ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಕಟ್ಕೇರೆ ಸಮೀಪ ಕಾಳಾವರ ನಿವಾಸಿ ಪುರೋಹಿತ ನಾಗರಾಜ ನಾವುಡ (45) ಅವರು ಸೋಮವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಶ್ರದ್ಧೆಯಿಂದ ಪೌರೋಹಿತ್ಯ ವೃತ್ತಿಯನ್ನು ಮಾಡುತ್ತಾ, ಎಲ್ಲರ ವಿಶ್ವಾಸಕ್ಕೆ ಭಾಜನರಾಗಿದ್ದ ನಾವುಡರು ಯಕ್ಷಗಾನದ ಬಗ್ಗೆ ಅಪಾರವಾದ ಒಲವುಳ್ಳವರಾಗಿದ್ದರು. ತನ್ನ ಸಂಪಾದನೆಯ ಬಹುಭಾಗವನ್ನು ಕಲೆ ಕಲಾವಿದರಿಗಾಗಿ ವಿನಿಯೋಗಿಸುತ್ತಾ ಬಂದ ನಾವುಡರು ತಂದೆ, ತಾಯಿ, ಪತ್ನಿ, ಪುತ್ರಿಯನ್ನು ಅಗಲಿದ್ದಾರೆ.
ಯಕ್ಷಗಾನ ಕಲಾರಂಗದ ಆಜೀವ ಸದಸ್ಯರಾಗಿದ್ದ ಇವರ ನಿಧನಕ್ಕೆ ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.











