ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಯಕ್ಷದೇಗುಲ ಬೆಂಗಳೂರು ತಂಡದವರಿಂದ ಬೆಂಗಳೂರಿನ ಸರ್ಜಾಪುರದ ಅಜೀಂ ಪ್ರೇಮ್ಜಿ ಯೂನಿವರ್ಸಿಟಿಯಲ್ಲಿ ಯಕ್ಷಗಾನ ಕಲಿತಾ ಇರುವ ವಿದ್ಯಾರ್ಥಿಗಳಿಗೆ ಮೇಕಪ್ ಕಾರ್ಯಾಗಾರ ನಡೆಸಲಾಯಿತು.
ಕಾರ್ಯಾಗಾರದಲ್ಲಿ ಎಲ್ಲಾ ವರ್ಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಯಕ್ಷಗಾನ ಅರಿವೇ ಇಲ್ಲದ ಈ ವಿದ್ಯಾರ್ಥಿಗಳಿಗೆ ಯಕ್ಷಗಾನದ ಮೇಕಪ್ನಲ್ಲಿ ಅರಿವು ಮೂಡಿಸಲಾಯಿತು.
ಯಕ್ಷಗಾನದಲ್ಲಿ ವೇಷಭೂಷಣ ಮತ್ತು ಮುಖವರ್ಣಿಕೆ ಬಗ್ಗೆ ವಿಶೇಷ ಸ್ಥಾನವಿದೆ. ಮೇಕಪ್ ನಿಂದ ಯಕ್ಷಗಾನ ಪಾತ್ರದ ಸ್ವಭಾವವನ್ನು ಪ್ರೇಕ್ಷಕರಿಗೆ ತೋರಿಸಲಾಗುವುದು. ಕೃಷ್ಣ, ರಾಮ, ರಾವಣ, ಅರ್ಜುನ, ಬಣ್ಣದ ವೇಷ, ಸ್ತ್ರೀ ಪಾತ್ರ, ಕಿರಾತ, ಹೆಣ್ಣು ಬಣ್ಣದ ವೇಷ, ಗಂಧರ್ವರು ಹೀಗೆ ನಾವು ಮೇಕಪ್ ಮೂಲಕ ಪಾತ್ರವನ್ನು ಗುರುತಿಸಬಹುದು. ಹೀಗೆ ಬಣ್ಣದ ಬಗ್ಗೆ ಪರಿಚಯಿಸಿ, ವಿದ್ಯಾರ್ಥಿಗಳಿಂದಲೇ ಮೇಕಪ್ ಮಾಡಿಸಲಾಯಿತು.
ಈ ಕಾರ್ಯಾಗಾರವನ್ನು ಯಕ್ಷಗುರುಗಳಾದ ಸುದರ್ಶನ ಉರಾಳ ಮತ್ತು ಪ್ರಿಯಾಂಕ ಕೆ. ಮೋಹನ್ ನಡೆಸಿಕೊಟ್ಟರು.

















