ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಉಡುಪಿ ಜಿಲ್ಲಾ ರಾಮಕ್ಷತ್ರಿಯ ಒಕ್ಕೂಟದ ಉದ್ಘಾಟನಾ ಕಾರ್ಯಕ್ರಮ ಅ.11ರಂದು ನಡೆಯಲಿದ್ದು, ಆಮಂತ್ರಣ ಪತ್ರಿಕೆಯನ್ನು ಇತ್ತೀಚೆಗೆ ಬೈಂದೂರು ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಅನಾವರಣಗೊಳಿಸಲಾಯಿತು.

ಬೈಂದೂರು ರಾಮಕ್ಷತ್ರಿಯ ಸಮಾಜ ಇದರ ಉಪಾಧ್ಯಕ್ಷ ಹಾಗೂ ರಾಮಕ್ಷತ್ರಿಯ ಉಡುಪಿ ಜಿಲ್ಲಾ ಒಕ್ಕೂಟದ ಗೌರವಾಧ್ಯಕ್ಷರಾದ ಸದಾಶಿವ ಡಿ. ಪಡುವರಿ, ವಿಶ್ವ ರಾಮಕ್ಷತ್ರಿಯ ಮಹಾಸಂಘದ ಕಾರ್ಯಾಧ್ಯಕ್ಷರಾದ ಶ್ರೀನಿವಾಸ ಶೆರ್ವೆಗಾರ್ ಹೆಬ್ರಿ, ರಾಮಕ್ಷತ್ರಿಯ ಒಕ್ಕೂಟದ ಜಿಲ್ಲಾ ಸಂಚಾಲಕ ಸುರೇಶ್ ಬಟವಾಡಿ, ಕಾರ್ಯದರ್ಶಿ ಗಣಪತಿ ಹೋಬಳಿದಾರ್, ಆಡಳಿತ ಕಾರ್ಯದರ್ಶಿ ಮಂಜುನಾಥ ಎನ್. ಬೈಂದೂರು, ಮಾತೃ ಮಂಡಳಿ ಬೈಂದೂರು ಅಧ್ಯಕ್ಷರಾದ ಸೀತಾ ಭಾಸ್ಕರ್, ಕಾರ್ಯದರ್ಶಿ ಭಾಗಿರಥಿ ನರಸಿಂಹ, ಯುವಕ ಸಮಾಜದ ಅಧ್ಯಕ್ಷ ಕೆ. ರಾಜೇಶ್, ಕಾರ್ಯದರ್ಶಿ ನಿತ್ಯಾನಂದ ಡಿ., ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರುಗಳು ಸಮಾಜ ಬಾಂಧವರು ಉಪಸ್ಥಿತರಿದ್ದರು.
ಅಕ್ಟೋಬರ್ 11ನೇ ತಾರೀಕು ಭಾನುವಾರ ಜೆಎನ್ಆರ್ ಕಲಾಮಂದಿರ ಬೈಂದೂರಿನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಸರ್ವರ ಸಹಕಾರ ಕೋರಲಾಯಿತು.
ಇದನ್ನೂ ಓದಿ ► ಅ.11ರಂದು ಬೈಂದೂರಿನಲ್ಲಿ ಉಡುಪಿ ಜಿಲ್ಲಾ ರಾಮಕ್ಷತ್ರಿಯ ಒಕ್ಕೂಟದ ಉದ್ಘಾಟನೆ – https://kundapraa.com/?p=103035 .











