ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಎರಡು ಬೈಕ್ಗಳ ಮಧ್ಯೆ ಅಪಘಾತ ಸಂಭವಿಸಿ ಸವಾರರು ಗಾಯಗೊಂಡ ಘಟನೆ ಕುಂದಾಪುರ ನಗರದ ಪನ್ನೀರ್ – ಸಂಗಮ್ ರಸ್ತೆಯಲ್ಲಿ ಇತ್ತೀಚಿಗೆ ಸಂಭವಿಸಿದೆ.
ಗಣೇಶ್ ಪ್ರಭು, ಅಕ್ಷಿತ್, ಸುಜನ್ ಗಾಯಗೊಂಡವರು. ಗಣೇಶ್ ಸಂಗಮ್ ಕಡೆಯಿಂದ ಪನ್ನೀರ್ ಕಡೆಗೆ ಹೋಗುತ್ತಿರುವಾಗ, ಅಕ್ಷಿತ್ ಅವರು ಸುಜನ್ ಅವರನ್ನು ಸಹ ಸವಾರರನ್ನಾಗಿ ಕುಳ್ಳಿರಿಸಿಕೊಂಡು ಪನ್ನೀರ್ ಕಡೆಯಿಂದ ಸಂಗಮ್ ಕಡೆಗೆ ತನ್ನ ಬೈಕ್ ಚಲಾಯಿಸಿಕೊಂಡು ಬಂದು ಗಣೇಶ್ ಅವರ ಬೈಕ್ಗೆ ಡಿಕ್ಕಿ ಹೊಡೆದಿದ್ದಾರೆ ಎನ್ನಲಾಗಿದೆ. ಈ ಪರಿಣಾಮ ಗಣೇಶ್ ತೀವ್ರ ಗಾಯಗೊಂಡು, ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದರು.
ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಿದ ನಂತರ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ತ್ರಿವಿಕ್ರಮ ಪೈ ನೀಡಿದ ದೂರಿನಂತೆ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












