ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಹಳೆಯ ಪಾದರಕ್ಷೆಯನ್ನು ಎಸೆಯುವ ಮೂಲಕ ಪರಿಸರ ಮಾರಕ ಈ ದಿಸೆಯಲ್ಲಿ ಹಳೆಯ ಪಾದರಕ್ಷೆಯ ಒಗ್ಗೂಡಿಸಿ ಮರುಬಳಸುವ ಕಾರ್ಯಯೋಜನೆ ನಿಜಕ್ಕೂ ಶ್ಲಾಘನೀಯ ಎಂದು ಶ್ರೀ ಕೃಷ್ಣಪ್ರಸಾದ್ ಫೌಂಡೇಶನ್ ಪ್ರವರ್ತಕ ಸಂಪತ್ ಕುಮಾರ್ ಶೆಟ್ಟಿ ಹೇಳಿದರು.
ಅವರು ಕೋಟದ ಪಂಚವರ್ಣ ಕಛೇರಿಯಲ್ಲಿ ತಾಲೂಕು ವ್ಯಾಪ್ತಿಯ ಕೋಟದ ಪಂಚವರ್ಣ ಸಂಘಟನೆಯ ಸಂಯೋಜನೆಯೊಂದಿಗೆ ರೋಟರಿ ಸಮುದಾಯದಳ ಕೋಟೇಶ್ವರ,ಹಂಗಾರಕಟ್ಟೆ ದೂಳಂಗಡಿ ಶಾಲೆ,ಚೇತನಾ ಪ್ರೌಢಶಾಲೆ ಮಾಬುಕಳ,ಮಹಿಳಾ ಮಂಡಲ ಪಾಂಡೇಶ್ವರ,ಮಿತ್ರ ಸಂಗಮ ಬೀಜಾಡಿ ಇವರ ಸಹಭಾಗಿತ್ವದಲ್ಲಿ ಉಡುಪಿ ಸಮಾಜಸೇವಕ ಅವಿನಾಶ್ ಕಾಮತ್ ಅವರ ವಿನೂತನ ಯೋಜನೆ ನಡಿಗೆ ಸಾವಿರ ಹೆಜ್ಜೆಗಳಿಗೆ ನಿಮ್ಮ ಕೊಡುಗೆ ಕಾರ್ಯಕ್ರಮದಲ್ಲಿ ಹಳೆಯ ಪಾದರಕ್ಷೆ ಹಸ್ತಾಂತರಿಸಿ ಮಾತನಾಡಿದರು.

ಸಮಾಜಕ್ಕೆ ತಮ್ಮನ್ನು ತಾನು ಸಮರ್ಪಿಸಿಕೊಳ್ಳುವ ಯೋಚನೆ ಹಾಗೂ ಯೋಜನೆ ಅತ್ಯಂತ ಪ್ರಶಂಸನೀಯ ಹಾಗೇ ಪರಿಸರಕ್ಕೆ ಮಾರಕವಾಗುವ ಹಳೆಯ ಪಾದರಕ್ಷೆಯನ್ನು ಸಂಬಂಧಿಸಿದ ಸಂಸ್ಥೆಯ ಮೂಲಕ ನವೀಕರಿಸಿ ಬಡ ಮಕ್ಕಳಿಗೆ ಧಾರೆ ಎರೆಯುವ ಅವಿನಾಶ್ ಕಾಮತ್ ರವರ ಕಲ್ಪನೆ ಹೊಸ ಆಯಾಮಕ್ಕೆ ಮುನ್ನುಡಿ ಬರೆದಿದೆ.ಅಂತಯೇ ಪಂಚವರ್ಣ ಸಂಘಟನೆ ಪರಿಸರಕ್ಕೆ ಪೂರಕವಾಗುವ ಕಾರ್ಯಕ್ರಮಗಳಿಂದ ಜನಮನ್ನಣೆ ಗಳಿಸಿದೆ ಎಂದರು.
ಈ ಸಂದರ್ಭದಲ್ಲಿ ಕಾರ್ಯಕ್ರಮ ಆಯೋಜಕ ಅವಿನಾಶ್ ಕಾಮತ್ ರವರಿಗೆ ಪಂಚವರ್ಣ ಸಂಘಟನೆ ಹಾಗೂ ಸಹಸಂಸ್ಥೆಗಳು ಒಗ್ಗೂಡಿಸಿದ ಒಂದು ಸಾವಿರಕ್ಕೂ ಅಧಿಕ ಹಳೆಯ ಪಾದರಕ್ಷೆಯನ್ನು ಸಾಂಕೇತಿಕವಾಗಿ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಗ್ರೀನ್ ಸೋಲ್ ಫೌಂಡೇಶನ್ ಮುಖ್ಯಸ್ಥ ರಮೇಶ್ ದಾಮಿ, ಸಿಎಸ್ ಆರ್ ಮುಖ್ಯಸ್ಥೆ ವಿನುತಾ ಫರ್ನಾಂಡೀಸ್ ಸಂಸ್ಥೆಯಲ್ಲಿ ಹಳೆದ ಪಾದರಕ್ಷೆಯನ್ನು ಮರುಬಳಸುವ ಕಾರ್ಯಯೋಜನೆ ಪರಿಸರಕ್ಕೆ ಅದರಿಂದಾಗುವ ಪ್ರಯೋಜಗಳ ಬಗ್ಗೆ ವಿವರಿಸಿದರು.
ನಡಿಗೆ ಪಾದರಕ್ಷೆ ಅಭಿಯಾನದ ರೂವಾರಿ ಅವಿನಾಶ್ ಕಾಮತ್ ಯೋಜನೆಯ ರೂಪುರೇಷೆಗಳ ಬಗ್ಗೆ ವಿವರಿಸಿದರು.
ಕಾರ್ಯಕ್ರದಲ್ಲಿ ರೋಟರಿ ಸಮುದಾಯದಳ ಕೋಟೇಶ್ವರ ಅಧ್ಯಕ್ಷ ಸುಪ್ರಿತಾ ಪುರಾಣಿಕ್,ಪಂಚವರ್ಣದ ಗೌರವ ಸಲಹೆಗಾರರಾದ ಪ್ರೇಮಾ ಶೆಟ್ಟಿ,ಪಂಚವರ್ಣ ಸಂಘಟನೆಯ ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ,ಮಹಿಳಾ ಮಂಡಲದ ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್ ಉಪಸ್ಥಿತರಿದ್ದರು. ಪಂಚವರ್ಣ ಸಂಘಟನೆಯ ಸಂಯೋಜಕ ರವೀಂದ್ರ ಕೋಟ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.ಕಾರ್ಯಕ್ರಮವನ್ನು ಮಹಿಳಾ ಮಂಡಲದ ಸಂಚಾಲಕಿ ಸುಜಾತ ಬಾಯರಿ ನಿರೂಪಿಸಿ,ಜೊತೆಕಾರ್ಯದರ್ಶಿ ಶಕೀಲ ನಾಗರಾಜ್ ವಂದಿಸಿದರು.

















