದ ತಜ್ಞರು, ದಿನನಿತ್ಯದ ನಡಿಗೆ, ಎಣ್ಣೆಯ ಮಿತ ಬಳಕೆ, ಸಕ್ಕರೆ ತ್ಯಾಗ ಮತ್ತು ಭಾರತೀಯ ಪರಂಪರೆಯ ದಿನಚರಿಯನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸದೃಢ ಸಮಾಜ ನಿರ್ಮಾಣಕ್ಕೆ ಕೈಜೋಡಿಸಲು ಕರೆ ನೀಡಿದರು.

    ಖ್ಯಾತ ಕಂಟೆಂಟ್ ಕ್ರಿಯೇಟರ್ ಸಂಧ್ಯಾ ವಿನೋದ್ ಪೈ ಅವರು ಸೊಗಸಾಗಿ ಸಂವಾದ ನಡೆಸಿಕೊಟ್ಟರು.

    kundapura
    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಸಾಹಿತ್ಯ ಸಮ್ಮೇಳನದ ಮೂಲಕ ಐಕ್ಯತೆಯನ್ನು ಸಾರೋಣ. ಕನ್ನಡ ನಾಡು ನುಡಿಗಾಗಿ ಸದಾ ಶ್ರಮಿಸೋಣ: ನರೇಂದ್ರ ಕುಮಾರ್ ಕೋಟ

    05/10/2026

    ಚಿತ್ರಕೂಟ ಆಯುರ್ವೇದ ಹಬ್ಬ: ಸಮಾರೋಪ ಸಮಾರಂಭ ಸಂಭ್ರಮದ ತೆರೆ

    05/10/2026

    ಶ್ರೀ ವೆಂಕಟರಮಣ ಪ.ಪೂ ಕಾಲೇಜಿನ ಉಪನ್ಯಾಸಕಿ ಲತಾ ಪೈ ಅವರಿಗೆ ಉಡುಪಿ ಜಿಲ್ಲಾ ಅತ್ಯುತ್ತಮ ಉಪನ್ಯಾಸಕರ ಪ್ರಶಸ್ತಿ

    05/10/2026
    Leave A Reply Cancel Reply

    14 − thirteen =

    Call us

    Click Here

    Call us

    Call us

    Call us
    Highest Viewed Recently
    • ಸಾಹಿತ್ಯ ಸಮ್ಮೇಳನದ ಮೂಲಕ ಐಕ್ಯತೆಯನ್ನು ಸಾರೋಣ. ಕನ್ನಡ ನಾಡು ನುಡಿಗಾಗಿ ಸದಾ ಶ್ರಮಿಸೋಣ: ನರೇಂದ್ರ ಕುಮಾರ್ ಕೋಟ
    • ಚಿತ್ರಕೂಟ ಆಯುರ್ವೇದ ಹಬ್ಬ: ಸಮಾರೋಪ ಸಮಾರಂಭ ಸಂಭ್ರಮದ ತೆರೆ
    • ಶ್ರೀ ವೆಂಕಟರಮಣ ಪ.ಪೂ ಕಾಲೇಜಿನ ಉಪನ್ಯಾಸಕಿ ಲತಾ ಪೈ ಅವರಿಗೆ ಉಡುಪಿ ಜಿಲ್ಲಾ ಅತ್ಯುತ್ತಮ ಉಪನ್ಯಾಸಕರ ಪ್ರಶಸ್ತಿ
    • ಯೋಗಾಸನ: ಆಳ್ವಾಸ್‌ನ ಪುರುಷರ ತಂಡವು ಚಾಂಪಿಯನ್‌ ಹಾಗೂ ಮಹಿಳೆಯರು ದ್ವಿತೀಯ ಸ್ಥಾನ
    • ಜನಸಾಮಾನ್ಯರಿಗೆ ಸರಕಾರದ ಸೇವೆ, ಸವಲತ್ತುಗಳನ್ನು ಸಕಾಲದಲ್ಲಿ ತಲುಪಿಸಿ: ಶಾಸಕ ಗಂಟಿಹೊಳೆ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.