ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಮೋಟಾರು ಸೈಕಲ್ನಲ್ಲಿ ಐಸ್ಕ್ರೀಮ್ ಹಾಗೂ ಮೀನು ವ್ಯಾಪಾರ ಮಾಡಿಕೊಂಡಿದ್ದ ಬಿಜೂರು ಉಪ್ಪುಂದ ಮಾಧವ ದೇವಾಡಿಗ (52) ಅವರು ತನಗಿದ್ದ ಬೆನ್ನುನೋವು ಹಾಗೂ ಪತ್ನಿಯ ಕಾಯಿಲೆಯಿಂದ ಮನೆಯ ಸಮೀಪದ ಹಾಡಿಯಲ್ಲಿ ಮರವೊಂದರ ಗೆಲ್ಲಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬುಧವಾರ ಮುಂಜಾನೆ 04ಗಂಟೆಗೆ ಮೀನು ವ್ಯಾಪಾರ ಮಾಡಲು ಭಟ್ಕಳಕ್ಕೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದವರು ಬೆಳಗ್ಗೆ05:00ಗಂಟೆ ಸುಮಾರಿಗೆ ಅಳಿಯ ಚಂದ್ರರಿಗೆ ಕರೆ ಮಾಡಿ ತನಗೆ ಹಾಗೂ ಹೆಂಡತಿಗೆ ಹುಸಾರಿಲ್ಲ ಎಲ್ಲರನ್ನೂ ಚೆನ್ನಾಗಿ ನೋಡಿಕೋ ಎಂದು ಹೇಳಿದ್ದರು. ಬಳಿಕ ಎಲ್ಲರೂ ಸೇರಿ ಹುಡುಕಿದಾಗ ಮನೆಯ ಬಳಿಯ ಹಾಡಿಯಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ನೇತಾಡುತ್ತಿರುವುದುಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಯಿತು.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












