Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಆಳ್ವಾಸ್: ʼಜ್ಯೂರಿಸ್ ಓಡಿಸ್ಸಿ –ದ ಜರ್ನಿ ಇನ್‌ಟು ಲಾʼ ಹಾಗೂ ಕಾನೂನು ಜಾಗೃತಿ ಕಾರ್ಯಕ್ರಮ  
    alvas nudisiri

    ಆಳ್ವಾಸ್: ʼಜ್ಯೂರಿಸ್ ಓಡಿಸ್ಸಿ –ದ ಜರ್ನಿ ಇನ್‌ಟು ಲಾʼ ಹಾಗೂ ಕಾನೂನು ಜಾಗೃತಿ ಕಾರ್ಯಕ್ರಮ  

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್‌ ಕಾಂ ಸುದ್ದಿ.
    ಮೂಡುಬಿದಿರೆ:
    ಕೃತಕ ಬುದ್ಧಿಮತ್ತೆ ಒದಗಿಸುವ ಮಾಹಿತಿಯ ಸತ್ಯಾಸತ್ಯತೆಯನ್ನು ಪರಿಶೀಲಿಸುವ ವಿವೇಚನೆಯನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ಮಂಗಳೂರು ಸಂಚಾರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತೆ ನಜ್ಮಾ ಫಾರೂಕಿ ಹೇಳಿದರು.

    Click Here

    Call us

    Click Here

    ಅವರು ಆಳ್ವಾಸ್ ಕಾನೂನು ಮಹಾವಿದ್ಯಾಲಯದ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ “ಜ್ಯೂರಿಸ್ ಓಡಿಸ್ಸಿ –ದ ಜರ್ನಿ ಇನ್‌ಟು ಲಾ” ಹಾಗೂ ಕಾನೂನು ಜಾಗೃತಿ ಕಾರ್ಯಕ್ರಮದಲ್ಲಿ   ಅವರು ಮಾತನಾಡಿದರು.

    ವಿದ್ಯಾರ್ಥಿಗಳು ಕೃತಕ ಬುದ್ದಿಮತ್ತೆಯ ಮೂಲಕ ದೊರೆಯುವ ಮಾಹಿತಿಯನ್ನು ವಿಮರ್ಶಿಸದೆ ಒಪ್ಪಿಕೊಳ್ಳಬಾರದು.  ಅದರ ವಿಶ್ವಾಸಾರ್ಹತೆಯನ್ನು ಪರಿಶೀಲಿಸಿ, ಅಧಿಕೃತ ಮೂಲಗಳೊಂದಿಗೆ ಹೋಲಿಕೆ ಮಾಡಿ, ಸರಿ–ತಪ್ಪುಗಳನ್ನು ವಿಶ್ಲೇಷಿಸುವ ವಿಮರ್ಶಾತ್ಮಕ ಚಿಂತನೆಯನ್ನು ಬೆಳೆಸಿಕೊಳ್ಳಬೇಕು. ಎಐಯನ್ನು ಜ್ಞಾನಾರ್ಜನೆಗೆ ಪೂರಕ ಸಾಧನವಾಗಿ ಬಳಸಬೇಕೇ ಹೊರತು, ಸ್ವಂತ ಆಲೋಚನೆ ಮತ್ತು ವಿವೇಚನೆಗೆ ಪರ್ಯಾಯವಾಗಿ ಪರಿಗಣಿಸಬಾರದು. ತಂತ್ರಜ್ಞಾನ ವೇಗವಾಗಿ ಮಾಹಿತಿಯನ್ನು ನೀಡಬಲ್ಲದು, ಆದರೆ ಆಳವಾದ ಜ್ಞಾನ ಮತ್ತು ಚಿಂತನೆಯ ಸಾಮರ್ಥ್ಯವನ್ನು ಬೆಳೆಸುವಲ್ಲಿ ಪುಸ್ತಕಗಳ ಪಾತ್ರ ಸದಾ ಮಹತ್ವದ್ದಾಗಿದೆ ಎಂದರು.

    ವೈದ್ಯಕೀಯ ಕ್ಷೇತ್ರದಂತೆ ಕಾನೂನು ಕೂಡ ಪ್ರಾಯೋಗಿಕ ಜ್ಞಾನಕ್ಕೆ ಹೆಚ್ಚಿನ ಮಹತ್ವ ನೀಡುವ ವಿಷಯವಾಗಿದೆ. ಬೋಧನೆ, ಕಾನೂನು ವೃತ್ತಿ, ಕಾನೂನು ಸಲಹೆ ಹಾಗೂ ಸಾರ್ವಜನಿಕ ಸೇವೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಅವಕಾಶಗಳಿವೆ. ಕಾನೂನುಗಳು ಮತ್ತು ಕಾಯ್ದೆಗಳನ್ನು ಹೇಗೆ ಅರ್ಥೈಸಲಾಗುತ್ತದೆ, ಅವುಗಳ ವ್ಯಾಖ್ಯಾನ ಹೇಗೆ ನಡೆಯುತ್ತದೆ ಹಾಗೂ ಅವು ಹೇಗೆ ರೂಪುಗೊಳ್ಳುತ್ತವೆ ಎಂಬುದನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು. ವಿದ್ಯಾರ್ಥಿಗಳು ನಿರಂತರತೆ, ಶಿಸ್ತು ಮತ್ತು ದೃಢಸಂಕಲ್ಪದಂತಹ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದರು.  

    ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಸಂಸ್ಥೆಯ ಶೈಕ್ಷಣಿಕ ಚಟುವಟಿಕೆಗಳ ಉದ್ದೇಶ ಕೇವಲ ಪದವಿ ನೀಡುವುದಕ್ಕೆ ಸೀಮಿತವಾಗದೆ, ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ, ವೃತ್ತಿಪರ ಕೌಶಲ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ಬೆಳೆಸುವುದಾಗಿದೆ.  ಕಾನೂನು ವಿದ್ಯಾರ್ಥಿಗಳು ತಮ್ಮ ಭವಿಷ್ಯದ ವೃತ್ತಿಜೀವನಕ್ಕೆ ಅಗತ್ಯವಾದ ಪ್ರಾಯೋಗಿಕ ಅನುಭವವನ್ನು ಪಡೆಯಲು ಇಂಟರ್ನ್ಶಿಪ್, ಮೂಟ್ ಕೋರ್ಟ್ಗಳಂತಹ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು.  ಕಾನೂನು ವೃತ್ತಿಯಲ್ಲಿ ವೃತ್ತಿಪರ ನಡವಳಿಕೆ, ಶಿಸ್ತು, ಔಪಚಾರಿಕತೆ, ಉತ್ತಮ ಸಂವಹನ ಕೌಶಲ ಮತ್ತು ನೈತಿಕ ಮೌಲ್ಯಗಳು ಅತ್ಯಂತ ಮಹತ್ವದ್ದಾಗಿವೆ.

    Click here

    Click here

    Click here

    Call us

    Call us

    ನಂತರ ಎಸ್.ಡಿ.ಎಮ್ ಕಾನೂನು ಕಾಲೇಜಿನ ಡಾ. ಶಾರಿಕಾ ರೈ ಹಾಗೂ ವಿವೇಕಾನಂದ ಕಾನೂನು ಕಾಲೇಜಿನ ಡಾ ಬಿಕೆ ರವೀಂದ್ರ ವಿಶೇಷ ಉಪನ್ಯಾಸ ನಡೆಸಿದರು. ಆಳ್ವಾಸ್ ಕಾನೂನು ಕಾಲೇಜಿನ ಪ್ರಾಚಾರ್ಯ ಡಾ. ರಶ್ಮಿ ಶೆಟ್ಟಿ ಉಪಸ್ಥಿತರಿದ್ದರು. ಉಪನ್ಯಾಸಕ ಡ್ಯಾರಿಲ್ ಕ್ಲೇತ್ ಕ್ವಾಡ್ರೋಸ್ ನಿರೂಪಿಸಿ, ಸ್ತುತಿ ಎಸ್ ಚೌಟ ಸ್ವಾಗತಿಸಿ, ಅಮೃತಾ ಜೆ. ವಂದಿಸಿದರು.

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಕುಂದಾಪುರ: ʼಎನ್.ಡಿ.ಎ.ಗೆ ಸೇರುವ ಮಾರ್ಗ ಮತ್ತು ಪರೀಕ್ಷೆ ತಯಾರಿ ಮಾರ್ಗದರ್ಶಿʼ ವಿಶೇಷ ಉಪನ್ಯಾಸ

    09/10/2026

    06-10 ಜನವರಿ 2027. ಕನ್ನಡ ನಾಡು-ನುಡಿ ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿ

    09/10/2026

    ಕುಂದಾಪುರ: ಮಾದಕ ವಸ್ತುಗಳಿಂದುಟಾಗುವ ದುಷ್ಪರಿಣಾಮಗಳು – ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಗಾರ

    08/10/2026
    Leave A Reply Cancel Reply

    fifteen − eight =

    Call us

    Click Here

    Call us

    Call us

    Call us
    Highest Viewed Recently
    • ಎಮ್‌ಐಟಿಯಲ್ಲಿ ‘MITK AI VISION 24H’ ರಾಷ್ಟ್ರಮಟ್ಟದ ಹ್ಯಾಕಥಾನ್‌ಗೆ ಚಾಲನೆ
    • ಶ್ರೀ ಗುರುನರಸಿಂಹ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾಗಿ ಆನಂದ್ ಸಿ. ಕುಂದರ್ ಪುನರಾಯ್ಕೆ
    • ಆಳ್ವಾಸ್: ʼಜ್ಯೂರಿಸ್ ಓಡಿಸ್ಸಿ –ದ ಜರ್ನಿ ಇನ್‌ಟು ಲಾʼ ಹಾಗೂ ಕಾನೂನು ಜಾಗೃತಿ ಕಾರ್ಯಕ್ರಮ  
    • ಗುರುಕುಲ ಪಬ್ಲಿಕ್ ಸ್ಕೂಲ್: ಸಂಸ್ಕಾರ – ಸಿಂಚನ – ಹೆತ್ತವರ ಪಾದಗಳಿಗೆ ನಮನ ಕಾರ್ಯಕ್ರಮ ಸಂಪನ್ನ
    • ಆತ್ರಾಡಿ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಅಭಿಯಾನ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.