Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಅ.31 ರಂದು ಉಪ್ಪುಂದದಲ್ಲಿ ‘ಹುಲಿ ಪರ್ವ 2026’ ಕಾರ್ಯಕ್ರಮ
    Uncategorized

    ಅ.31 ರಂದು ಉಪ್ಪುಂದದಲ್ಲಿ ‘ಹುಲಿ ಪರ್ವ 2026’ ಕಾರ್ಯಕ್ರಮ

    Updated:17/10/2026No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್‌ ಕಾಂ ಸುದ್ದಿ.
    ಬೈಂದೂರು:
    ತಾಲೂಕಿನ ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಪ್ರಯುಕ್ತ ಕುಂದಾಪುರ ಹಾಗೂ ಬೈಂದೂರು ತಾಲೂಕಿನ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ‘ಹುಲಿ ಪರ್ವ 2026’ ಕಾರ್ಯಕ್ರಮವನ್ನು  ಆಯೋಜಿಸಲಾಗಿದೆ.

    Click Here

    Click Here

    Call us

    Click Here

    ಶೇಖರ್ ಪೂಜಾರಿ ಉಪ್ಪುಂದ ಅವರ ಸಾರಥ್ಯದಲ್ಲಿ, ಶ್ರೀ ದುರ್ಗಾ ಟೈಗರ್ಸ್ ಉಪ್ಪುಂದ ಇವರ ಸಂಯೋಜನೆಯಲ್ಲಿ ಉಪ್ಪುಂದ ರಥಬೀದಿಯಲ್ಲಿ ಅಕ್ಟೋಬರ್ 31ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಉಡುಪಿ ಹಾಗೂ ಮಂಗಳೂರು ಭಾಗದ ಆಯ್ದ ಪ್ರತಿಷ್ಠಿತ ತಂಡಗಳಿಂದ ಆಕರ್ಷಕ ಹುಲಿ ಕುಣಿತ ಸ್ಪರ್ಧೆ ನಡೆಯಲಿದೆ.

    ಕಾರ್ಯಕ್ರಮದ ಪೂರ್ವಭಾವಿಯಾಗಿ ಶ್ರೀ  ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಕಾರ್ಯಕ್ರಮದ ಸಿದ್ಧತೆಗಳು ಹಾಗೂ ಮುಂದಿನ ಎಲ್ಲಾ ಕಾರ್ಯಗಳು ಯಾವುದೇ ವಿಘ್ನವಿಲ್ಲದೆ ಯಶಸ್ವಿಯಾಗಿ ನೆರವೇರಲಿ ಎಂದು ಬೇಡಿಕೊಂಡರು.

    ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ಡಿ.ಟಿ. ಸೀತಾರಾಮ ಮಯ್ಯ, ಶ್ರೀ ದುರ್ಗಾ ಟೈಗರ್ಸ್ ಸಂಸ್ಥೆಯು ಕಳೆದ ಮೂರು ವರ್ಷಗಳಿಂದ ಮನೆಮನೆಗೆ ತೆರಳಿ ಪರಂಪರೆಯ ಹುಲಿವೇಷವನ್ನು ಪ್ರದರ್ಶಿಸುತ್ತಾ, ಕರಾವಳಿಯ ವಿಶಿಷ್ಟ ಸಂಸ್ಕೃತಿ ಮತ್ತು ಕಲಾ ಪರಂಪರೆಯನ್ನು ಉಳಿಸುವ ಕಾರ್ಯ ಮಾಡುತ್ತಿದೆ ಎಂದರು.

    ಅಂತರಾಷ್ಟ್ರೀಯ ಜಾದುಗಾರ ಓಂ ಗಣೇಶ ಉಪ್ಪುಂದ ಮಾತನಾಡಿ, ಹುಲಿವೇಷವು ಕರಾವಳಿಯ ವಿಶಿಷ್ಟ ಪರಂಪರೆ ಹಾಗೂ ಸಾಂಸ್ಕೃತಿಕ ಪ್ರತೀಕವಾಗಿದೆ. ಇಂತಹ ಕಲೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಿ ಉಳಿಸುವಲ್ಲಿ ಹುಲಿ ವೇಷದಂತಹ ಕಾರ್ಯಕ್ರಮಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದರು.

