ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಗಾಂಧಿ ಮೈದಾನದಲ್ಲಿ ಕುಂದಾಪುರ ತಾಲೂಕು ವಾಲಿಬಾಲ್ ಅಸೋಸಿಯೇಶನ್ ಹಾಗೂ ಕುಂದಾಪುರ ಫ್ರೆಂಡ್ಸ್ ವಾಲಿಬಾಲ್ ಕ್ಲಬ್ ರಾಷ್ಟ್ರೀಯದಲ್ಲಿ ಜರುಗಿದ ಕೆ.ಎಫ್.ಕೆ ಟ್ರೋಫಿ 2026 ರಾಷ್ಟ್ರ ಮಟ್ಟದ 3 ದಿನಗಳ ವಾಲಿಬಾಲ್ ಪಂದ್ಯಾಟ ಯಶಸ್ವಿಯಾಗಿ ಸಂಪನ್ನಗೊಂಡಿತು.


ಸಾವಿರಾರು ಕ್ರೀಡಾ ಪ್ರೇಕ್ಷಕರ ಅಭೂತಪೂರ್ವ ಸ್ಪಂದನೆ ಹಾಗೂ ಭಾಗವಹಿಸುವಿಕೆಯೊಂದಿಗೆ ಜರುಗಿದ ಈ ಕ್ರೀಡಾ ಹಬ್ಬ ಅದ್ಬೂತ ಯಶಸ್ಸಿಗೆ ಸಾಕ್ಷಿಯಾಯಿತು.

ಫಲಿತಾಂಶ:
ರೋಚಕ ಆಟ ಪ್ರದರ್ಶಿಸಿದ ಕೆ.ಎಸ್.ಇ.ಬಿ (ಕೇರಳ ವಿದ್ಯುಚ್ಛಕ್ತಿ ಮಂಡಳಿ) ತಂಡವು ಪ್ರಥಮ ಸ್ಥಾನದ ಮುಕುಟ ಮುಡಿಗೇರಿಸಿಕೊಂಡಿತು. ಇಂಡಿಯನ್ ನೇವಿ (ಭಾರತೀಯ ನೌಕಾಸೇನೆ) ತಂಡವು ದ್ವಿತೀಯ ಸ್ಥಾನವನ್ನು ಪಡೆದುಕೊಂಡು ಕ್ರೀಡಾಪ್ರೇಮಿಗಳ ಮನ ಗೆದ್ದಿತು.
ಯಶಸ್ವಿ ಆಯೋಜನೆ:
ರಾಷ್ಟ್ರ ಮಟ್ಟದ ಪಂದ್ಯಾಟವನ್ನು ಯಶಸ್ವಿಯಾಗಿ ಆಯೋಜಿಸಿದ, ಕುಂದಾಪುರ ವಾಲಿಬಾಲ್ ಫ್ರೆಂಡ್ಸ್ನ ಕೃಷ್ಣಪ್ರಸಾದ್ ಅಡ್ಯಂತಯ್ಯ ಹಾಗೂ ರಾಜೇಶ್ ಕಾರಂತ್, ಕುಂದಾಪುರ ಫ್ರೆಂಡ್ಸ್ ವಾಲಿಬಾಲ್ ಕ್ಲಬ್ನ ರಾಜೇಶ್ ಕಾವೇರಿ, ರಮಾನಂದ ಕೆ. ಮತ್ತು ಅವರ ಇಡೀ ತಂಡಕ್ಕೆ ಸಲ್ಲುತ್ತದೆ. ದೇಶದ ದಿಗ್ಗಜ ತಂಡಗಳನ್ನು ನಮ್ಮ ಊರಿಗೆ ಕರೆತಂದು ಸ್ಥಳೀಯರಿಗೆ ಅದ್ಭುತ ಉಣಬಡಿಸಿದ ಇವರ ಕಾರ್ಯವೈಖರಿ ನಿಜಕ್ಕೂ ಶ್ಲಾಘನೀಯ. ಮೂರು ದಿನಗಳ ಪಂದ್ಯಾಟದಲ್ಲಿ ಕ್ರೀಡಾ ರಂಜನೆ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಜೋಡಿಸಿಕೊಂಡು ಪಂದ್ಯಾಟವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.

















