Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಏಳಜಿತ್ ಶ್ರೀ ರಾಮಕೃಷ್ಣ ಕುಟೀರದಲ್ಲಿ ಶರನ್ನವರಾತ್ರಿಯ ಕಾರ್ಯಕ್ರಮಗಳು ಸಂಪನ್ನ
    ಊರ್ಮನೆ ಸಮಾಚಾರ

    ಏಳಜಿತ್ ಶ್ರೀ ರಾಮಕೃಷ್ಣ ಕುಟೀರದಲ್ಲಿ ಶರನ್ನವರಾತ್ರಿಯ ಕಾರ್ಯಕ್ರಮಗಳು ಸಂಪನ್ನ

    Updated:23/10/2026No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್‌ ಕಾಂ ಸುದ್ದಿ.
    ಬೈಂದೂರು:
    ಇಲ್ಲಿನ ಏಳಜಿತ್ ಶ್ರೀ ರಾಮಕೃಷ್ಣ ಕುಟೀರದಲ್ಲಿ ಈ ವರ್ಷದ ಶರನ್ನವರಾತ್ರಿಯ ಎಲ್ಲಾ ಕಾರ್ಯಕ್ರಮಗಳು ಶ್ರದ್ಧಾ ಭಕ್ತಿಯಿಂದ ಕೂಡಿ ಯಶಸ್ವಿಯಾಗಿ ಜರುಗಿದವು.

    Click Here

    Click Here

    Call us

    Click Here

    ಮಹಾಲಯ ಅಮಾವಾಸ್ಯೆಯಂದು ಮಹಾವಿಷ್ಣು ಪ್ರೀತ್ಯರ್ಥವಾಗಿ ಸಾಮೂಹಿಕವಾಗಿ ಸಂಪೂರ್ಣ ಭಗವದ್ಗೀತಾ ಹಾಗೂ ವಿಷ್ಣು ಸಹಸ್ರನಾಮ ಪಟಿಸಿ ಪರಮಾತ್ಮನನ್ನು ವೇದಮಂತ್ರಗಳಿಂದ ಸ್ತುತಿಸಿ, ಭಜಿಸಿ, ಪೂಜಿಸಿ ಅನ್ನಪ್ರಸಾದ ವಿತರಿಸಲಾಯಿತು.

     ಪ್ರಥಮ ನವರಾತ್ರಿಯಂದು ಗಣ ಹವನದ ಮೂಲಕ ಕಾರ್ಯಕ್ರಮ ಪ್ರಾರಂಭಿಸಿ, ನವರಾತ್ರಿಯ ಪ್ರತೀ ದಿನವೂ ಪ್ರಾಥಕಾಲ 5 ಘಂಟೆಯಿಂದ ಸಪ್ತಶತಿಯ ಪಾರಾಯಣ ಮಾಡಿ 6:30 ರಿಂದ 7:15 ರ ತನಕ  ಪ್ರಾಥ ಪೂಜೆಯನ್ನು ಮಾಡಲಾಯಿತು. ನಂತರ 8:30 ರಿಂದ ವಿದ್ಯಾರ್ಥಿಗಳು ಲಲಿತ ಸಹಸ್ರನಾಮ ಪಟಿಸಿ ಚಂಡಿಕಾ ಪಾರಾಯಣ ಮಾಡಿ 11ಘಂಟೆಯಿಂದ ಆಯಾ ದಿನದ ದೇವಿಯ ರೂಪವನ್ನು ಸ್ತುತಿಸಿ, ಭಜಿಸುತ್ತಿದ್ದರು.

    12 ಘಂಟೆಗೆ ಮಹಾಪೂಜೆ ಆರಂಭಿಸಿ 1 ಘಂಟೆಗೆ ಅನ್ನಪ್ರಸಾದ ವಿತರಿಸಲಾಯಿತು. ರಾತ್ರಿ 7 ಘಂಟೆಗೆ ಮಹಾ ಮಾತೆಗೆ ಪೂಜೆ ಸಲ್ಲಿಸುವುದರೊಂದಿಗೆ ಆ ದಿನದ ಕಾರ್ಯಕ್ರಮ ಸಂಪನ್ನಗೊಳಿತು.