    Click here

    Click here

    Click here

    Call us

    Call us

    ಶೇಖರ್ ಪೂಜಾರಿ ಮಾತನಾಡಿ, ಈ ವರ್ಷ ವಿಭಿನ್ನ ರೀತಿಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಲು ತೀರ್ಮಾನಿಸಿದ್ದೇವೆ. ಉಡುಪಿ ಹಾಗೂ ಮಂಗಳೂರು ಭಾಗದ ಪ್ರತಿಷ್ಠಿತ ಹುಲಿವೇಷ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಲಿವೆ. ಪ್ರಥಮ ಬಹುಮಾನವಾಗಿ ₹2,55,555 ಹಾಗೂ ದ್ವಿತೀಯ ಬಹುಮಾನವಾಗಿ ₹1,55,555 ಜೊತೆಗೆ ಶಾಶ್ವತ ಫಲಕ ನೀಡಿ ಗೌರವಿಸಲಾಗುವುದು. ಅಲ್ಲದೆ ಅತ್ಯುತ್ತಮ ಪ್ರದರ್ಶನ ನೀಡುವ ಕಲಾವಿದರಿಗೆ ವೈಯಕ್ತಿಕ ಬಹುಮಾನಗಳನ್ನೂ ನೀಡಲಾಗುವುದು. ಈ ಕಾರ್ಯಕ್ರಮದ ಯಶಸ್ಸಿಗೆ ಸಾರ್ವಜನಿಕರು, ಕಲಾಭಿಮಾನಿಗಳು ಹಾಗೂ ಎಲ್ಲರ ಸಹಕಾರ ಅಮೂಲ್ಯವಾಗಿದೆ ಎಂದು ಹೇಳಿದರು.

    ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಗೌರಿ ದೇವಾಡಿಗ, ಮಂಜು ದೇವಾಡಿಗ ಅರೆಹಾಡಿ, ಮಂಜುನಾಥ ದೇವಾಡಿಗ, ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಮಂಜುನಾಥ್ ದೇವಾಡಿಗ ರಥಬೀದಿ, ರವೀಂದ್ರ ಪ್ರಭು, ಭರತ್ ದೇವಾಡಿಗ, ಮಂಜುನಾಥ್ ಪೂಜಾರಿ, ರಾಮದಾಸ ಖಾರ್ವಿ, ದೇವಸ್ಥಾನದ ಅರ್ಚಕರಾದ ಪುರಾಣಿಕ್, ಉದಯ ಪೂಜಾರಿ, ದುರ್ಗಾ ಫ್ರೆಂಡ್ಸ್ ಅಧ್ಯಕ್ಷರಾದ ಕೇಶವ ದೇವಾಡಿಗ, ಸುರೇಶ ಬೆಸ್ಕೂರು,  ಪ್ರಶಾಂತ ದೇವಾಡಿಗ , ಸುನೀಲ್ ದೇವಾಡಿಗ,  ದುರ್ಗಾ ಟೈಗರ್ಸ್‌ನ ಸರ್ವ ಸದಸ್ಯರು, ಸ್ನೇಹಿತ ವರ್ಗ ಹಾಗೂ ಊರಿನ ಹಿರಿಯರು ಉಪಸ್ಥಿತರಿದ್ದರು.

    ಶೇಖರ್ ಪೂಜಾರಿ ಸ್ವಾಗತಿಸಿ, ವಂದಿಸಿದರು.

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ರೋಟರಿ ಕ್ಲಬ್ ಕೋಟ ಬ್ರಿಗೇಡ್ ವತಿಯಿಂದ ಶ್ರವಣ ಸಾಧನ ಉಚಿತ ಕೊಡುಗೆ

    09/10/2026

    ನನ್ನಿಂದ ವಿಶ್ವಕರ್ಮ ಸಮುದಾಯದ ನಿಂದನೆಯಾಗಿಲ್ಲ. ಹಾಗಾಗಿ ವಿಷಾದವೂ ಇಲ್ಲ, ಕ್ಷಮೆಯೂ ಇಲ್ಲ: ಎ.ಎಸ್.ಎನ್. ಹೆಬ್ಬಾರ್ ಸ್ಪಷ್ಟೀಕರಣ

    07/10/2026

    ತೊಡಕುಗಳನ್ನು ಎದುರಿಸಿ ಸಾಗುವುದರಲ್ಲಿಯೇ ಬದುಕಿನ ಯಶಸ್ಸು ಅಡಗಿದೆ: ಎಸ್. ಪ್ರಕಾಶ್ಚಂದ್ರ ಶೆಟ್ಟಿ

    03/10/2026
    Leave A Reply Cancel Reply

    5 + twenty =

    Call us

    Click Here

    Call us

    Call us

    Call us
    Highest Viewed Recently
    • ಕುಂದಾಪುರ: ದನ ಕಳವಿಗೆ ಯತ್ನ – ಕಾರು ಬಿಟ್ಟು ಪರಾರಿ
    • ಡಾ. ಬಿ.ಬಿ. ಹೆಗ್ಡೆ ಕಾಲೇಜು: ಎನ್ಎಸ್ಎಸ್ ಶಿಬಿರದಲ್ಲಿ ಶ್ರಮದಾನದ ಉದ್ಘಾಟನೆ
    • ರಾಜ್ಯಮಟ್ಟದ ದಸರಾ ಸಿಎಂ ಕಪ್‌ನಲ್ಲಿ ಆಳ್ವಾಸ್ ಕ್ರೀಡಾಪಟುಗಳ ಪ್ರಾಬಲ್ಯ
    • ಪರಿಸರ ಸ್ನೇಹಿ ಹಸಿರು ಪಟಾಕಿಗಳ ಬಳಕೆಯಿಂದ ದೀಪಾವಳಿ ಹಬ್ಬ ಆಚರಿಸಿ: ಜಿಲ್ಲಾಧಿಕಾರಿ
    • ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಿ: ಜಿಲ್ಲಾಧಿಕಾರಿ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.