ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಶ್ರೀ ಗುರುನರಸಿಂಹ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ನಿ, ಸಾಲಿಗ್ರಾಮ ಇದರ ಮುಂದಿನ ಐದು ವರ್ಷಗಳ ಅವಧಿಗೆ ಸೆ.28ರಂದು ನೂತನ ಆಡಳಿತ ಮಂಡಳಿ ರಚನೆಯಾಗಿದ್ದು, ಈ ಕೆಳಗಿನ ಸದಸ್ಯರುಗಳು ಅವಿರೋಧವಾಗಿ ಆಯ್ಕೆಗೊಂಡರು.
ಅಧ್ಯಕ್ಷರಾಗಿ ಆನಂದ್ ಸಿ. ಕುಂದರ್ ಪುನರಾಯ್ಕೆಗೊಂಡರು. ಉಪಾಧ್ಯಕ್ಷರಾಗಿ ಸಂಜೀವ ಜಿ., ನಿರ್ದೇಶಕರುಗಳಾಗಿ ಮಂಜುನಾಥ್ ಎಸ್.ಕೆ, ಶಂಕರ ಬಂಗೇರ, ವಸಂತ ಶೆಟ್ಟಿ, ವೈ. ಕೃಷ್ಣಮೂರ್ತಿ ಐತಾಳ್, ಕೃಷ್ಣಪ್ಪ ಮರಕಾಲ, ಸುಂದರ, ವೈ. ಗೋಪಾಲ ಭಟ್ಟ, ಶಾಂತಾ ಭಟ್ಟ, ನಾಗರತ್ನ ಬಾಯರಿ, ಸವಿತಾ ಪೂಜಾರಿ ಅವಿರೋಧವಾಗಿ ಆಯ್ಕೆಗೊಂಡರು.
ಚುನಾವಣಾ ಪ್ರಕ್ರಿಯೆಯನ್ನು ಉಡುಪಿಯ ಸಹಕಾರ ಸಂಘಗಳ ನಿಬಂಧಕರ ಕಚೇರಿಯ ಸಹಕಾರಿ ಅಭಿವೃದ್ಧಿ ಅಧಿಕಾರಿ ಹಾಗೂ ಚುನಾವಣಾಧಿಕಾರಿ ಜಯಂತಿ ಎಸ್. ಅವರು ನಡೆಸಿಕೊಟ್ಟರು.