    ಪ್ರತೀ ದಿನವೂ ಮಾತೆಯರಿಗೆ ಮಾತ್ರವಂದನೆ, ಅಸಹಾಯಕ ವ್ರದ್ಧ ಮಾತೆಯರಿಗೆ, ದಿನಸಿ ಕಿಟ್ ನೊಂದಿಗೆ ಸೀರೆಯನ್ನು ನೀಡಿ ಗೌರವಿಸಲಾಯಿತು. ಸಪ್ತಮಿಯಂದು ಶಾರದಾಪೂಜೆ ಪ್ರಾರಂಭಿಸಿ ದುರ್ಗಾಷ್ಟಮಿಯಂದು ದುರ್ಗಾಹವನದೊಂದಿಗೆ ಮಹಾಕಾಳಿ, ಮಹಾಲಕ್ಷ್ಮಿ, ಮಹಾಸರಸ್ವತಿ ಪ್ರೀತ್ಯರ್ಥವಾಗಿ ಮೂವರಿಗೆ ಸುಹಾಸಿನಿ ಪೂಜೆ ಮಾಡಲಾಯಿತು.

    Click here

    Click here

    Click here

    Call us

    Call us

    ಮಹಾನವಮಿಯಂದು ಮಹಾಪೂಜೆಯ ನಂತರ ಕುಮಾರಿಯರಿಗೆ ಪೂಜೆ ಸಲ್ಲಿಸಿ, ನವರಾತ್ರಿಯ ಎಲ್ಲ ದಿನಗಳಲ್ಲಿ ಚಂಡಿಕಾ ಪಾರಾಯಣ ಮಾಡಿ ಶ್ರೀ ದೇವಿಗೆ ಪೂಜೆ ಸಲ್ಲಿಸಿದ 21 ವಿದ್ಯಾರ್ಥಿಗಳಿಗೆ ದಿನಸಿ ಕಿಟ್ ನೊಂದಿಗೆ ಡ್ರೆಸ್  ನೀಡಿ ಶಾಲು ಹೊದಿಸಿ ಗೌರವಿಸಲಾಯಿತು.

    ಈ ಸಮಯದಲ್ಲಿ ಪ್ರತೀ ವರ್ಷವೂ ದುರ್ಗಾಷ್ಟಮಿ ಯಂದು ದುರ್ಗಾ ಹವನಮಾಡಿಸಿ ಆ ದಿನದ ಅನ್ನ ಪ್ರಸಾದಕ್ಕೆ ವ್ಯವಸ್ಥೆ ಮಾಡುತ್ತಿದ್ದ ಆಶ್ರಮದ ಹಿರಿಯ ವಿದ್ಯಾರ್ಥಿನಿ ಮಲ್ಲಿಕಾ ಹಾಗೂ ಅವರ ಪತಿ ಸತೀಶ ಕೊಠಾರಿ ಅವರು ಮಕ್ಕಳ ಪ್ರತಿಭೆಗೆ ಮಾರು ಹೋಗಿ ಬೆಂಗಳೂರಿನಲ್ಲಿ ಅವರ ಕಂಪನಿಯಲ್ಲೆ  ತಯಾರಾದ ಉತ್ತಮ ಗುಣ ಮಟ್ಟದ ಸ್ಕೂಲ್ ಬ್ಯಾಗಗಳನ್ನು ತರಿಸಿ ಮಹಾ ನವಮಿಯಂದು ಆಶ್ರಮದ ಎಲ್ಲ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಿದ್ದು ಎಲ್ಲರ ಗಮನ ಸೆಳೆಯಿತು. 

