ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ಮಂಗಳೂರು, ಬ್ರಹ್ಮಾವರ ಕ್ಷೇತ್ರ ಸಮಿತಿ ಹಾಗೂ ಕೋಟ-ಸಾಲಿಗ್ರಾಮ ವಲಯ ಸಮಿತಿಯ ವತಿಯಿಂದ ಅಶಕ್ತರಿಗೆ ಸಹಾಯಧನ ಹಾಗೂ ವಿದ್ಯಾರ್ಥಿ ವೇತನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಭಾನುವಾರ ಕೋಟ ಸಿ ಎ ಬ್ಯಾಂಕ್ ಬಿ.ಸಿ ಹೊಳ್ಳ ಸಭಾಂಗಣದಲ್ಲಿ ಜರಗಿತು.
ಕಾರ್ಯಕ್ರಮವನ್ನು ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ. ಕುಂದರ್ ಉದ್ಘಾಟಿಸಿದರು. ಸಂಸದ ಕೋಟ ಶ್ರೀನಿವಾಸ ಪೂಜಾರಿ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ನೆರವೇರಿಸಿದರು.
ಸಭೆಯ ಅಧ್ಯಕ್ಷತೆಯನ್ನು ಬ್ರಹ್ಮಾವರ ಕ್ಷೇತ್ರ ಸಮಿತಿ ಅಧ್ಯಕ್ಷ ಗಣೇಶ್ ಪೂಜಾರಿ ವಹಿಸಿದ್ದರು. ಸಹಾಯಧನ, ವಿದ್ಯಾರ್ಥಿ ವೇತನ ವಿತರಣೆಯನ್ನು ಶಬರಿ ಕನ್ಸ್ಟ್ರಕ್ಷನ್, ಕೋಟ ಮುಖ್ಯಸ್ಥ ಸುರೇಶ್ ಕಾಂಚನ್ ಬಾರಿಕೆರೆ ವಿತರಿಸಿದರು.
ಮುಖ್ಯ ಅತಿಥಿಗಳಾಗಿ ಉದ್ಯಮಿಗಳಾದ ಅನಂತ್ ನಾಯಕ್, ಕುಸುಮ ದೇವಾಡಿಗ, ಉಡಪಿ ಜಿಲ್ಲಾಧ್ಯಕ್ಷ ದಯಾನಂದ ಕೋಟ್ಯಾನ್, ಬ್ರಹ್ಮಾವರ ಕ್ಷೇತ್ರ ಸಮಿತಿಯ ಕೋಶಾಧಿಕಾರಿ ವೀಣಾಶ್ರೀ, ಕೋಟ ಸಾಲಿಗ್ರಾಮ ವಲಯ ಸಮಿತಿ ಉಪಾಧ್ಯಕ್ಷ ಪರಮೇಶ್ವರ ಗಾಣಿಗ, ಬ್ರಹ್ಮಾವರ ನಗರ ಸಮಿತಿ ಅಧ್ಯಕ್ಷ ಪವಿತ್ರ ಕುಮಾರ್, ಬಾರ್ಕೂರಿ ವಲಯ ಸಮಿತಿ ಅಧ್ಯಕ್ಷ ಚಂದ್ರ ಪೂಜಾರಿ, ಹಂಗಾರಕಟ್ಟೆ ವಲಯ ಸಮಿತಿ ಅಧ್ಯಕ್ಷ ರವಿ ಸಾಸ್ತಾನ, ಪೇತ್ರಿ ವಲಯ ಸಮಿತಿ ಅಧ್ಯಕ್ಷ ಶ್ರೀಧರ ಆಚಾರ್ಯ, ಕೊಕ್ಕರ್ಣೆ ವಲಯ ಸಮಿತಿ ಕಾರ್ಯದರ್ಶಿ ಶಾರದ, ಕೋಟ ವಲಯ ಸಮಿತಿ ಕೋಶಾಧಿಕಾರಿ ರಮೇಶ್ ಪೂಜಾರಿ, ಉಡುಪಿ ಕ್ಷೇತ್ರ ಸಮಿತಿ ಅಧ್ಯಕ್ಷ ಸುರೇಶ್ ಪಾಲನ್ ಉಪಸ್ಥಿತರಿದ್ದರು.
ಅವಿನಾಶ್ ಕೆ.ಎಸ್. ಸ್ವಾಗತಿಸಿದರು. ಟೈಲರ್ ಅಸೋಸಿಯೇಷನ್ ರಾಜ್ಯ ಸಮಿತಿ ಉಪಾಧ್ಯಕ್ಷ ರಾಮಚಂದ್ರ ಭಂಡಾರಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮವನ್ನು ದೀಪಿಕಾ ನಿರೂಪಿಸಿದರು.

















