Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ದೇವಿಯನ್ನು ಭೀತಿಯಿಂದಲ್ಲ, ಪ್ರೀತಿಯಿಂದ ಆರಾಧಿಸಿ: ಶ್ರೀ ರಾಘವೇಶ್ವರ
    ಊರ್ಮನೆ ಸಮಾಚಾರ

    ದೇವಿಯನ್ನು ಭೀತಿಯಿಂದಲ್ಲ, ಪ್ರೀತಿಯಿಂದ ಆರಾಧಿಸಿ: ಶ್ರೀ ರಾಘವೇಶ್ವರ

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್‌ ಕಾಂ ಸುದ್ದಿ.
    ಬೆಂಗಳೂರು:
    ದೇವಿಯನ್ನು ಪ್ರೀತಿಯಿಂದ ಆರಾಧಿಸಬೇಕು ಹೊರತು ಭೀತಿಯಿಂದಲ್ಲ. ಪ್ರೀತಿಯಿಂದ ಮಾಡಿದಾಗ ಆಚರಣೆಗೆ ಅರ್ಥ ಬರುತ್ತದೆ. ಭೀತಿಯಿಂದ ಮಾಡಿದಾಗ ಯಾವುದೇ ಅರ್ಥವಿಲ್ಲ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.

    Click Here

    Click Here

    Call us

    Click Here

    ಅವರು ಬೆಂಗಳೂರಿನ ಗಿರಿನಗರದಲ್ಲಿರುವ ಶ್ರೀರಾಮಚಂದ್ರಾಪುರ ಮಠದ ಶಾಖೆಯಲ್ಲಿ ಬುಧವಾರ ನಡೆದ ‘ನವರಾತ್ರ ನಮಸ್ಯಾ’ ಮಹಾ ಸಮಾರೋಪದ ಧರ್ಮ ಸಭೆಯಲ್ಲಿ ಮಾತನಾಡಿದ ಶ್ರೀಗಳು, ನಮ್ಮೊಳಗೇ ದೇವಿಯ ಸಾನ್ನಿಧ್ಯವಿದ್ದು, ನಮ್ಮ ಹೃದಯ ಮಂದಿರದಲ್ಲಿರುವ ದೇವಿಯನ್ನು ಅಂತರ್ಮುಖಿಗಳಾಗಿ ನೋಡಲು ಸೂಕ್ತ ಕಾಲ ಈ ನವರಾತ್ರಿ. ಹೋಮ, ಪಾರಾಯಣ, ದೀಪ ನಮಸ್ಕಾರ ಎಲ್ಲವೂ ನಮ್ಮೊಳಗಿರುವ ದೇವಿಯ ಸಾನ್ನಿಧ್ಯವನ್ನು ಕಾಣಲು ಇರುವ ಉಪಕರಣಗಳು. ಸತ್ತ್ವ – ರಜೋ – ತಮೋಗುಣಗಳಿಂದಲೇ ಪ್ರಪಂಚ ನಿರ್ಮಿತವಾಗಿದೆ. ಆ ಮೂರು ಗುಣಗಳೇ ತ್ರಿಗುಣಾತ್ಮಿಕಾ ದೇವಿಯಾಗಿದ್ದು, ಆ ಮೂರು ಗುಣಗಳ ಸಮತೋಲನವನ್ನು ಕಲಿತರೆ ನಾವು ಜೀವನವನ್ನು ಗೆಲ್ಲಬಹುದು ಎಂದರು.

    ನವರಾತ್ರಿಯಲ್ಲಿ ಉಪವಾಸದ ಆಚರಣೆಯು ವಿಶೇಷವಾಗಿದೆ. ಸರಿಯಾದ ಉಪವಾಸದ ಆಚರಣೆಯಿಂದ ಆರೋಗ್ಯ ವೃದ್ಧಿಯನ್ನು ಕಾಣಬಹುದಾಗಿದ್ದು, ಇದು ನವರಾತ್ರಿ ಆಚರಣೆಯ ಬಾಹ್ಯ ಫಲವಾಗಿದೆ. ನವರಾತ್ರಿಯಲ್ಲಿರುವ ‘ನವ’ವನ್ನು ಹೊಸತನದ ಕಾಲ ಎಂಬುದಾಗಿಯೂ ಪರಿಗಣಿಸಬಹುದಾಗಿದ್ದು, ನಮ್ಮ ಜೀವನದ ತಪ್ಪುಗಳನ್ನು ತಿದ್ದಿಕೊಳ್ಳಲು ಈ ನವರಾತ್ರಿಯ ವ್ರತವನ್ನು ಬಳಸಿಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು.

    ದೇವಿ ಪಾರಾಯಣ ಎಂಬುದು ಕೇವಲ ಕಾಟಾಚಾರದ ಕ್ರಮವಾಗಬಾರದು. ಸಪ್ತಶತೀ, ಲಲಿತೋಪಾಖ್ಯಾನಗಳಲ್ಲಿ ದೇವಿಯ ಅವತಾರ ವಿಶೇಷತೆಗಳಿದ್ದು, ಅದನ್ನು ಓದಿದಾಗ ದೇವಿಯನ್ನು ನಮ್ಮ ಮನಸ್ಸಿನೊಳಗೆ ದೇವಿಯ ಲೀಲೆಯನ್ನು  ತುಂಬಿಕೊಳ್ಳಬಹುದು. ಧ್ಯಾನದಲ್ಲಿ ದೇವಿಯನ್ನು ಗಂಟೆಗಟ್ಟಲೆ ತಂದು ಕೊಳ್ಳುವುದು ಎಲ್ಲರಿಗೂ ಕಷ್ಟ ಸಾಧ್ಯ. ಆದರೆ ಪಾರಾಯಣಗಳಿಂದ ಸುಲಭವಾಗಿ ಗಂಟೆಗಟ್ಟಲೆ ದೇವಿಯನ್ನು ನಾವು ನಮ್ಮ ಮನಸ್ಸಿನಲ್ಲಿ ತುಂಬಿಕೊಳ್ಳಬಹುದು ಎಂದರು.

