ಅಂಧಾನುಕರಣೆ ಬಿಟ್ಟು ವಿಚಾರವಂತರಾಗೋಣ: ನರೇಂದ್ರ ಎಸ್. ಗಂಗೊಳ್ಳಿ

Click Here

Call us

Call us

Call us

Call us

ಗಂಗೊಳ್ಳಿ: ವಿವೇಕಾನಂದರನ್ನು ಒಂದು ಧರ್ಮದ ರಾಯಭಾರಿಯಂತೆ ಮಾತ್ರ ನೋಡುವುದು ಮೂರ್ಖತನ. ಕುವೆಂಪುರವರು ಹೇಳಿದಂತೆ ಅವರು ವಿಶ್ವಸನ್ಯಾಸಿ. ಅವರು ಮಾನವೀಯತೆಯ ನೆಲೆಯಲ್ಲಿ ಧರ್ಮವನ್ನು ಪ್ರತಿಪಾದಿಸಿದ ಶ್ರೇಷ್ಠ ವಿಶ್ವಮಾನವ. ಎಂದು ವಾಣಿಜ್ಯ ಶಾಸ್ತ್ರ ಉಪನ್ಯಾಸಕ ನರೇಂದ್ರ ಎಸ್ ಗಂಗೊಳ್ಳಿ ಅವರು ಹೇಳಿದರು.

Click Here

Call us

Click Here

ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನಲ್ಲಿ ವಿವೇಕಸಪ್ತಾಹದ ಅಂಗವಾಗಿ ಹಮ್ಮಿಕೊಂಡಿದ್ದ ವಿವೇಕಧಾರೆ ಕಾರ‍್ಯಕ್ರಮದಲ್ಲಿ ಉಪನ್ಯಾಸ ನೀಡುತ್ತಾ ವಿವೇಕಾನಂದರು ಹೇಳಿದಂತೆ ಅಂಧಾನುಕರಣೆ ಸರಿಯಲ್ಲ. ಅನುಕರಣೆ ಎನ್ನುವುದು ಅವನತಿಯ ಚಿಹ್ನೆ, ಹಾಗಾಗಿ ಎಲ್ಲಾ ಮಹಾತ್ಮರ ವಿಚಾರಗಳನ್ನು ಅಧ್ಯಯನ ಮಾಡಿ ನಮ್ಮದೇ ಆದ ಉತ್ತಮ ಚಾರಿತ್ರ್ಯವುಳ್ಳ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಅಂತರಾಷ್ಟ್ರೀಯ ಖ್ಯಾತಿಯ ವೇಯ್ಟ್ ಲಿಫ್ಟರ್ ಕೆನರಾ ಬ್ಯಾಂಕ್ ಗಂಗೊಳ್ಳಿಯ ಉಪ ಪ್ರಬಂಧಕರಾದ ಅಶೋಕ್ ಅವರು ದೀಪ ಬೆಳಗಿಸಿ ವಿವೇಕ ಸಪ್ತಾಹವನ್ನು ಉದ್ಘಾಟಿಸಿದರು.ಆಂಗ್ಲಭಾಷಾ ಉಪನ್ಯಾಸಕ ಥಾಮಸ್ ಪಿ.ಎ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿನಿ ಆಶಾ ಪ್ರಾರ್ಥಿಸಿದರು. ತಿರುಮಲೇಶ್ ಭಟ್ ಅತಿಥಿಗಳನ್ನು ಸ್ವಾಗತಿಸಿದರು. ಮನಿಷಾ ಪೂಜಾರಿ ಕಾರ‍್ಯಕ್ರಮ ನಿರೂಪಿಸಿದರು.ಯಶಸ್ವಿ ಧನ್ಯವಾದ ಅರ್ಪಿಸಿದರು.

Leave a Reply