    ಈ ವರ್ಷ ಆಶ್ರಮದ ಹಿರಿಯ ವಿದ್ಯಾರ್ಥಿಗಳು ಎಲ್ಲಾ 11 ದಿನದ ವಿವಿಧ ರೀತಿಯ ನೈವೇದ್ಯ ಹಾಗೂ ಪೂಜೆಗೆ ವ್ಯವಸ್ಥೆ ಮಾಡಿದ್ದು ವಿಶೇಷವಾಗಿತ್ತು. ವ್ರದ್ಧ ಮಾತೆಯರಿಗೆ ಕಿಟ್ ನೀಡಲು ಹಾಗೂ ಮಾತ್ರ ವಂದನೆಗೆ ಮತ್ತು ಪ್ರತೀ ದಿನದ ಅನ್ನಪ್ರಸಾದಕ್ಕೆ ಸೇವಾ ರೂಪದಲ್ಲಿ ಸಹಕರಿಸಿದ ದಾನಿಗಳಿಗೂ ಈ ಎಲ್ಲ ಕಾರ್ಯಗಳಿಗೆ ಸಹಾಯ, ಸಹಕಾರ ನೀಡಿದ ಆಶ್ರಮದ ಭಕ್ತರಿಗೂ, ಕುಟೀರದ ಎಲ್ಲ ವಿದ್ಯಾರ್ಥಿಗಳ ಮೇಲೂ ಶ್ರೀ ದೇವಿಯ ಕೃಪೆ ಸದಾಕಾಲ ಇರಲಿ ಎಂದು ದಿವ್ಯತೃಯರಲ್ಲಿ ಪ್ರಾರ್ಥಿಸುತ್ತೇವೆ.

    Byndoor
    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಡಾ. ಶಿಹಾನ್ ಸುಬ್ರಹ್ಮಣ್ಯ ಪಿ. ಅವರಿಗೆ ಮಹಾತ್ಮ ಗಾಂಧಿ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

    23/10/2026

    ಹಳಗೇರಿ ಶ್ರೀ ಕೊಕ್ಕೇಶ್ವರ ಹಾಗೂ ಶ್ರೀ ವನದುರ್ಗಾ ದೇವಿ ದೇವಸ್ಥಾನದ ಶರನ್ನವರಾತ್ರಿ ಮಹೋತ್ಸವ ಸಂಪನ್ನ

    22/10/2026

    ಬೈಂದೂರು: ಉಡುಪಿ ಜಿಲ್ಲಾ ರಾಮಕ್ಷತ್ರಿಯ ಒಕ್ಕೂಟ ಉದ್ಘಾಟನೆ

    22/10/2026
    Leave A Reply Cancel Reply

    ten − 2 =

    Call us

    Click Here

    Call us

    Call us

    Call us
    Highest Viewed Recently
    • ಡಾ. ಶಿಹಾನ್ ಸುಬ್ರಹ್ಮಣ್ಯ ಪಿ. ಅವರಿಗೆ ಮಹಾತ್ಮ ಗಾಂಧಿ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
    • ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಆಳ್ವಾಸ್‌ನ 11 ಕ್ರೀಡಾಪಟುಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ
    • ಏಳಜಿತ್ ಶ್ರೀ ರಾಮಕೃಷ್ಣ ಕುಟೀರದಲ್ಲಿ ಶರನ್ನವರಾತ್ರಿಯ ಕಾರ್ಯಕ್ರಮಗಳು ಸಂಪನ್ನ
    • ಹಳಗೇರಿ ಶ್ರೀ ಕೊಕ್ಕೇಶ್ವರ ಹಾಗೂ ಶ್ರೀ ವನದುರ್ಗಾ ದೇವಿ ದೇವಸ್ಥಾನದ ಶರನ್ನವರಾತ್ರಿ ಮಹೋತ್ಸವ ಸಂಪನ್ನ
    • ಸಿಎ ಇಂಟರ್‌ಮೀಡಿಯೇಟ್ ಪರೀಕ್ಷೆಯಲ್ಲಿ ಆಳ್ವಾಸ್‌ನ 21 ವಿದ್ಯಾರ್ಥಿಗಳು ಉತ್ತೀರ್ಣ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.