    ಸಂಸದ ತೇಜಸ್ವಿ ಸೂರ್ಯ, ಖ್ಯಾತ ಗಾಯಕಿ ಶಿವಶ್ರೀ ಸ್ಕಂದಪ್ರಸಾದ್ ಶ್ರೀಗಳ ಆಶೀರ್ವಾದ ಪಡೆದರು. ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ. ಟಿ. ಶ್ಯಾಂ ಭಟ್ ಗುರುಭಿಕ್ಷಾಸೇವೆ ಸಮರ್ಪಿಸಿ‌ ಆಶೀರ್ವಾದ ಪಡೆದರು. ಹಿರಿಯ ನ್ಯಾಯವಾದಿ ರಾಜಶೇಖರ ಹಿಲ್ಯಾರ್, ಖ್ಯಾತ ಗಾಯಕ ಗರ್ತಿಕೆರೆ ರಾಘಣ್ಣ ಶ್ರೀಗಳ ಆಶೀರ್ವಾದ ಪಡೆದರು.

    Click here

    Click here

    Click here

    Call us

    Call us

    ಪ್ರಧಾನ ಸಂಚಾಲಕ ರಮೇಶ ಹೆಗಡೆ ಕೊರಮಂಗಲ ಸಭಾ ಪೂಜೆ ನೆರವೇರಿಸಿದರು. ಸಂಚಾಲಕ ದೀಪಕ ಹೆಗಡೆ ಗೋಳಿಕೈ ಕಾರ್ಯಕ್ರಮದ ಅವಲೋಕನ ಮಾಡಿದರು. ಶ್ರೀಮಠದ ಪ್ರಶಾನಾಧಿಕಾರಿ ಸಂತೋಷ ಹೆಗಡೆ, ವಿತ್ತಾಧ್ಯಕ್ಷ ಗಣೇಶ‌ ಜೆ.ಎಲ್, ಹವ್ಯಕ ಮಹಾಮಂಡಲದ ಅಧ್ಯಕ್ಷ ಡಾ. ವೈ. ವಿ. ಕೃಷ್ಣಮೂರ್ತಿ, ಕಾರ್ಯದರ್ಶಿ ಮಹೇಶ ಚಟ್ನಳ್ಳಿ, ಕಾರ್ಯಕ್ರಮದ ಸಂಚಾಲಕ ವಾದಿರಾಜ ಸಾಮಗ, ಶ್ರೀವತ್ಸ ಮೂಡುಗೋಡು, ಗಾಯತ್ರೀ ಭಾಗ್ವತ್, ಶಿವರಾಜ ಪೆರ್ಮುಖ ಉಪಸ್ಥಿತರಿದ್ದರು.

    kundapura
    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಐಎಂಜೆಐಎಸ್‌ಸಿಯಲ್ಲಿ ರೋಟರಾಕ್ಟ್ ಕ್ಲಬ್ ಉದ್ಘಾಟನೆ       

    22/10/2026

    ಮದರ್ ತೆರೇಸಾ ಮೆಮೋರಿಯಲ್ ಸ್ಕೂಲ್‌ನ ವಿದ್ಯಾರ್ಥಿ ಸಮಿತ್ ಶೆಟ್ಟಿ ಕುಸ್ತಿ ಪಂದ್ಯಾವಳಿಯಲ್ಲಿ ದ್ವಿತೀಯ ಸ್ಥಾನ

    22/10/2026

    ಶಾರದೋತ್ಸವದ ಮೂಲಕ ಶೈಕ್ಷಣಿಕ ಸೇವೆ ಶ್ಲಾಘನೀಯ – ಎಸ್. ಮಯ್ಯ

    22/10/2026
    Leave A Reply Cancel Reply

    11 + 6 =

    Call us

    Click Here

    Call us

    Call us

    Call us
    Highest Viewed Recently
    • ದೇವಿಯನ್ನು ಭೀತಿಯಿಂದಲ್ಲ, ಪ್ರೀತಿಯಿಂದ ಆರಾಧಿಸಿ: ಶ್ರೀ ರಾಘವೇಶ್ವರ
    • ಐಎಂಜೆಐಎಸ್‌ಸಿಯಲ್ಲಿ ರೋಟರಾಕ್ಟ್ ಕ್ಲಬ್ ಉದ್ಘಾಟನೆ       
    • ಮದರ್ ತೆರೇಸಾ ಮೆಮೋರಿಯಲ್ ಸ್ಕೂಲ್‌ನ ವಿದ್ಯಾರ್ಥಿ ಸಮಿತ್ ಶೆಟ್ಟಿ ಕುಸ್ತಿ ಪಂದ್ಯಾವಳಿಯಲ್ಲಿ ದ್ವಿತೀಯ ಸ್ಥಾನ
    • ಶಾರದೋತ್ಸವದ ಮೂಲಕ ಶೈಕ್ಷಣಿಕ ಸೇವೆ ಶ್ಲಾಘನೀಯ – ಎಸ್. ಮಯ್ಯ
    • ಶಂಕರನಾರಾಯಣ: ಬೈಕ್‌ ಡಿಕ್ಕಿಯಾಗಿ ಪಾದಚಾರಿ ಸಾವು

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.