ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಕಾಸರಗೋಡು ಕನ್ನಡ ಭವನ ಮತ್ತು ಗ್ರಂಥಾಲಯ ಕನ್ನಡ ಭವನ ಪ್ರಕಾಸನ ಏರ್ಪಡಿಸಿದ ದಸರಾ ಸಾಂಸ್ಕೃತಿಕೋತ್ಸವ 2026ರ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯ ಕೋಟದ ಪ್ರೇರಣಾ ಹಾಗೂ ಸಾನ್ವಿ ಅವರು ಕಲಾಶ್ರೀ ಪ್ರಶಸ್ತಿಗೆ ಭಾಜನರಾದರು.
ಇವರು ಕೋಟ ವಿವೇಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ 8ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಪ್ರೇರಣಾ ಮಣೂರು ಪಡುಕೆರೆ ನಿವಾಸಿಯಾದ ನಾಗೇಶ್ ಮತ್ತು ಪ್ರೇಮ ಅವರ ಪುತ್ರಿಯಾಗಿರುತ್ತಾಳೆ. ಸಾನ್ವಿ ಪಾರಂಪಳ್ಳಿ ನಿವಾಸಿಯಾದ ನಾಗರಾಜ್ ಮತ್ತು ಸರಸ್ವತಿ ಅವರ ಪುತ್ರಿಯಾಗಿದ್ದಾರೆ.
ಇವರ ಕಲಾಶ್ರೀ ಪ್ರಶಸ್ತಿ ಸ್ವೀಕರಿಸಿದ ಇರ್ವರಿಗೆ ಶಾಲಾ ಆಡಳಿತ ಮಂಡಳಿ, ಶಾಲಾ ಶಿಕ್ಷಕ ವೃಂದ ಹಾಗೂ ಗ್ರಾಮಸ್ಥರು ಅಭಿನಂದಿಸಿದ್ದಾರೆ.












