ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಭಂಡಾಕಾರ್ಸ್ ಕಾಲೇಜಿನಲ್ಲಿ ನಡೆದ ಆಂತರಿಕ ಗುಣಮಟ್ಟ ಭರವಸೆ ಕೋಶ , ರಾಷ್ಟ್ರೀಯ ಸೇವಾ ಯೋಜನೆ ಮತ್ತು ಆ್ಯಂಟಿ ಡ್ರಗ್ಸ್ ಅವೇರ್ನೆಸ್ ಸೆಲ್ ಇವರ ಜಂಟಿ ಆಶ್ರಯದಲ್ಲಿ “ಸೈಬರ್ ಅಪರಾಧಗಳ ಇತ್ತೀಚೆಗಿನ ಪ್ರವೃತ್ತಿಗಳು ಹಾಗೂ ಮಾದಕ ವಸ್ತು ವ್ಯಸನ ಮತ್ತು ಯುವಕರು ” ಎಂಬ ವಿಷಯದ ಕುರಿತು ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಕುಂದಾಪುರ ಪೋಲಿಸ್ ಠಾಣೆಯ ಸಬ್ಇನ್ಸ್ಪೆಕ್ಟರ್ರಾದ ನಂಜ ನಾಯ್ಕ್ ಅವರು ಮಾತನಾಡಿ, ಭಾರತದಲ್ಲಿ ಇತ್ತೀಚಿಗೆ ಮಾದಕ ವಸ್ತುಗಳ ವ್ಯಸನ ಹೆಚ್ಚಾಗುತ್ತಿರುವುದು ವಿಷಾಧಕಾರ ಸಂಗತಿ ಹಾಗೂ ಪಂಜಾಬ್ ರಾಜ್ಯದಲ್ಲಿ ಅತಿ ಹೆಚ್ಚು ಜನರು ಮಾದಕ ವಸ್ತುಗಳ ವ್ಯಸನಕ್ಕೆ ಒಳಗಾಗುತ್ತಿದ್ದಾರೆ. ಭಾರತದಲ್ಲಿ ಪ್ರತಿದಿನ 10 ಜನರು ಇದರಿಂದ ಸಾಯುತ್ತಿದ್ದಾರೆ ಎಂದು ಹೇಳಿದರು. ವಿವಿಧ ರೀತಿಯ ಮಾದಕ ವಸ್ತುಗಳು ಮತ್ತು ಅವುಗಳ ಸೇವನೆಯ ರೀತಿ ಕುರಿತು ತಿಳಿಸಿದರು. ಅದರಿಂದ ಆಗುವ ದೈಹಿಕ ಮತ್ತು ಮಾನಸಿಕ ಪಯ್ನಾಮದ ಬಗ್ಗೆ ಮಾಹಿತಿ ನೀಡಿದರು. ಎಂ. ಡಿ. ಪಿ. ಎಸ್, ಕಾಯಿದೆ 1985 ಇದರ ಅಡಿಯಲ್ಲಿ ಮಾದಕ ವಸ್ತುಗಳ ವ್ಯಸನಿಗಳನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳುವುದು, ಒಮ್ಮೆ ಈ ವಿಷಯದಲ್ಲಿ ಈ ಕಾಯ್ದೆಯ ಅಡಿಯಲ್ಲಿ ಬಂದಿಸಲ್ಪಟ್ಟಲ್ಲಿ, ಅವರಿಗೆ ಯಾವುದೇ ಉದ್ಯೋಗ ಮತ್ತು ಇನ್ನಿತರ ಅವಕಾಶಗಳಿರುವುದಿಲ್ಲ ಎಂದು ಹೇಳಿದರು.
ಸೈಬರ್ ಅಪರಾಧಗಳ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಸೈಬರ್ ಅಪರಾಧ ವಿಭಾಗದ ಪೋಲೀಸ್ ಕಾನ್ಸ್ಟೇಬಲ್ ಪವನ್ ಕುಮಾರ್ ಅವರು ಮಾತನಾಡಿ, ವಿವಿಧ ಸೈಬರ್ ಅಪರಾಧಗಳ ಕುರಿತು ವಿಶೇಷ ಮಾಹಿತಿ ನೀಡಿದರು . ಅಲ್ಲದೇ ಸೈಬರ್ ಅಪರಾಧಗಳು ನಡೆಯದ ರೀತಿ ಮತ್ತು ಅಪರಾಧದಲ್ಲಿ ಭಾಗಿಯಾದವರಿಗೆ ಕಠಿಣ ಶಿಕ್ಷೆಯ ಕುರಿತು ತಿಳಿಸಿದರು. ಯಾರಾದರೂ ಸೈಬರ್ ಅಪರಾಧಗಳಲ್ಲಿ ತೊಡಗಿಕೊಂಡರೆ ಸಹಾಯವಾಣಿ ಸಂಖ್ಯೆ 1930 ಕ್ಕೆ ಕರೆ ಮಾಡಬಹುದು. ಅಥವಾ www cybercrime.gov.in ಎಂಬ ವೆಬ್ಸೈಟ್ಗೆ ಮಾಹಿತಿ ನೀಡಬಹುದು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಕಾಲೇಜಿನ ಪ್ರಾಂಶುಪಾಲರಾದ, ಡಾ. ಶುಭಾಕರಾಚರಿ ವಹಿಸಿದ್ದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಯದ, ಸತ್ಯನಾರಾಯಣ ಉಪಸ್ಥಿತರಿದ್ದರು.
ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮ ಅಧಿಕಾರಿಯಾದ ಅರುಣ್ ಎಸ್. ಎಂ ಕಾರ್ಯಕ್ರಮ ನಿರೂಪಿಸಿ, ರಾಮಚಂದ್ರ ಆಚಾರ್ಯ ವಂದಿಸಿದರು.

















